ಗುಡ್ಡ ಕುಸಿತ -ಮನೆಗಳಿಗೆ ಹಾನಿ ಸಂಭವಿಸಿ ಅಪಾರ ನಷ್ಟ

ಸುಳ್ಯ:ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಯ ಪ್ರಮಾಣ ತಗ್ಗಿದ್ದರೂ ಗುಡ್ಡ ಕುಸಿದು ಮನೆಗಳಿಗೆ ಹಾನಿಯಾಗುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದುಅಪಾರ ನಷ್ಟ ಸಂಭವಿಸುತ್ತಿದೆ.
ತೊಡಿಕಾನ ಗ್ರಾಮದ ಕುಂಟುಕಾಡು ಬಳಿ ಪೆರಾಜೆಯ ವ್ಯಾಪಾರೆ ದಾಮೋದರ ಅವರು ಖರೀದಿಸಿದ ಸ್ಥಳದಲ್ಲಿ ಇತ್ತೀಚಿನ ೨ ವರ್ಷಗಳಿಂದ ನೂತನ ಗೃಹ ನಿರ್ಮಾಣ ಮಾಡಿದ್ದು, ಇನ್ನೆರಡು ತಿಂಗಳುಗಳಲ್ಲಿ ಮನೆಯ ಕೆಲಸ ಪೂರ್ತಿಗೊಳಿಸಿ ಮನೆಯ ಗೃಹ ಪ್ರವೇಶ ಮಾಡುವುದೆಂದು ನಿಶ್ಚಯಿಸಿದ್ದರು. ಆದರೆ ಇತೀಚಿನ ಬಾರಿ ಮಳೆಗೆ ಭೂಮಿ ಅದುರಿದಂತಾಗಿ ಮನೆಯ ಹಿಂದಿನ ಬರೆ ಸ್ವಲ್ಪ ಸ್ವಲ್ಪವೇ ಕುಸಿಯುತ್ತಾ ಸೋಮವಾರ ಮತ್ತು ಮಂಗಳವಾರ ಬರೆ ಕುಸಿದು ಹೊಸ ಮನೆ ಬಾಗಶಃ ಹಾನಿಯಾಗಿದ್ದು ಅಪಾರ ನಷ್ಟ ಸಂಭವಿಸಿದೆ.
ಜಾಲ್ಸೂರಿನ ಕಜೆಗದ್ದೆ ಕಾಂಪ್ಲೆಕ್ಸ್ ಹಿಂಬದಿಯಲ್ಲಿ ಬರೆ ಕುಸಿತಗೊಂಡ ಸ್ಥಳಕ್ಕೆ ಎ.ಸಿ. ಗಿರೀಶ್ ನಂದನ್, ತಹಸೀಲ್ದಾರ್ ಕು. ಅನಿತಾಲಕ್ಷ್ಮಿ, ಸುಳ್ಯ ಸರ್ಕಲ್ ಇನ್ಸ್‌ಪೆಕ್ಟರ್ ನವೀನಚಂದ್ರ ಜೋಗಿ ಹಾಗೂ ಅಧಿಕಾರಿಗಳು ಸೋಮವಾರ ಸಂಜೆ ಭೇಟಿ ಪರಿಶೀಲನೆ ನಡೆಸಿದರು.
ಚೆಂಬು ಗ್ರಾಮದ ಕುದ್ರೆಪಾಯ ಕಟ್ಟಪಾರೆ ಜನಾರ್ಧನ ನಾಯ್ಕ ರವರ ಮನೆಯ ಹಿಂಬದಿಯ ಗುಡ್ಡವು ಸೋಮವಾರ ಸಂಜೆ ಕುಸಿದಿದ್ದು ಮನೆಯು ಅಪಾಯದ ಸ್ಥಿತಿಯಲ್ಲಿದೆ. ಮನೆಮಂದಿಯು ಕೆಲವು ದಿನಗಳಿಂದ ಬೇರೆ ಮನೆಗೆ ಸ್ಥಳಾಂತರಗೊಂಡ ಕಾರಣ ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಿಲ್ಲ.
ಜಾಲ್ಸೂರು ಗ್ರಾಮದ ನೆಕ್ರಾಜೆ ಮನೆ ದಿನೇಶ್ ರವರ ಹಟ್ಟಿಯ ಮೇಲೆ ಮರ ಬಿದ್ದು ಹಟ್ಟಿಗೆ ಹಾನಿಯಾದ ಘಟನೆ ಮಂಗಳವಾರ ಘಟನೆ ಸಂಭವಿಸಿದ್ದು ಹಟ್ಡಿಯ ಮಾಡು, ಗೋಡೆಗೆ ಹಾನಿಯಾಗಿದ್ದು, ಹಟ್ಟಿಯಲ್ಲಿ ಕಟ್ಟಿಹಾಕಿದ್ದ ದನಗಳಿಗೆ ಯಾವುದೇ ಅಪಾಯ ಸಂಭವಿಸಿಲ್ಲ.
ಮುಪ್ಪೇರ್ಯ ಗ್ರಾಮದ ಬಾಳಿಲ ಸಹಕಾರಿ ಸಂಘದ ಬಳಿ ನಿವಾಸಿ ಅಬ್ದುಲ್ ರಹಮಾನ್ ಬಿ.ಎ. ಎಂಬವರ ಮನೆಯ ಮುಂಭಾಗದಲ್ಲಿ ಬರೆ ಕುಸಿತಗೊಂಡು ಬೃಹತ್ ಗಾತ್ರದ ಮರಗಳು ಅಂಗಲಕ್ಕೆ ಬಿದ್ದ ಬಿದ್ದಿದೆ.
ಸರಕಾರದ ಯೋಜನೆಯಡಿಯಲ್ಲಿ ನೂತನ ಮನೆ ನಿರ್ಮಾಣಕ್ಕೆ ನೆಲ ಸಮತಟ್ಟು ಮಾಡಿಸಿದ್ದರು. ಆದರೆ ಇತ್ತೀಚೆಗೆ ಸುರಿದ ರಣಭೀಕರ ಮಳೆಗೆ ಇವರ ಸಮತಟ್ಟು ಮಾಡಿಸಿಟ್ಟಿದ್ದ ಜಾಗದ ಮೇಲೆ ಭಾಗದಲ್ಲಿದ್ದ ಬರೆ ಕುಸಿದು ಗುಡ್ಡದಿಂದ ಬೃಹತ್ ಗಾತ್ರದ ಮರಗಳು ಅಂಗಳಕ್ಕೆ ಬಿದ್ದಿದೆ.