ಗುಡ್ಸಿ ನರಸರೆಡ್ಡಿಗೆ ಬಿಜೆಪಿ ಟಿಕೆಟ್ ನೀಡಲು ಒತ್ತಾಯ

ರಾಯಚೂರು,ಮಾ.೧೨- ಮುನ್ನೂರು ಕಾಪು ಸಮಾಜದ ಮುಖಂಡರಾದ ಗುಡ್ಸಿ ನರಸರೆಡ್ಡಿಯವರಿಗೆ ವಿಧಾನಸಭಾ ಚುನಾವಣೆಯಲ್ಲಿ ರಾಯಚೂರು ನಗರದ ಬಿಜೆಪಿ ಟಿಕೆಟ್ ನೀಡಬೇಕೆಂದು ಜಿಲ್ಲಾ ಮುನ್ನೂರು ಕಾಪು ಸಮಾಜದ ಮುಖಂಡರು ಬಿಜೆಪಿ ರಾಜ್ಯ ಘಟಕದ ಮುಖಂಡರಿಗೆ ಮನವಿ ಪತ್ರ ನೀಡಿ ಒತ್ತಾಯಿಸಿದರು.
ವಿಜಯ ಸಂಕಲ್ಪ ಯಾತ್ರೆ ಸಂಬಂಧ ರಾಯಚೂರು ನಗರಕ್ಕೆ ಆಗಮಿಸಿದ್ದ, ಬಿಜೆಪಿ ರಾಜ್ಯ ಮುಖಂಡರು ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೇಟರ್ ಹಾಗೂ ಬಿ.ಶ್ರೀರಾಮುಲು, ಸಿ.ಟಿ.ರವಿ ಮತ್ತು ಅನೇಕ ರಾಜ್ಯ ಮುಖಂಡರಿಗೆ ಜಿಲ್ಲಾ ಮುನ್ನೂರು ಕಾಪು ಸಮಾಜದ ಮುಖಂಡರು ಮನವಿ ಪತ್ರ ನೀಡಿ ಸಮಾಜದ ಮುಖಂಡರು, ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾದ ಗುಡ್ಸಿ ನರಸರೆಡ್ಡಿ ಯವರಿಗೆ ಈ ಬಾರಿ ಟಿಕೆಟ್ ನೀಡಬೇಕೆಂದು ಮನವಿ ಮಾಡಿಕೊಂಡರು.
ಈ ಹಿಂದೆ ಮುನ್ನೂರು ಕಾಪು ಸಮಾಜದ ಎ. ಪಾಪಾರೆಡ್ಡಿಯವರು ೨೦೦೪ ರಲ್ಲಿ ಮೊದಲ ಭಾರಿಗೆ ಜಿಲ್ಲೆಯಲ್ಲಿ ಬಿಜೆಪಿ ಪಕ್ಷದಿಂದ ಗೆದ್ದಿರುತ್ತಾರೆ, ನಗರ ಕ್ಷೇತ್ರದಲ್ಲಿ ೨೫ಕ್ಕೂ ಅಧಿಕವಾಗಿ ಮುನ್ನೂರು ಕಾಪು ಸಮಾಜದವರು ಇದ್ದಾರೆ. ಹಾಗಾಗಿ ಬಿಜೆಪಿ ಪಕ್ಷದಲ್ಲಿ ಸುಮಾರು ವರ್ಷಗಳಿಂದ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಅವರಿಗೆ ವಹಿಸಿದ ಎಲ್ಲಾ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತ ಜೊತೆಗೆ ಜಿಲ್ಲಾ ಒಬಿಸಿ ಘಟಕದ ಅಧ್ಯಕ್ಷರಾಗಿ ಜನರ ಸೇವೆ ಮಾಡುತ್ತಿರುವ ಗುಡ್ಸಿ ನರಸರೆಡ್ಡಿ ಅವರಿಗೆ ರಾಯಚೂರು ನಗರ ಬಿಜೆಪಿ ಟಿಕೆಟ್ ನೀಡಿದರೆ ಗೆಲುವು ಖಚಿತ ಎಂದು ಸಮಾಜದ ಮುಖಂಡರು ರಾಜ್ಯ ಮುಖಂಡರಿಗೆ ಮನವರಿಕೆ ಮಾಡಿದರು.
ಈ ಸಂಧರ್ಭದಲ್ಲಿ ಮಾಜಿ ಶಾಸಕರಾದ ಎ. ಪಾಪಾರೆಡ್ಡಿ, ಸಮಾಜದ ಮುಖಂಡರಾದ ವೆಂಕಟರೆಡ್ಡಿ, ರಾಳ್ಳ ತಿಮ್ಮರೆಡ್ಡಿ, ಸೂಗೂನೂರು ಪ್ರತಾಪರೆಡ್ಡಿ, ಲಕ್ಷ್ಮಿ ರೆಡ್ಡಿ, ಗಜ್ಜಿ ಪ್ರತಾಪರೆಡ್ಡಿ, ನಾಯನ ನಗರಸಭೆ ಸದಸ್ಯರಾದ ಶ್ರೀನಿವಾಸ್ ರೆಡ್ಡಿ,ಮಾಜಿ ತಾಲೂಕು ಪಂಚಾಯತಿ ಅಧ್ಯಕ್ಷರಾದ ಚಂದ್ರಶೇಖರ್ ಪೊಗಲ್, ಗುಡ್ಸಿ ನಾರಾಯಣರೆಡ್ಡಿ, ಚಂದ್ರಶೇಖರ ರೆಡ್ಡಿ, ಅರ್ಬನ್ ಬ್ಯಾಂಕ್ ಮಾಜಿ ಅಧ್ಯಕ್ಷರಾದ ಎನ್. ಭೀಮರೆಡ್ಡಿ, ಪ್ರತಾಪ್ ರೆಡ್ಡಿ, ಗುಡ್ಸಿ ರಾಜು, ಶೇಖರ್ ರೆಡ್ಡಿ, ರವಿ, ಬಾನುರೆಡ್ಡಿ, ಸತ್ಯರೆಡ್ಡಿ, ಮುನ್ನಿರೆಡ್ಡಿ, ಹಾಗೂ ಮುನ್ನೂರು ಕಾಪು, ಬಲಿಜ ಸಮಾಜದ ಮುಖಂಡರು ಮತ್ತು ಯುವಕರು ಇದ್ದರು.