
ಅಥಣಿ : ಮಾ.16ಮತಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಯ ಹಿತದೃಷ್ಟಿಯಿಂದ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಸರ್ಕಾರದಿಂದ ಸಾವಿರಾರು ಕೋಟಿ ರೂಗಳ ಅನುದಾನ ತಂದು ಅಭಿವೃದ್ಧಿ ಕೆಲಸ ಮಾಡಲಾಗಿದ್ದು ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕು ಎಂದು ಶಾಸಕ ಹಾಗೂ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಮಹೇಶ ಕುಮಠಳ್ಳಿ ಅವರು ಎಚ್ಚರಿಕೆ ನೀಡಿದರು,
ಅವರು ತಾಲೂಕಿನ ಶೇಗುಣಸಿ ಗ್ರಾಮದಲ್ಲಿ ಇಂದು 17 ಲಕ್ಷ 75 ಸಾವಿರ ರೂ ವೆಚ್ಚದ ಸರ್ಕಾರಿ ಪ್ರೌಢ ಶಾಲೆಯ 1 ಕೊಠಡಿ ಕಾಮಗಾರಿ, 69 ಲಕ್ಷ ರೂ ವೆಚ್ಚದ ಶೇಗುಣಶಿ (ಕೂಡನಹಳ್ಳದಲ್ಲಿ ಜೆಜೆಎಮ್ ಕಾಮಗಾರಿ, ಬಳವಾಡ ಗ್ರಾಮದಲ್ಲಿ 1 ಕೋಟಿ 50 ಲಕ್ಷ ರೂ ವೆಚ್ಚದ ಜೆಜೆಎಮ್ ಕಾಮಗಾರಿ, 14 ಲಕ್ಷ ರೂ ವೆಚ್ಚದ ಸರ್ಕಾರಿ ಪ್ರಾಥಮಿಕ ಶಾಲೆಯ 1 ಶಾಲಾ ಕೊಠಡಿ ನಿರ್ಮಾಣ ಕಾಮಗಾರಿ, 24 ಲಕ್ಷ ರೂ ವೆಚ್ಚದ ಬಳವಾಡ ಆರ್ ಸಿ ಪ್ಲಾಟನಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ 2 ಕೊಠಡಿಗಳ ಕಾಮಗಾರಿ ಹಾಗೂ ಶಿರಹಟ್ಟಿ ಗ್ರಾಮದಲ್ಲಿ 16 ಲಕ್ಷ 40 ಸಾವಿರ ರೂ ವೆಚ್ಚದ ಶಿರಹಟ್ಟಿ ಗ್ರಾಮದ ಸರ್ಕಾರಿ ಶಾಲೆಯ 1 ಕೊಠಡಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಕಳೆದ ಎರಡು ತಿಂಗಳ ಹಿಂದೆಯೇ ಅಥಣಿ ಕ್ಷೇತ್ರದಿಂದ ನಾನು ಮತ್ತು ಮಹೇಶ ಅವರಲ್ಲಿ ಒಬ್ಬರು ಎಂಎ???, ಒಬ್ಬರು ಎಂಎಲ್‍ಸಿ ಆಗುತ್ತೇವೆ ಎಂದು ಹಿಂದೆಯೇ ಲಕ್ಷ್ಮಣ ಸವದಿ ಸ್ಪಷ್ಟಪಡಿಸಿದ್ದಾರೆ. ಅವರ ಮಾತಿನಂತೆ ಇಬ್ಬರೂ ಒಗ್ಗೂಡಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇವೆ ಯಾರೇ ಅಭ್ಯರ್ಥಿಯಾದರೂ ಬಿಜೆಪಿಗೆ ಗೆಲುವು ಸಾಧಿಸುವ ದೃಷ್ಟಿಯಿಂದ ಕೆಲಸ ಮಾಡುತ್ತೇವೆ” ಎಂದರು
ಈ ಸಂದರ್ಭದಲ್ಲಿ ಗುತ್ತಿಗೆದಾರರಾದ ಕೃಷ್ಣಾ ಇಟ್ನಾಳ, ಮುತ್ತಪ್ಪಾ ಜಮಖಂಡಿ, ಮಹಾಂತೇಶ ಪಾಟೀಲ, ಸಂತೋಷ ಅವತಾಡೆ, ರಮೇಶ ದುಮಾಳೆ, ರವಿ ಐಗಳಿ, ಮುಖಂಡರಾದ ಶ್ರೀಶೈಲ ನಾರಗೊಂಡ, ಕುಮಾರ ಸತ್ತಿಗೌಡರ, ಲಕ್ಷ್ಮಣ ಆಲೂರ, ಸಚಿನ ಕೆಮ್ಮನ್ನವರ, ನಿಂಗಪ್ಪ ನಂದೇಶ್ವರ, ಮೀರಾಸಾಬ ನದಾಫ, ಶಿವಾನಂದ ದೊಡ್ಡಶಿವಣ್ಣವರ, ಸತ್ಯೇಪ್ಪಾ ಭಾವಿ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳಾದ
ಎ ಜೆ ಮುಲ್ಲಾ, ಜಿ ಎಮ್ ಘೊಳಪ್ಪನ್ನವರ, ಕುಡಿಯುವ ನೀರು ವಿಭಾಗದ ಅಧಿಕಾರಿ ರವೀಂದ್ರ ಮುರಗಾಲಿ, ಸೇರಿದಂತೆ ಇತರರು ಉಪಸ್ಥಿತರಿದ್ದರು.