ಗುಣಮಟ್ಟದ ಆಹಾರ ಪೂರೈಕೆಗೆ ಮಹತ್ವ ನೀಡಿ : ಆಶಪ್ಪ ಪೂಜಾರಿ

ಸೇಡಂ, ಮೇ,24: ವಸತಿ ನಿಲಯದಲ್ಲಿರುವ ಮಕ್ಕಳನ್ನು ಪ್ರೀತಿಯಿಂದ ಕಾಣಿ ಅವರಿಗೆ ಗುಣಮಟ್ಟದ ಆಹಾರ ಸರಬರಾಜು ಮಾಡಬೇಕೆಂದು ಸಹಾಯಕ ಉಪ ವಿಭಾಗಾಧಿಕಾರಿ ಆಶಪ್ಪ ಪೂಜಾರಿ ಹೇಳಿದರು. ಪಟ್ಟಣದಲ್ಲಿರುವ ಮಿನಿ ವಿಧಾನಸೌಧ ಸಮಾಜ ಕಲ್ಯಾಣ ಇಲಾಖೆಯ ಆವರಣದಲ್ಲಿ ಆಯೋಜಿಸಲಾಗಿರುವ ಸಮಾಜ ಕಲ್ಯಾಣ ಇಲಾಖೆ ವಸತಿ ನಿಲಯಗಳಲ್ಲಿ ಸೇವೆ ಸಲ್ಲಿಸುತ್ತಿರುವ ಗ್ರೂಪ್ ಡಿ ಸಿಬ್ಬಂದಿಗಳಿಗೆ ವೃತ್ತಿ ಸಾಮಥ್ರ್ಯ ಅಭಿವೃದ್ಧಿಗಾಗಿ ಒಂದು ದಿನದ ತರಬೇತಿ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು. ಮಕ್ಕಳ ವಿದ್ಯಾಭ್ಯಾಸದ ಕಡೆ ಗಮನಹರಿಸಿ ಅದರ ಜೊತೆಗೆ ಪ್ರತಿನಿತ್ಯ ಒಳ್ಳೆ ಆಹಾರ ನೀಡಿ ಎಂದು ಹೇಳಿದರು. ಈ ವೇಳೆಯಲ್ಲಿ ತಹಸೀಲ್ದಾರ್ ಶಿವಾನಂದ ಮೇತ್ರೆ ತಾಪಂ ಇಓ ಚನ್ನಪ್ಪ ರಾಯಣ್ಣನವರ, ಸಮಾಜ್ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ವಿಜಯಕುಮಾರ್, ಸರ್ಕಾರಿ ನೌಕರರ ತಾಲೂಕಾ ಅಧ್ಯಕ್ಷರಾದ ಶಿವಶಂಕರಯ್ಯ ಸ್ವಾಮಿ ಇದ್ದರು.