ಗುಡೇಕೋಟೆ : ರಸ್ತೆಗೆ ಮುಳ್ಳುಬೇಲಿ, ಸಂಪೂರ್ಣ ಲಾಕ್ ಡೌನ್ ಗೆ ಬೆಂಬಲ

ಕೂಡ್ಲಿಗಿ.ಮೇ. 20 :- ಕೋವಿಡ್ ನ ಎರಡನೇ ಅಲೆಯ ಅಬ್ಬರ ಜೋರಾಗಿದ್ದು ಗ್ರಾಮೀಣ ಪ್ರದೇಶವನ್ನು ಸದ್ದಿಲ್ಲದೇ ಒಳಹೊಕ್ಕು ದಿನದಿಂದ ದಿನಕ್ಕೆ ಸಾವು ನೋವಿನ ಪ್ರಕರಣ ಜಾಸ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನ ಹೋಬಳಿ ಕೇಂದ್ರವಾದ ಗುಡೇಕೋಟೆಯಲ್ಲಿ ಮುಖ್ಯ ರಸ್ತೆಗೆ ಮುಳ್ಳಿನ ಬೇಲಿ ಅಡ್ಡಹಾಕಿ ಸರ್ಕಾರದ ಸಂಪೂರ್ಣ ಲಾಕ್ ಡೌನ್ ಆದೇಶಕ್ಕೆ ಗುಡೇಕೋಟೆ ಗ್ರಾಮಸ್ಥರು ಬೆಂಬಲ ಸೂಚಿಸಿ ಮನೆಯಲ್ಲೇ ಇದ್ದಾರೆ.