ಗುಡೇಕೋಟೆ ದೇವಸ್ಥಾನದಲ್ಲಿ ಕರಡಿಗಳ ಹಿಂಡು ಪ್ರತ್ಯಕ್ಷ.

ಕೂಡ್ಲಿಗಿ.ಜೂ.8:- ತಾಲೂಕಿನ ಗುಡೇಕೋಟೆಯ ಊರ ಮುಂದಿನ ದೇವಸ್ಥಾನದಲ್ಲಿ ಕರಡಿಗಳ ಹಿಂಡು ಕಳೆದ ಸಂಜೆ ಪ್ರತ್ಯಕ್ಷವಾಗಿದ್ದು ದೇವಸ್ಥಾನ ಪೂಜಾರಿ ಕರಡಿ ಹಿಂಡಿನ ಫೋಟೋ ಸೆರೆಹಿಡಿದಿದ್ದಾರೆ .
ಗುಡೇಕೋಟೆ ಗ್ರಾಮದ ಹತ್ತಿರವಿರುವ ಶ್ರೀಪಂಚಲಿಂಗೇಶ್ವರ ದೇವಾಸ್ಥಾನದ ಹತ್ತಿರ ಸೋಮವಾರ ಸಂಜೆ 7 ಗಂಟೆ ಸುಮಾರಿಗೆ ಕರಡಿಗಳ ಗುಂಪೊಂದು ಪ್ರತ್ಯಕ್ಷವಾಗಿದೆ. ಒಂದು ಕಡೆ ಲಾಕ್ ಡೌನ್ ಹಿನ್ನೆಲೆಯಲ್ಲಿ ಗ್ರಾಮದ ಸುತ್ತಮುತ್ತಲಿನ ಜನರ ಓಡಾಟ ವಿರಳವಾಗಿದೆ. ಹೀಗಾಗಿ ಆಹಾರ ಅರಸಿಕೊಂಡು ಬಂದ ಕರಡಿಗಳ ಹಿಂಡು ದೇವಸ್ಥಾನದಲ್ಲಿ ಇರಿಸಲಾಗಿದ್ದ ದೇವರ ಮುಂದಿನ ನೈವೇದ್ಯ ತಿನ್ನಲು ಬಂದಿದೆ. ದೇವಸ್ಥಾನದ ಪೂಜಾರಿ ತಮ್ಮ ಮೊಬೈಲ್ ನಲ್ಲಿ ಕರಡಿಗಳ ಚಿತ್ರವನ್ನು ಸೆರೆ ಹಿಡಿದಿದ್ದಾರೆ. ಗುಡೇಕೋಟೆ ಭಾಗದಲ್ಲಿ ಹೆಚ್ಚಿನ ಕರಡಿಗಳಿದ್ದು, ಜನರ ಓಡಾಟ ವಿರಳವಾದ ಹಿನ್ನೆಲೆಯಲ್ಲಿ ಗ್ರಾಮದ ಸುತ್ತಮುತ್ತಲಿನಲ್ಲಿ ಕರಡಿಗಳ ಓಡಾಟ ಹೆಚ್ಚಾಗಿದೆ.