ಗುಡೇಕೋಟೆ : ನೂತನ ಶ್ರೀಸಾಯಿಬಾಬಾ ಮಂದಿರ ಪ್ರತಿಷ್ಠಾಪನೆ


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಜು.14 :-  ತಾಲೂಕಿನ ಗುಡೇಕೋಟೆ ಗ್ರಾಮದ ಹೊರವಲಯದಲ್ಲಿ ಗುರುಪೂರ್ಣಿಮೆ ದಿನವಾದ ಬುಧವಾರ ಕೂಡ್ಲಿಗಿ ಮುಖ್ಯರಸ್ತೆಯ ಕೆರೆ ಕೋಡಿ ಹತ್ತಿರ ನೂತನವಾಗಿ ಶ್ರೀ ಶಿರಡಿ ಸಾಯಿಬಾಬಾ ಮೂರ್ತಿ ಪ್ರತಿಷ್ಠಾಪಿಸಿ  ನೂತನ ದೇವಾಲಯ ಕಳಸಾರೋಹಣ ನೆರವೇರಿಸಿ ಉದ್ಘಾಟನೆ ಮಾಡಲಾಯಿತು.
ಶ್ರೀ ಸಾಯಿ ರಾಮ್ ಭಾರತಂ ಸೇವಾ ಸಂಸ್ಥೆ ಟ್ರಸ್ಟ್ ವತಿಯಿಂದ ನೂತನ ಸಾಯಿಬಾಬಾ ಅಮೃತಶಿಲೆ ವಿಗ್ರಹ ಹಾಗೂ ಕಳಸಾರೋಹಣ ಗುರುಪೂರ್ಣಮಿ ಅಂಗವಾಗಿ ಬುಧವಾರ ಬೆಳಗ್ಗೆ ಹೋಮ ಹವನ ನಡೆಯುವ ಮೂಲಕ ಪ್ರತಿಷ್ಠಾಪನೆಗೆ ಚಾಲನೆ ನೀಡಲಾಯಿತು. ಶಿರಡಿ ಸಾಯಿಬಾಬಾ ರವರ ಹಾಗೂ ಭಾರತ ಮಾತೆ ಹಾಗೂ ಶ್ರೀರಾಮನ ಭಾವಚಿತ್ರವನ್ನು ತೆರೆದ ವಾಹನದಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಂಗಳವಾದ್ಯಗಳೊಂದಿಗೆ ನೂರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಮೆರವಣಿಗೆ ನೆರವೇರಿಸಲಾಯಿತು.
ಶ್ರೀ ಸಾಯಿ ಮಂದಿರ ನಿರ್ಮಾಣಕ್ಕಾಗಿ ಶ್ರೀ ಸಾಯಿ ರಾಮ್ ಭಾರತಂ ಸೇವಾ ಸಂಸ್ಥೆ ಟ್ರಸ್ಟ್ ಹಾಗೂ ಭಕ್ತಾದಿಗಳ ಉದಾರ ದೇಣಿಗೆ ನೀಡಿದ್ದು. ಮಂದಿರ ಕೆಳ ಅಂತಸ್ತಿನ ವಿಶಾಲ ಸಭಾಂಗಣ ನಿರ್ಮಾಣಗೊಂಡಿದೆ. ಅಲ್ಲಿ ಧ್ಯಾನ ಮತ್ತು ಧಾರ್ಮಿಕ ಚಟುವಟಿಕೆಗಳು ಇನ್ನು ಮುಂದೆ ನಡೆಯಲಿದೆ. ಮಂದಿರದಲ್ಲಿ ಪ್ರತಿ ಗುರುವಾರ ವಿಶೇಷ  ಹಾಗೂ ಪ್ರತಿ  ಸಂಜೆ ಅರತಿ,  ಅನ್ನದಾನ ನಡೆಯಲಿದೆ ಎಂದು ಟ್ರಸ್ಟ್ ಮುಖ್ಯಸ್ಥರು ತಿಳಿಸಿದರು.
ಈ ಸಂದರ್ಭದಲ್ಲಿ ಶ್ರೀ ಸಾಯಿ ರಾಮ್ ಭಾರತಂ ಸೇವಾ ಸಂಸ್ಥೆ ಟ್ರಸ್ಟಿನ ಅಧ್ಯಕ್ಷ ಜಯಪ್ರಕಾಶ್.ಉಪಾದ್ಯಕ್ಷೆ  ಮಂಗಳಮ್ಮ.ಕಾರ್ಯದರ್ಶಿ ಎನ್.ಕೃಷ್ಣ.ಗೌರವದ್ಯಕ್ಷ ಪಾಲಾಕ್ಷಿ.ಯರ್ರಿಸ್ವಾಮಿ.ಮಹೇಶ್.ಪ್ರಶಾಂತ್.ವಿರುಪಾಕ್ಷಿಪ್ಪ. ತಿಪ್ಪೇಸ್ವಾಮಿ.ಈಶ್ವರ್.ಸೇರಿದಂತೆ ನೂರಾರು ಭಕ್ತರು ಪಾಲ್ಗೊಂಡಿದ್ದರು.

Attachments area