
ಅಫಜಲಪುರ:ಜು.26: ತಾಲೂಕಿನ ಗುಡ್ಡೇವಾಡಿ ಗ್ರಾಮದಲ್ಲಿ 2022ನೇ ಸಾಲಿನ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿಯಲ್ಲಿ ಸುಮಾರು 7ಕೋಟಿ 50 ಲಕ್ಷ ರೂ . ಮೊತ್ತದ ರಸ್ತೆ ಕಾಮಗಾರಿಗೆ ಅಡಿಗಲ್ಲು ಸಮಾರಂಭವನ್ನು ಶಾಸಕ ಎಂ.ವೈ.ಪಾಟೀಲ ಅವರು ನೆರವೇರಿಸಿ ಮಾತನಾಡಿದರು.
ಯಾವುದೇ ದೇಶ ಹಾಗೂ ಪ್ರದೇಶ ಅಭಿವೃದ್ಧಿಯಾಗಬೇಕಾದರೆ ರಸ್ತೆ ಸಂಪರ್ಕ ವ್ಯವಸ್ಥೆ ಆಗಬೇಕು ಇದರಿಂದ ವ್ಯಾಪರ ವೈವಾಟಗಳಿಗೆ ಅನುಕೂಲವಾದರೆ ಆ ಹಳ್ಳಿಗಳು ಅಭಿವೃದ್ಧಿಯತ್ತ ಮುಂದೆ ಬರಲು ಸಾಧ್ಯ ಹೀಗಾಗಿ ತಾಲೂಕಿನಲ್ಲಿ ವಿವಿಧ ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ ಕಾಮಗಾರಿಗೆ ಮುಂದಾಗಿದ್ದೇವೆ ಗ್ರಾಮೀಣ ಅಭಿವೃದ್ಧಿಗೆ ನಾನೂ ಮೊದಲ ಆದ್ಯತೆ ನೀಡಲಾಗುತ್ತದೆ ಎಂದರು. ಇದರ ಜೋತೆಗೆ ಗುಣಮಟ್ಟದ ರಸ್ತೆಗಳು ಅಗತ್ಯವಿದೆ ಎಂದರು.
ರಸ್ತೆ ಕಾಮಗಾರಿಯು ಗುಡ್ಡೇವಾಡಿ ಗ್ರಾಮಸ್ಥರ ಬಹು ದಿನದ ಬೇಡಿಕೆಯಾಗಿತ್ತು ಹೀಗಾಗಿ ಕಲ್ಲೂರ ಗ್ರಾಮದಿಂದ ಗುಡ್ಡೇವಾಡಿ ಗ್ರಾಮದವರಿಗೆ ಎರಡು ಕೀ.ಮಿ. ರಸ್ತೆ ಗೆ ಅಡಿಗಲ್ಲು ನೆರವೇರಿಸಲಾಗಿದೆ ಎಂದ ಅವರು ಗ್ರಾಮದಲ್ಲಿ ಕೂಡ ಸಿಸಿ ರಸ್ತೆಗಳು ಅಗತ್ಯವಿದೆ ಅದು ಕೂಡ 70 ಲಕ್ಷ ರೂ. ಮೊತ್ತದ ಕಾಮಗಾರಿ ಹಮ್ಮಿಕೊಳ್ಳಲಾಗಿದೆ ಎಂದರು.
ಗುತ್ತಿಗೆದಾರರು ಗುಣಮಟ್ಟದ ರಸ್ತೆ ನಿರ್ಮಾಣ ಮಾಡಿ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಸವರಾಜ ಚಾಂದಕವಟೆ ಮಾತನಾಡಿ ಶಾಸಕರು ನಮ್ಮೂರಿಗೆ ರಸ್ತೆ ನಿರ್ಮಾಣ ಕಾಮಗಾರಿಗೆ ಅಡಿಗಲ್ಲು ಮತ್ತು ಗ್ರಾಮದಲ್ಲಿ ಸಿಸಿ ರಸ್ತೆಗೆ ಕಾಮಗಾರಿಗೆ ಮುಂದಾಗಿದ್ದು ಸಂತಸ ತಂದಿದೆ ಎಂದರು.
