ಗುಣಮಟ್ಟದ ಕಲಿಕೆಗೆ ಸಮುದಾಯದ ಸಹಭಾಗಿತ್ವ ಅಗತ್ಯ

ಚಿತ್ರದುರ್ಗ.ಏ.೧೧: ಮಕ್ಕಳ ಗುಣಮಟ್ಟದ ಕಲಿಕೆಗೆ ಸಮುದಾಯದ ಸಹಭಾಗಿತ್ವ ಮುಖ್ಯವಾದುದು ಎಂದು ಡಯಟ್ ಉಪನ್ಯಾಸಕ ಕೆ.ಜಿ.ಪ್ರಶಾಂತ್ ಹೇಳಿದರು. ನಗರದ ಸರ್ಕಾರಿ ಉನ್ನತ ತರಬೇತಿ ಪ್ರಾಥಮಿಕ ಶಾಲೆಯಲ್ಲಿ  ನಡೆದ ಸಮುದಾಯದತ್ತ ಶಾಲಾ ಕಾರ್ಯುಕ್ರಮದಲ್ಲಿ ಮಕ್ಕಳ ಕಲಿಕೆ ಪ್ರಗತಿ ಪರಿಶೀಲಿಸಿ ಮಾತನಾಡಿದ ಅವರು ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ಸ್ಪಷ್ಟ ಓದು, ಶುದ್ಧ ಬರಹ, ಸಂಖ್ಯಾಜ್ಞಾನದಲ್ಲಿ ಸಾಮರ್ಥ್ಯ ಬೆಳೆಸಿದಾಗ ಉನ್ನತ ಹಂತದ ಶಿಕ್ಷಣದ ಕಲಿಕೆ ಸುಲಭವಾಗುತ್ತದೆ. ಶೈಕ್ಷಣಿಕ ಭಾಗೀದಾರರ ಸಹಕಾರದಿಂದ ಗುಣಮಟ್ಟದ ಕಲಿಕೆ ಉಂಟಾಗುತ್ತದೆ ಎಂದರು. ಉಪನ್ಯಾಸಕ ಎಸ್.ಬಸವರಾಜು ಮಾತನಾಡಿ, ಶಿಕ್ಷಕರು ಪ್ರಯೋಗಾಧಾರಿತ ಚಟುವಟಿಕೆಯಿಂದ ಬೋಧನೆ ಮಾಡುವುದರಿಂದ ವಿದ್ಯಾರ್ಥಿಗಳ ಕಲಿಕೆ ಪರಿಣಾಮಕಾರಿಯಾಗುತ್ತದೆ. ವಿಜ್ಞಾನದ ಪರಿಕಲ್ಪನೆಗಳನ್ನು ಅರ್ಥೈಸಿಕೊಳ್ಳಲು ಕಲಿಕಾ ಸಾಮಗ್ರಿಗಳ ಬಳಕೆ ಮತ್ತು ಪ್ರಯೋಗಾಧಾರಿತ ಬೋಧನೆ ಅವಶ್ಯಕವಾಗಿದೆ. ವಿದ್ಯಾರ್ಥಿಗಳು ಯಾಂತ್ರಿಕವಾಗಿ ಕಲಿಯದೆ ಕಲಿಕಾಂಶಗಳನ್ನು ಸುಲಭವಾಗಿ ಪರಿಣಾಮಕಾರಿಯಾಗಿ ತಿಳಿದುಕೊಳ್ಳಲು ಈ ವಿಧಾನ ಸಹಕಾರಿಯಾಗಿದೆ. ಈ ನಿಟ್ಟಿನಲ್ಲಿ ವಿಜ್ಞಾನ ಶಿಕ್ಷಕ ಸಂತೋಷ್ ಕುಮಾರ್ ತಮ್ಮ ಪಾಠ ಬೋಧನೆಯಲ್ಲಿ ಪ್ರಯೋಗಾಧಾರಿತ ಚಟುವಟಿಕೆ ಅಳವಡಿಸಿಕೊಂಡು ಬೋಧಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ಕಡಿಮೆ ವೆಚ್ಚದಲ್ಲಿ (ಐಔW ಅಔSಖಿ ಓಔ ಅಔSಖಿ) ಮಕ್ಕಳಿಂದಲೇ ವಿಜ್ಞಾನ ವಿಷಯದ ಕಲಿಕಾ ಉಪಕರಣಗಳನ್ನು ತಯಾರಿಸಿರುವುದು ಸಂತಸದ ಸಂಗತಿ ಎಂದರು.ಮುಖ್ಯ ಶಿಕ್ಷಕಿ ಸಿ. ವಿಜಯಲಕ್ಷಿö್ಮ, ಸಹ ಶಿಕ್ಷಕರಾದ ಮುಕ್ತಾಂಬ, ಜೆ.ಟಿ. ಸಂತೋಷ್ ಕುಮಾರ್, ಸಿ.ಎಂ.ಭಾರತಮ್ಮ ಇದ್ದರು.