ಗುಣಮಟ್ಟದ ಕಾಮಗಾರಿಯನ್ನು ಮಾಡಿ

ರಾಯಚೂರು,ಮಾ.೦೭- ಇಂದು ಶಕ್ತಿನಗರದಿಂದ ಕಾಡ್ಲೂರು ಗ್ರಾ.ಪಂ ವ್ಯಾಪ್ತಿಯ ಹೋಗುವ ಮಾರ್ಗ ಮಧ್ಯದಲ್ಲಿ ಸೇತುವೆ ನಿರ್ಮಾಣ ಕಾಮಗಾರಿಯನ್ನು ರಾಯಚೂರು ಗ್ರಾಮೀಣ ಕ್ಷೇತ್ರದ ಜನಪ್ರಿಯ ಶಾಸಕರಾದ ಬಸನಗೌಡ ದದ್ದಲ್‌ರವರು ವೀಕ್ಷಣೆ ಮಾಡಿದರು.
ಮಾನ್ಯ ಶಾಸಕರು ಮಾತನಾಡಿ ಗುಣಮಟ್ಟದ ಕಾಮಗಾರಿಯನ್ನು ಮಾಡಲು ಸ್ಥಳದಲ್ಲಿ ಇದ್ದ ಅಧಿಕಾರಿಗಳಿಗೆ ಗುತ್ತಿಗೆದಾರರಿಗೆ ಆದೇಶ ನೀಡಿದರು.
ಇದ್ದರಿಂದಾಗಿ ಸುತ್ತಮುತ್ತಲಿನ ಗ್ರಾಮಸ್ಥರಿಗೂ ಹಾಗೂ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗಲಿದೆ. ಮಾನ್ಯ ಶಾಸಕರರು ಕೆಪಿಸಿ ಅಧಿಕಾರಿಗಳ ಜೊತೆಗೆ ಮಾತನಾಡಿ ಕಾಮಗಾರಿಯನ್ನು ಪ್ರಾರಂಭಿಸದ್ದಾರೆ.
ಈ ಸಂದರ್ಭದಲ್ಲಿ ಕೆ. ಪಂಪಾಪತಿ, ಬಸವರಾಜ ವಕೀಲ ಶ್ರೀನಿವಾಸ್ ಗ್ಯಾಸ್, ರಾಮನಗೌಡ, ಮಹಾದೇವಪ್ಪ ಮಾಸ್ತರ, ಬಷೀರ್,ಅಶೋಕ್,ಜಿಂದಪ್ಪ, ರಮೇಶ್ ರೋಸ್ಲಿ, ಸಾಧಿಕ್, ಮಂಜುನಾಥ,ಕುನಾಲ್ ವಿರೇಶ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.