ಈ ಸಂದರ್ಭದಲ್ಲಿ ಪ್ರಥಮ ದರ್ಜೆ ಗುತ್ತಿಗೆದಾರ ಹಾಗೂ ಕಾಂಗ್ರೆಸ್ ಮುಖಂಡ ಎಸ್.ವೈ.ಪಾಟೀಲ ಮಾಜಿ ಜಿಪಂ ಸದಸ್ಯ ಪ್ರಕಾಶ ಜಮಾದಾರ, ಸಿದ್ದಾರ್ಥ ಬಸರಿಗಿಡ, ತಾಪಂ ಮಾಜಿ ಸದಸ್ಯ ಸುಭಾಷ ರೂಗಿ, ಮುಖಂಡರಾದ ಶಿವಾನಂದ ಗಾಡಿ ಸಾಹುಕಾರ, ಗುರುಪಾದಪ್ಪಗೌಡ ಪಾಟೀಲ, ರೈತ ಮುಖಂಡ ಶ್ರೀಮಂತ ಬಿರಾದಾರ,ಶಿವಾನಂದ ತೆಲ್ಕರ್, ಅಂಬೂಜಿ ತೇಲಿ,ಸಿದ್ದು ಅಳ್ಳಗಿ, ಮುತ್ತಪ್ಪ ತೇಲ್ಕರ್, ನಾಗು ಸುತಾರ ಸಿದ್ದು ದಣ್ಣೂರ, ಬಂಡೆಪ್ಪ ಪೂಜಾರಿ, ಸಿದ್ರಾಮ ಪೂಜಾರಿ, ಶರಣಗೌಡ ಪಾಟೀಲ,ಯಲ್ಲಪ್ಪ ನೆಲೋಗಿ, ಪರಮೇಶ್ವರ ಕುಂಬಾರ , ಶಿವರಾಯಗೌಡ ಮಾಲೀಪಾಟೀಲ, ಕಲ್ಲಪ್ಪ ಅಂಕಲಗಿ, ಸಹಾಯಕ ಹೊನ್ನೇಶ ಅಳ್ಳಗಿ, ಪ್ರಥಮ ದರ್ಜೆ ಗುತ್ತಿಗೆದಾರ ಮೊಸೀನ ಪಟೇಲ, ಸೇರಿದಂತೆ ಗ್ರಾಮಸ್ಥರಿದ್ದರು.
ಇದೆ ಸಂದರ್ಭದಲ್ಲಿ ಗ್ರಾಮದಲ್ಲಿ ಮೂಲಸೌಕರ್ಯ ಕಲ್ಪಿಸಿ ಎಂದು ಗ್ರಾಮಸ್ಥರು ಶಾಸಕರಿಗೆ ಮನವಿ ಪತ್ರ ಸಲ್ಲಿಸಿದರು. ಮನವಿ ಪತ್ರವನ್ನು ಗುರು ಚಾಂದಕವಟೆ ಓದಿದರು.
ಕಾರ್ಯಕ್ರಮದಲ್ಲಿ ಗುಡ್ಡೇವಾಡಿ ಗ್ರಾಮಸ್ಥರು ಹಾಗೂ ಕಲ್ಲೂರ, ಹಿಂಚಗೇರಾ, ಘತ್ತರಗಾ ಗ್ರಾಮಸ್ಥರು ಉಪಸ್ಥಿತಿ ಇದ್ದರು.
ಗ್ರಾಪಂ ಸದಸ್ಯ ಅಶೋಕ ಹೂಗಾರ ಸ್ವಾಗತಿಸಿದರು, ನಿರೂಪಣೆ ಚಂದ್ರು ಹೂಗಾರ ಮಾಡಿದರು.
ಗುಡ್ಡೇವಾಡಿ ಗ್ರಾಮ ನನ್ನ ತವರೂರು ಇದ್ದಂತೆ ಕಲ್ಲೂರ ಬೇರೆ ಅಲ್ಲ ಗುಡ್ಡೇವಾಡಿ ಬೇರೆ ಅಲ್ಲ ನೀವೂ ನನಗೆ ಯಾವಗಲೂ ಆಶೀರ್ವಾದ ಮಾಡಿದ್ದಿರೀ ಈ ಗ್ರಾಮಕ್ಕೆ ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಲ್ಲಾ ರೀತಿಯಿಂದ ಸಹಾಯ ಸಹಕಾರ ಹಾಗೂ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಲಾಗುವುದು.
- ಎಂ.ವೈ.ಪಾಟೀಲ ( ಶಾಸಕರು ಅಫಜಲಪುರ)