ಗುಡ್ಸಿ ನರಸರೆಡ್ಡಿ ಅವರಿಂದ ಯುವಕರಿಗೆ ಸನ್ಮಾನ

ರಾಯಚೂರು,ಜು.೨೦- ನಗರದ ರಾಜೇಂದ್ರ ಗಂಜ್ ವೃತ್ತದಲ್ಲಿ ಇರುವಂತಹ ಯುವಕರು ಪ್ರತಿ ವರ್ಷದಂತೆ ಈ ವರ್ಷ ಕೂಡ ರಾಯಚೂರುನಿಂದ ತಿರುಪತಿಗೆ ತೆರಳುವ ಮುನ್ನ ಪ್ರತಿ ಗ್ರಾಮಗಳಲ್ಲಿ ಸಸಿಗಳನ್ನು ನೆಟ್ಟು ಸೈಕಲ್ ಯಾತ್ರೆಯ ಮೂಲಕ ತಿರುಪತಿ ತಿರುಮಲ ವೆಂಕಟೇಶ್ವರ ಸ್ವಾಮಿ ದರ್ಶನ ಪಡೆದು ಸುರಕ್ಷಿತವಾಗಿ ನಗರಕ್ಕೆ ಆಗಮಿಸಿರುವ ಯುವಕರಿಗೆ ಜಿಎನ್‌ಆರ್ ಫೌಂಡೇಶನ್ ವತಿಯಿಂದ ಗುಡ್ಸಿ ನರಸರೆಡ್ಡಿ ಅವರು ಸನ್ಮಾಸಿದರು.
ಈ ಸಂದರ್ಭದಲ್ಲಿ ಗುಡ್ಸಿ ನರಸರೆಡ್ಡಿ ಜಿಎನ್‌ಆರ್ ಅವರು ಮಾತನಾಡಿ ನಗರದ ಯುವಕರು ಒಂಬತ್ತು ವರ್ಷಗಳಿಂದ ಸೈಕಲ್ ಯಾತ್ರೆಯಿಂದ ತಿರುಪತಿ ,ತಿರುಮಲ ವೆಂಕಟೇಶ್ವರ ಸ್ವಾಮಿ ದರ್ಶನ ಪಡೆಯುತ್ತಾರೆ. ಮತ್ತು ಪ್ರತಿ ಗ್ರಾಮಗಳಲ್ಲಿ ಸಸ್ಯಗಳು ನೆಡುತ್ತಾರೆ. ತಮ್ಮಲ್ಲಿ ಇರುವ ಭಾರತ ದೇಶದ ಸಂಸ್ಕೃತಿ, ಪರಿಸರ ಪ್ರೇಮಿಗಳು ಮತ್ತು ದೇವರ ಭಕ್ತಿ ನಿಮ್ಮನ್ನು ನೋಡಿ ನನಗೆ ಬಹಳ ಸಂತೋಷಕರವಾಗಿದೆ ಎಂದರು.
ತಿರುಪತಿ ತಿರುಮಲ ವೆಂಕಟೇಶ್ವರ ಸ್ವಾಮಿ ಕೃಪಾ ಆಶೀರ್ವಾಗಳಿಂದ ಎಲ್ಲರಿಗೂ ಒಳ್ಳೆಯ ಆರೋಗ್ಯ, ಐಶ್ವರ್ಯ, ಸಕಲ ಸಂಪತ್ತುಗಳನ್ನು ಕೊಡಲಿ ಮತ್ತು ದೇಶದ ಸೇವೆ ಹಾಗೂ ದೇವರ ಸೇವೆ ಮಾಡುವುದಕ್ಕೆ ಶಕ್ತಿ ಕೊಡಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.