ಗುಣಮಟ್ಟದ ಕಾಮಗಾರಿಗೆ ಕಟ್ಟುನಿಟ್ಟಿನ ಆದೇಶ

ವಾರ್ಡ್ ೨೬ : ಜೈನ್ ಕಾಲೋನಿ – ೪೦ ಲಕ್ಷ ಕಾಮಗಾರಿಗೆ ಚಾಲನೆ
ರಾಯಚೂರು.ನ.೦೭- ಗುಣಮಟ್ಟದ ಕಾಮಗಾರಿ ಕೈಗೊಳ್ಳದಿದ್ದರೇ ಅಂತಹವರ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡುವ ಎಚ್ಚರಿಕೆಯನ್ನು ಶಾಸಕ ಡಾ.ಶಿವರಾಜ ಪಾಟೀಲ್ ಅವರು ನೀಡಿದರು.
ಅವರಿಂದು ವಾರ್ಡ್ ೨೬ ರ ಜೈನ್ ಕಾಲೋನಿಯಲ್ಲಿ ನಗರಸಭೆ ೧೫ ನೇ ಹಣಕಾಸು ಯೋಜನೆಯಡಿ ೪೦ ಲಕ್ಷ ವೆಚ್ಚದಲ್ಲಿ ಸ್ಟಾರ್ಮ್ ವಾಟರ್, ಪ್ಲೆವರ್ ಬ್ಲಾಕ್, ಓಪೆನ್ ಜಿಮ್ ಹಾಗೂ ಮಕ್ಕಳ ಗಾರ್ಡನ್ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನಂತರ ಮಾತನಾಡಿದರು. ಸ್ವಾತಂತ್ರ್ಯದ ನಂತರ ಇದೇ ಮೊಟ್ಟ ಮೊದಲ ಬಾರಿಗೆ ಈ ಬಡಾವಣೆ ಸರ್ಕಾರದ ಅನುದಾನ ಪಡೆದಿದೆ ಎನ್ನುವುದನ್ನು ಸ್ಮರಿಸುತ್ತಾ, ಇಲ್ಲಿಯ ಜನ ಸರ್ಕಾರಕ್ಕೆ ಪ್ರಾಮಾಣಿಕತೆಯಿಂದ ತೆರಿಗೆ ತುಂಬುವ ನಾಗರೀಕರಾಗಿದ್ದಾರೆ. ಇವರು ಇಲ್ಲಿವರೆಗೂ ಸರ್ಕಾರದ ಯಾವುದೇ ಅನುದಾನ ಕೇಳಿದವರಲ್ಲ.
ಆದರೆ, ಇತ್ತೀಚಿಗೆ ಜೈನ್ ಕಾಲೋನಿಯಲ್ಲಿ ಕೆಲ ಮೂಲಭೂತ ಸೌಕರ್ಯ ಬೇಡಿಕೆ ಮುಂದಿಟ್ಟಿದ್ದರು. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅಧಿಕಾರಾವಧಿಯಲ್ಲಿ ೧೫ ನೇ ಹಣಕಾಸು ಯೋಜನೆಯಡಿ ಬಿಡುಗಡೆಯಾದ ಅನುದಾನದ ಕ್ರಿಯೆಯೋಜನೆ ಸಂದರ್ಭದಲ್ಲಿ ಜೈನ್ ಕಾಲೋನಿಗೆ ಅನುದಾನ ಒದಗಿಸಲಾಗಿತ್ತು. ಒಟ್ಟು ನಾಲ್ಕು ಕಾಮಗಾರಿಗಳನ್ನು ಒಳಗೊಂಡಂತೆ ಅನುದಾನ ನೀಡಲಾಗಿತ್ತು. ಸ್ಟಾರ್ಮ್ ವಾಟರ್ ಪ್ಲೆವರ್ ಬ್ಲಾಕ್, ಓಪೆನ್ ಜಿಮ್ ಹಾಗೂ ಮಕ್ಕಳ ಗಾರ್ಡನ್ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಇಂದು ಈ ಭೂಮಿ ಪೂಜೆ ನೆರವೇರಿಸಲಾಗಿದೆ. ಉದ್ದೇಶಿತ ಈ ಕಾಮಗಾರಿ ಗುಣಮಟ್ಟದಿಂದ ನಡೆಸುವಂತೆ ಆದೇಶಿಸಿದ ಅವರು, ಈ ಜನರು ಯಾವುದನ್ನು ನಿರೀಕ್ಷಿಸುವುದಿಲ್ಲ.
ಆದರೆ, ಈ ಮೂಲಭೂತ ಸೌಕರ್ಯಗಳ ಕಾಮಗಾರಿ ಮಾತ್ರ ಗುಣಮಟ್ಟದಿಂದ ಕೈಗೊಳ್ಳಬೇಕೆನ್ನುವ ಆಪೇಕ್ಷ ಹೊಂದಿದ್ದಾರೆ. ಕಾರಣ ಗಣಮಟ್ಟದಿಂದ ಕಾಮಗಾರಿಯನ್ನು ಕೈಗೊಳ್ಳುವಂತೆ ಸೂಚಿಸಿದ ಅವರು, ಒಂದು ವೇಳೆ ಗುಣಮಟ್ಟದಲ್ಲಿ ವ್ಯತ್ಯಾಸವಾದರೇ, ಅಂತಹವರ ವಿರುದ್ಧ ಕ್ರಮಕ್ಕೆ ಶಿಫಾರಸ್ಸು ಮಾಡುವ ಎಚ್ಚರಿಕೆಯನ್ನು ನೀಡಲಾಯಿತು. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷರಾದ ಈ.ವಿನಯಕುಮಾರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವೈ.ಗೋಪಾಲರೆಡ್ಡಿ, ಅಜಿತ್ ಸೇಠ್, ಶೇಖರ್ ವಾರದ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.