ಗುಡ್ ಬೈ ಚಿತ್ರದ ಫಸ್ಟ್ ಪೋಸ್ಟರ್ ನಲ್ಲಿ ಬಿಗ್ ಬಿ, ರಶ್ಮಿಕಾ ಮಂದಣ್ಣ

ಮುಂಬೈ, ಸೆ ೩- ಬಾಲಿವುಡ್‌ಬಿಗ್‌ಬಿ ಅಮಿತಾಭ್ ಬಚ್ಚನ್, ಹಾಗೂ ರಶ್ಮಿಕಾ ಮಂದಣ್ಣ ಅವರ ಅಭಿಯನದ ಗುಡ್‌ಬೈ ಚಿತ್ರದ ಮೊದಲ ಪೋಸ್ಟರ್ ಬಿಡುಡಗೆಯಾಗಿದೆ.
ಮೊದಲ ಬಾರಿಗೆ ಅಮಿತಾಬ್ ಬಚ್ಚನ್ ಜೊತೆ ನಟಿಸಿರುವ ರಶ್ಮಿಕಾ ಮಂದಣ್ಣ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಅಮಿತಾಭ್ ಬಚ್ಚನ್ ಮತ್ತು ರಶ್ಮಿಕಾ ಮಂದಣ್ಣ ಈ ಚಿತ್ರದಲ್ಲಿ ಜೀವನ, ಕುಟುಂಬ ಮತ್ತು ಸಂಬಂಧಗಳ ಬಗ್ಗೆ ಹೃದಯಸ್ಪರ್ಶಿ ಕಥೆಯನ್ನು ತರಲು ಸಿದ್ಧರಾಗಿದ್ದಾರೆ. ಗುಡ್‌ಬೈ ಚಿತ್ರ ಪ್ರತಿ ಭಾರತೀಯ ಕುಟುಂಬದ ಹೃದಯಸ್ಪರ್ಶಿ ಕಥೆಯಾಗಿದೆ. ಚಿತ್ರದ ಮೊದಲ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ಆಗಿದೆ. ಇದು ಅಮಿತಾಬ್ ಬಚ್ಚನ್ ಮತ್ತು ರಶ್ಮಿಕಾ ಅವರನ್ನು ಸುಂದರವಾದ ತಂದೆ-ಮಗಳ ಕ್ಷಣದಲ್ಲಿ ತೋರಿಸುತ್ತದೆ.
ಚಿತ್ರದ ಮೊದಲ ಪೋಸ್ಟರ್‌ನಲ್ಲಿ ಅಮಿತಾಬ್ ಬಚ್ಚನ್ ಮತ್ತು ರಶ್ಮಿಕಾ ಮಂದಣ್ಣ ಅವರು ಗಾಳಿಪಟ ಹಾರಿಸುತ್ತಿರುವಾಗ ಮಂದಹಾಸದ ನಗುತ ಕಾಣಿಸಿದೆ, ಚಿತ್ರವು ಪ್ರೇಕ್ಷಕರನ್ನು ನಗು, ಉಷ್ಣತೆ ಮತ್ತು ಕಣ್ಣೀರಿನಿಂದ ತುಂಬಿದ ಭಾವನೆಗಳತ್ತ ಕರೆದೊಯ್ಯುತ್ತದೆ. ಬಿಗ್ ಬಿ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ.
ಚಿತ್ರವನ್ನು ಏಕ್ತಾ ಕಪೂರ್ ನಿರ್ಮಿಸಿದ್ದಾರೆ. ವಿಕಾಸ್ ಬಹ್ಲ್ ನಿರ್ದೇಶನದ ಗುಡ್ ಬೈ ಚಿತ್ರದಲ್ಲಿ ಅಮಿತಾಬ್ ಬಚ್ಚನ್, ರಶ್ಮಿಕಾ ಮಂದಣ್ಣ, ಸಾಹಿಲ್ ಮೆಹ್ತಾ, ಶಿವಿನ್ ನಾರಂಗ್ ಮತ್ತು ಪಾವೈಲ್ ಗುಲಾಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರವು ಅಕ್ಟೋಬರ್ ೭, ರಂದು ಚಿತ್ರಮಂದಿರಗಳಲ್ಲಿ ವಿಶ್ವಾದ್ಯಂತ ಬಿಡುಗಡೆಗೆ ಸಿದ್ಧವಾಗಿದೆ.