ಗುಣಮಟ್ಟದ ಕಾಮಗಾರಿ ಮಾಡಿ ಶಾಸಕ ಬಸನಗೌಡ

ಸಿಂಧನೂರ.ಜು.೨೧- ಮಸ್ಕಿ ಶಾಸಕ ಆರ್.ಬಸನಗೌಡ ತುರ್ವಿಹಾಳ ೩ ಕೋಟಿ ೬೦ ಲಕ್ಷ ರೂ. ಗಳ ವೆಚ್ಚ ರಸ್ತೆ ಡಾಂಬರೀಕರಣ ಕಾಮಗಾರಿಗೆ ಇಂದು ಭೂಮಿ ಪೂಜೆ ನೆರವೇರಿಸಿದರು.
ಮಸ್ಕಿ ತಾಲ್ಲೂಕಿನ ತುರ್ವಿಹಾಳ ಪಟ್ಟಣದ ತುರ್ವಿಹಾಳ ದಿಂದ ಮೈಲಾಪುರ ರಸ್ತೆಯ ೫.ಕೀಲೊ ಮೀಟರ ರಸ್ತೆಯ ಡಾಂಬರೀಕರಣ ಕಾಮಗಾರಿಗೆ ಶಾಸಕ ಆರ್ ಬಸನಗೌಡ ತುರ್ವಿಹಾಳ ಭೂಮಿ ಪೂಜೆ ಮಾಡಿ ಗುತ್ತಿಗೆದಾರರು ನಿಗದಿತ ಸಮಯದೊಳಗೆ ಗುಣಮಟ್ಟದ ಕಾಮಗಾರಿಯ ಮಾಡಬೇಕು ಗ್ರಾಮಸ್ಥರು ಮುಂದೆ ನಿಂತು ಗುಣಮಟ್ಟದ ಕಾಮಗಾರಿಯಾಗುವಂತೆ ನೋಡಿಕೊಳ್ಳಭೇಕು ಎಂದು ಗ್ರಾಮಸ್ಥರಲ್ಲಿ ಮನವಿ ಮಾಡಿಕೊಂಡರು.
ಈ ರಸ್ತೆಯು ಜನರ ಬಹುದಿನಗಳ ಬೇಡಿಕೆ ಯಾಗಿತ್ತು ರಸ್ತೆ ಇಲ್ಲದ ಕಾರಣ ಈ ರಸ್ತೆಯಲ್ಲಿ ಬರುವ ಕ್ಯಾಂಪಗಳ ಸಾರ್ವಜನಿಕರು ತೊಂದರೆ ಯಾಗಿತ್ತು ಮಳೆಗಾಲದಲ್ಲಿ ಜನ ಈ ರಸ್ತೆಯಲ್ಲಿ ತಿರುಗಾಡಲು ನರಕಯಾಥನೆ ಅನುಬವಿಸುತ್ತಿಧ್ದುರು ಸರ್ಕಾರದ ಮೇಲೆ ಒತ್ತಡ ಹಾಕಿ ೬ ಕೋಟಿ ೬೦ ಲಕ್ಷ ಹಣ ಮಂಜುರ ಮಾಡಿಸಿಕೊಂಡು ರಸ್ತೆಯ ಡಾಂಬರೀಕರಣ ಕ್ಕೆ ಚಾಲನೆ ನೀಡಿದ್ದೇನೆ ಎಂದರು.
ಕಾಂಗ್ರೆಸ್ಸ ಪಕ್ಷದ ಮುಖಂಡರಾದ ಮಲ್ಲನಗೌಡ ದೇವರಮನಿ ,ಪಾರುಖುಸಾಬ. ಗೂಳಪ್ನ ಗುಂಟೊಜಿ ಶಾಮೀದಸಾಬ,ಉಮರಸಾಬ,ಬಾಪುಗೌಡ, ಶಂಕರ ಗೌಡ, ಯಲ್ಲಪ್ಪ ಭೋವಿ,ಅಬುಸಾಬ,ಮಹಾಂತೇಶ ಸಜ್ಜನ ಅಬಿಗೌಡ ಮರಿಸ್ವಾಮಿ ನೀರಾವರಿ ಇಲಾಖೆಯ ಂee ಹನುಮಂತಪ್ಪ ಉಮಲೂಟಿ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.