ಗುಡ್ಡದಲ್ಲಿ ಬೆಂಕಿ: ಗಿಡಮರಗಳು ಭಸ್ಮ

ಲಕ್ಷ್ಮೇಶ್ವರ, ಏ13: ತಾಲ್ಲೂಕಿನ ಕುಂದ್ರಳ್ಳಿ ತಾಂಡಾದ ಗುಡ್ಡ ಮತ್ತು ಛಬ್ಬಿ ಗುಡ್ಡದಲ್ಲಿ ಬುಧವಾರ ಬೆಂಕಿ ಹೊತ್ತಿಕೊಂಡ ಪರಿಣಾಮ ಸಾಕಷ್ಟು ಗಿಡಮರಗಳು ಸುಟ್ಟು ಕರಕಲಾಗಿವೆ. ಶೆಟ್ಟಿಕೇರಿ ನರ್ಸರಿ ಹತ್ತಿರ ಇರುವ ಗುಡ್ಡದ ತಪ್ಪಲಿನಲ್ಲಿ ರೈತರೊಬ್ಬರು ತಮ್ಮ ಹೊಲದಲ್ಲಿನ ಕಸವನ್ನು ಸುಡಲು ಹಚ್ಚಿದ ಬೆಂಕಿಯಿಂದಾಗಿ ಗುಡ್ಡಕ್ಕೆ ಬೆಂಕಿ ಬಿದ್ದಿದೆ ಎಂದು ತಿಳಿದು ಬಂದಿದೆ. ಬೆಂಕಿಯ ಕೆನ್ನಾಲಿಗೆ ಕುರುಚಲು ಕಾಡು ಆಹುತಿಯಾಗಿದೆ.
ಎರಡೂ ಗುಡ್ಡಗಳಲ್ಲಿ ಕಾರಿ, ಬಾರಿಯಂಥ ಮುಳ್ಳಿನ ಕಂಟಿಗಳು ಹೇರಳವಾಗಿ ಬೆಳೆದಿವೆ. ಹೀಗಾಗಿ ಅರಣ್ಯ ಇಲಾಖೆ ಸಿಬ್ಬಂದಿಗೆ ಅಲ್ಲಿಗೆ ಹೋಗುವುದೇ ಕಷ್ಟ. ಆದರೂ ಸಹ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು.