ಗುಡ್ಡ ಕುಸಿದು ಮೃತಪಟ್ಟ ಮೂವರ ಕುಟುಂಬಕ್ಕೆ ತಲಾ ೫ ಲಕ್ಷ ಪರಿಹಾರ ವಿತರಣೆ


ಬಂಟ್ವಾಳ,ಜು ೧೩- ಪಂಜಿಕಲ್ಲು ಮುಕಡದಲ್ಲಿ ಜುಲೈ ೪ ರಂದು ಗುಡ್ಡ ಜರಿದು ಮಣ್ಣಿನಡಿ ಸಿಲುಕಿ ಮೃತಪಟ್ಟ ಕೇರಳದ ಮೂವರು ಕಾರ್ಮಿಕರಿಗೆ ಸರ್ಕಾರದ ವತಿಯಿಂದ ತಲಾ ೫ ಲಕ್ಷದಂತೆ ಪರಿಹಾರದ ಚೆಕ್ ನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ವಿತರಿಸಿದ್ದಾರೆ.
ರಾಜ್ಯದಲ್ಲಿ ನೆರೆ ಅಧ್ಯಯನ ಪ್ರವಾಸ ಕೈಗೊಂಡು ಕರಾವಳಿಗೆ ಸಿಎಂ ಮಂಗಳವಾರದಂದು ಆಗಮಿಸಿದ್ದಾರೆ. ಈ ವೇಳೆ ಬಂಟ್ವಾಳ ಪ್ರವಾಸಿ ಮಂದಿರದಲ್ಲಿ ಮುಖ್ಯಮಂತ್ರಿಗಳು ಮೃತರ ಕುಟುಂಬಕ್ಕೆ ಪರಿಹಾರ ವಿತರಿಸಿದ್ದಾರೆ.
ಜುಲೈ ೦೫ ರಂದು ಸಂಜೆ ಗುಡ್ಡ ಕುಸಿತದಿಂದಾಗಿ ಹೆನ್ರಿ ಕಾರ್ಲೊ ಎಂಬವರ ಮನೆಯ ರಬ್ಬರ್ ತೋಟದ ಕೆಲಸಕ್ಕೆ ಆಗಮಿಸಿದ್ದ ಕೇರಳ ಮೂಲದ ಮೂವರ ಮೃತಪಟ್ಟಿದ್ದರು. ಪಾಲಕ್ಕಾಡು ನಿವಾಸಿ ವಿಜು(೪೬), ಕೊಟ್ಟಾಂ ನಿವಾಸಿ ಬಾಬು (೪೬) ಸಂತೋಷ್ ಅಲ್ಫೊನ್ಸಾ ಮೃತಪಟ್ಟಿದ್ದರು. ಘಟನೆಯಲ್ಲಿ ಕಣ್ಣೂರು ನಿವಾಸಿ ಜಾನ್(೪೪) ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.