ಗುಡ್ ಪ್ರೈಡೇ ಆಚರಣೆ

ಸಿರವಾರ.ಮಾ.೨೯- ಶುಭ ಶುಕ್ರವಾರ ದಿನದ ಅಂಗವಾಗಿ ಪಟ್ಟಣದ ಮೆಥೊಡಿಸ್ಟ್ ಕೇಂದ್ರ ಚರ್ಚೆನಲ್ಲಿ ಯೇಸು ಕ್ರಿಸ್ತನು ಶಿಲುಬೆಯ ಮೇಲೆ ಆಡಿದ ಏಳು ಮಾತುಗಳ ಬಗ್ಗೆ ಮಾತನಾಡಿದ ಜಿಲ್ಲಾ ಮೇಲ್ವಿಚಾರಕ ಸನತ್ ಸತೀಶ್ ಕುಮಾರ್, ಯೇಸು ಕ್ರಿಸ್ತನು ಪಾಪಿಗಳ ರಕ್ಷಣೆಗಾಗಿ ಭೂಮಿಗೆ ಬಂದನು, ಮತ್ತು ಅನೇಕ ರೋಗಿಗಳನ್ನು ಸ್ವಸ್ಥ ಮಾಡಲು ಬಂದನು.
ಕಳೆದ ೪೦ದಿನಗಳ ಉಪವಾಸ ದಿನಗಳಲ್ಲಿ ದೇವರಿಗೆ ಪೂಜೆ ಸಲ್ಲಿಸಿ ತಮ್ಮ ಪಾಪಗಳ ಕ್ಷಮಾಪಣೆ ಮಾಡಿದ ಆರಾಧನೆ ಮಾಡಲಾಯಿತು. ಶುಭ ಶುಕ್ರವಾರ ಅಥವಾ ಗುಡ್ ಫ್ರೈಡೆಯನ್ನು ಪ್ರಪಂಚದಾದ್ಯಂತ ಕ್ರೈಸ್ತ ಸಮುದಾಯ ಆಚರಿಸುತ್ತಾರೆ. ಯೇಸುಕ್ರಿಸ್ತನ ಶಿಲುಬೆಗೇರಿಸುವಿಕೆ ನೆನಪಿಟ್ಟುಕೊಳ್ಳಲು ಶುಭ ಶುಕ್ರವಾರ, ಈಸ್ಟರ್ ಭಾನುವಾರದ ನಂತರ ಆಚರಿಸಲಾಗುತ್ತದೆ. ಈ ವರ್ಷ, ಮಾ.೩೧ ರಂದು ಈಸ್ಟರ್ ಭಾನುವಾರದ ಮೊದಲು ಮಾ.೨೯ ರಂದು ದಿನವನ್ನು ಆಚರಿಸಲಾಗುತ್ತದೆ. ಯೇಸುಕ್ರಿಸ್ತನು ಶಿಲುಬೆಗೇರಿಸಿದ ಮೂರು ದಿನಗಳ ನಂತರ ಸತ್ತವರೊಳಗಿಂದ ಪುನರುತ್ಥಾನಗೊಂಡದ್ದನ್ನು ಗೌರವಿಸುವ ಹಬ್ಬವಾಗಿದೆ ಎಂದರು.
ಸಹಾಯಕ ಸಭಾ ಪಾಲಕರು ರಾಜಪ್ಪ. ಕ್ರೈಸ್ತ ಭಾಂದವರು ಇದ್ದರು.