ಗುಣಮಟ್ಟದ ಅಡುಗೆ ಮಾಡುವುದಕ್ಕೆ ಆದ್ಯತೆ ನೀಡಿ

ರಾಯಚೂರು.ಮಾ.೨೪-ಶಾಲೆಗಳಲ್ಲಿ ಗುಣಮಟ್ಟದ ಅಡುಗೆ ಮಾಡಲು ಬಿಸಿಯೂಟ ಸಿಬ್ಬಂದಿಯು ಆದ್ಯತೆ ನೀಡಲಿ ಎಂದು ಈರಣ್ಣ ಕೋಸಗಿ ಶಿಕ್ಷಣಾಧಿಕಾರಿಗಳು ಅಕ್ಷರ ದಾಸೋಹ ಜಿಲ್ಲಾ ಪಂಚಾಯತ್ ರಾಯಚೂರ್ ಅವರು ಹೇಳಿದರು.
ನಿನ್ನೆ ನಗರದ ಹಾಶಸ್ಮಮಿಯ ಶಾಲೆಯಲ್ಲಿ ತಾಲೂಕು ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಕಾರ್ಯನಿರ್ವಹಿಸುತಿರುವ ಬಿಸಿ ಊಟ ಸಿಬ್ಬಂದಿಗೆ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು ಸರ್ಕಾರವು ಮಕ್ಕಳಲ್ಲಿ ಅಪೌಷ್ಟಿಕತೆ ದೂರಮಾಡಲು ಶಾಲೆಗಳಲ್ಲಿ ಕ್ಷೀರಭಾಗ್ಯ ಮತ್ತು ಬಿಸಿಯೂಟ ಯೋಜನೆ ಜಾರಿಗೆ ತಂದಿದೆ ಇದು ಮಹತ್ವಕಾಂಕ್ಷೆ ಯೋಜನೆ ಯಾಗಿದೆ ಲಕ್ಷಾಂತರ ಮಕ್ಕಳು ಇದರ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ ಇದನ್ನು ತಯಾರಿಸುವ ಬಹುದೊಡ್ಡ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದ್ದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕ್ಷೇತ್ರಶಿಕ್ಷಣಾಧಿಕಾರಿ ಚಂದ್ರಶೇಖರ್ ದೊಡ್ಮನೆ ಮಾತನಾಡಿ ಉತ್ತಮ ಗುಣಮಟ್ಟ ಸ್ವಚ್ಛತೆಯಿಂದ ಆಹಾರ ತಯಾರಿಸಿ ನೀಡುವುದು ಮೊದಲ ಆದ್ಯತೆಯಾಗಲಿ ಅನೇಕ ಮಕ್ಕಳು ಅಪೌಷ್ಟಿಕತೆಯಿಂದ ಬಳಲುವುದನ್ನು ತಪ್ಪಿಸುವುದು ನಿಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ತಿಳಿಹೇಳಿದರು.
ಕಾರ್ಯಕ್ರಮದ ಉದ್ದೇಶಿಸಿ ಪ್ರಾಸ್ತಾವಿಕ ಮಾತನಾಡಿದ ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕರಾದ ಶಿವಾನಂದ ಬಿರಾದಾರ ಮಾತನಾಡಿ ಮಕ್ಕಳು ಶಾಲೆಗಳಲ್ಲಿ ಅಡುಗೆ ಕೋಣೆಗೆ ಪ್ರವೇಶ ನಿಷೇಧಿಸಲಾಗಿದೆ ಯಾವುದೇ ಕಾರಣಕ್ಕೂ ಮಕ್ಕಳು ಅಡುಗೆ ಕೋಣೆ ಒಳಗೆ ಒಳಗೆ ಬರದಂತೆ ಜಾಗೃತಿ ವಹಿಸಬೇಕು ಆಹಾರ ಧಾನ್ಯಗಳನ್ನು ಸ್ವಚ್ಛ ಮಾಡಿಕೊಂಡು ಆಹಾರ ತಯಾರಿಸಬೇಕು ಸ್ವಚ್ಛತೆ ನಮ್ಮೆಲ್ಲರ ಆದ್ಯತೆಯಾಗಬೇಕು ಎಂದು ತಿಳಿಸಿದರು ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯ ಇಲಾಖೆಯಿಂದ ಆಗಮಿಸಿದ ಡಾ ಲಲಿತಾ ಅಡುಗೆ ಸಿಬ್ಬಂದಿಗೆ ಕೆಲವು ಆರೋಗ್ಯ ವಾಗಿ ಇರೋದಕ್ಕೆ ಕೆಲವು ಸಲಹೆಗಳು ಮತ್ತು ಸೂಚನೆಗಳನ್ನು ನೀಡುವ ಮೂಲಕ ಸಿಬ್ಬಂದಿಗೆ ಜಾಗೃತರಾಗಿ ಇರಬೇಕೆಂದು ತಿಳಿಸಿದರು ಈ ಸಂದರ್ಭದಲ್ಲಿ ತಾಲೂಕಿನ ನೂರಾರು ಬಿಸಿ ಊಟ ಸಹಾಯಕರು ಮತ್ತು ಮುಖ್ಯ ಅಡುಗೆ ಸಿಬ್ಬಂದಿಯವರ ಕಾರ್ಯದಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.