ಗುಡುದೂರು, ಹಸ್ಮಕಲ್ – ಬಿರುಸಿನ ಮತದಾನ

ಮಸ್ಕಿ.ಡಿ.೨೭- ಎರಡನೇ ಹಂತದ ಗ್ರಾಮ ಪಂಚಾಯತಿ ಚುನಾವಣೆಗೆ ಮತದಾನ ಬಿರುಸಿನಿಂದ ಸಾಗಿದೆ ತಾಲೂಕಿನ ಗುಡುದೂರು, ಹಸ್ಮಕಲ್,ರಂಗಾಪೂರ ಮತಗಟ್ಟೆಗಳಲ್ಲಿ ಮತದಾರರು ಸರದಿಯಲ್ಲಿ ನಿಂತು ಸಂವಿಧಾನಿಕ ಹಕ್ಕು ಚಲಾಯಿಸಿದರು. ಹಸ್ಮಕಲ್ ಗ್ರಾಮ ಸೇರಿದಂತೆ ನಾನಾ ಮತಗಟ್ಠೆಗಳಿಗೆ ಬರುವ ಮತದಾರರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಿದ ನಂತರ ಮತಗಟ್ಟೆ ಒಳಗೆ ಪ್ರವೇಶ ನೀಡಲಾಗುತ್ತಿತ್ತು. ಅಭ್ಯರ್ಥಿಗಳು ಮತ ಗಟ್ಟೆಗಳ ದೂರದಲ್ಲಿ ನಿಂತು ಮತದಾರರ ಬಳಿ ಮತ ಭಿಕ್ಷೆ ಕೇಳುತ್ತಿರುವ ದೃಶ್ಯ ಗಳು ಕಂಡು ಬಂದವು. ಮಧ್ಯಾನ್ಹ ಹೊತ್ತಿಗೆ ಶೇ.೨೮ ರಷ್ಟು ಮತದಾನ ವಾಗಿತ್ತು ಮತಗಟ್ಟೆಗಳ ಬಳಿ ಪೊಲೀಸ್ ಬಂದೋಬಸ್ತ್ ಕೈ ಗೊಳ್ಳಲಾಗಿದೆ.