ಗುಡೇಕೋಟೆ : ವನ್ಯಜೀವಿ ಸಪ್ತಾಹ – ಮ್ಯಾರಥಾನ್ ಓಟ.

Bellary SanjevaniAttachments1:56 PM (1 hour ago)
to me


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಅ.8 :- ತಾಲೂಕಿನ ಗುಡೇಕೋಟೆ ವಲಯದ ವತಿಯಿಂದ 69ನೇ ವನ್ಯಜೀವಿ ಸಪ್ತಾಹ ಅಂಗವಾಗಿ ಇಂದು ಬೆಳಿಗ್ಗೆ 7 ಗಂಟೆಗೆ ಮ್ಯಾರಥಾನ್ ಓಟ ನಡೆಸಲಾಯಿತು ಹಾಗೂ ವನ್ಯಜೀವಿಗಳ ರಕ್ಷಣೆ ಕುರಿತಾಗಿ ಜಾಗೃತಿ ಮೂಡಿಸಲಾಯಿತು.
ಸದರಿ ಕಾರ್ಯಕ್ರಮವು ವಿಜಯನಗರ ಜಿಲ್ಲೆಯ ಹೊಸಪೇಟೆ ವಿಭಾಗ, ಕೂಡ್ಲಿಗಿ ಉಪವಿಭಾಗ ಹಾಗೂ ಗುಡೇಕೋಟೆ ವಲಯ ಅರಣ್ಯ ಇಲಾಖೆಯ ಸಹಯೋಗದಲ್ಲಿ ಜರುಗಿದ್ದು  ಈ ದಿನ ಬೆಳಿಗ್ಗೆ 7 ಗಂಟೆಗೆ ತಾಲೂಕಿನ  ರಾಮದುರ್ಗ ಕೆರೆಯಿಂದ ಗುಡೇಕೋಟೆ ಹೊರಗಿನವರೆಗೆ  ಮ್ಯಾರಥಾನ್ ಓಟವನ್ನು ಏರ್ಪಡಿಸಲಾಗಿತ್ತು.
 ಕೂಡ್ಲಿಗಿ ಯ ಜೆ ಸಿಐ ಗೋಲ್ಡನ್ ಮೈದಾನ ಗೆಳೆಯರ ಬಳಗ ಮತ್ತು ರಾಮದುರ್ಗ ಮುಂತಾದ ಹಳ್ಳಿಗಳಿಂದ ಜನತೆ  ಭಾಗವಹಿಸಿದ್ದು ಇಲಾಖೆ  ಸಿಬ್ಬಂದಿಗಳನ್ನು ಸೇರಿ  ಅಂದಾಜು 80 ಜನ ಮ್ಯಾರಥಾನ್ ನಲ್ಲಿ ಭಾಗವಹಿಸಿದ್ದರು.
 ಸದರಿ ಮ್ಯಾರಥಾನ್  ಓಟದಲ್ಲಿ ಗುಡೇಕೋಟೆ  ರಾಜೇಶ್ ಪ್ರಥಮ ಸ್ಥಾನ ಪಡೆದುಕೊಂಡರೆ ಕೂಡ್ಲಿಗಿ ಕೊಟ್ರೇಶ ದ್ವಿತೀಯ ಹಾಗೂ ಡಾ. ಪಿ ಉಮೇಶ ತೃತೀಯ ಸ್ಥಾನ ಪಡೆದುಕೊಂಡಿದ್ದರಿಂದ ಇವರುಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.

One attachment • Scanned by Gmail