ಗುಡೇಕೋಟೆಯಲ್ಲಿ ಹೋಳಿಗೆಮ್ಮ ಹಬ್ಬ ಆಚರಣೆ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜು 20 :-ತಾಲೂಕಿನ ಗುಡೇಕೋಟೆ ಗ್ರಾಮದಲ್ಲಿ ಮಂಗಳವಾರ ಹೋಳಿಗೆಮ್ಮ ಹಬ್ಬವನ್ನು ಗ್ರಾಮದ ಒಳಿತಿಗಾಗಿ  ಭಕ್ತಿಪೂರ್ವಕವಾಗಿ  ಆಚರಿಸಲಾಯಿತು.
ಗ್ರಾಮದಲ್ಲಿ  ಮನೆಗೊಬ್ಬರಂತೆ  ಎಲ್ಲಾ ಸಮುದಾಯದ ಹೋಳಿಗೆ ಮಹಿಳೆಯರು, ಮಕ್ಕಳು ಸೇರಿ ಅನೇಕರು ಹೋಳಿಗೆ ಎಡೆ ಹಿಡಿದು ದೇವಸ್ಥಾನದ ಬಳಿಗೆ ಬಂದು ಗ್ರಾಮಕ್ಕೆ ಒಳಿತಾಗಲೆಂದು ಪ್ರಾರ್ಥಿಸಿದರು. ನಂತರ, ಸಂಜೆ ವೇಳೆಗೆ ಶ್ರೀಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದಿಂದ ಗ್ರಾಮದ ಹೊರವಲಯದ ಸರ್ವೋದಯ ಗ್ರಾಮದ ಗಡಿಭಾಗಕ್ಕೆ ಹೋಳಿಗೆ ಎಡೆಯನ್ನು ಕೊಂಡೊಯ್ದು ಇಟ್ಟು ಪೂಜಿಸಿ ವಾಪಸ್ಸು ಮರಳಿದರು. ಈ ಹಬ್ಬವನ್ನು ಗ್ರಾಮದ ಗೊಂಚಿಗಾರರು, ಶಾನುಭೋಗರು, ಗೌಡ್ರು, ಬಲ್ಲನಾಯಕರು ಸೇರಿ ಎಲ್ಲಾ ಸಮುದಾಯದ ಮುಖಂಡರ ನೇತೃತ್ವದಲ್ಲಿ ನೆರವೇರಿತು.