ಗುಡಿ ಮುಂದೆ ನಿಲ್ಲದೆ ಗ್ರಂಥಾಲಯಕ್ಕೆ ಹೋಗಿ ಅಭ್ಯಾಸ ಮಾಡಿ

ಸಿಂಧನೂರು.ಆ.೨೯-ಕಾನೂನು ಅರಿವು ಮೂಡಿಸಿ ನೆರವು ನೀಡುವುದೆ ಕಾನೂನು ಸೇವಾ ಸಮಿತಿಯ ಕೆಲಸ ಪ್ರತಿ ವರ್ಷ ಒಂದೊಂದು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನ ಸಾಮಾನ್ಯರಿಗೂ ಕಾನೂನು ಅರಿವು ಮೂಡಿಸಿ ನೆರವು ನೀಡುವ ಕೆಲಸ ಮಾಡಲಾಗುತ್ತಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ದೀಪ ಜಿ.ಮನೆರಕರ ಹೇಳಿದರು.
ನಗರದ ೨೩ ನೇ ವಾರ್ಡಿನ ವೆಂಕಟೇಶ್ವರ ಸಮುದಾಯ ಭವನದಲ್ಲಿ ತಾಲೂಕಾ ಸೇವಾ ಸಮಿತಿ ತಾಲೂಕಾ ನ್ಯಾಯವಾದಿಗಳ ಸಂಘ ಹಾಗೂ ಎಚ್.ಮರಿಯಪ್ಪ ವಕೀಲ ಹೆಡಿಗಿಬಾಳ ಚಾರಿಟೇಬಲ್ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಕಾನೂನುಗಳಿಂದ ಯಾರು ವಂಚಿತರಾಗಬಾರದು ಕಾನೂನುಗಳ ಬಗ್ಗೆ ನಿಮ್ಮ ಯಾವುದೆ ರೀತಿಯ ಸಮಸ್ಯೆಗಳಿದ್ದರೆ ಕಾನೂನು ಸೇವಾ ಸಮಿತಿಗೆ ಅರ್ಜಿ ನೀಡಿದರೆ ಸರ್ಕಾರವೆ ವಕೀಲರನ್ನು ನೇಮಕ ಮಾಡಿ ಉಚಿತವಾಗಿ ವಾದ ಮಾಡಿ ನಿಮಗೆ ನ್ಯಾಯ ಒದಗಿಸುವ ಕೆಲಸ ಮಾಡಲಾಗುತ್ತದೆ ಕಾನೂನು ಸೇವಾ ಸಮಿತಿಯ ಸದ್ಬಳಕೆ ಯನ್ನು ಜನ ಮಾಡಿಕೊಳ್ಳುಬೇಕು ಎಂದರು.
ನಿಮ್ಮ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ನ್ಯಾಯಾಲಯ ನಿಮ್ಮ ಬಳಿ ಬಂದಿದೆ ಕಾನೂನಿನ ಬಗ್ಗೆ ನೀವು ತಿಳಿದುಕೊಂಡು ತಿಳಿಯಲಾರದವರಿಗೆ ತಿಳಿಸಿ ಹೇಳಬೇಕು ಎಂದು ಪ್ರದಾನ ಸಿವಿಲ್ ನ್ಯಾಯಾಧೀಶರಾದ ಕೋಟೆಪ್ಪ ಕಾಂಬಳೆ ಹೇಳಿದರು.
ಗುಡಿಯ ಮುಂದೆ ಸಾಲಾಗಿ ನಿಲ್ಲದೆ ಗ್ರಂಥಾಲಯಕ್ಕೆ ಹೋಗಿ ಅಭ್ಯಾಸ ಮಾಡಬೇಕು ಎಂಬ ಡಾಕ್ಟರ್ ಬಿ.ಆರ್. ಅಂಬೇಡ್ಕರ ಮಾತನ್ನು ಉಲ್ಲಂಘಿಸಿ ಜನರಿಗೆ ಅವರು ಹೇಳಿದರು.ಅಪರ ಸಿವಿಲ್ ನ್ಯಾಯಾಧೀಶರಾದ ಆಚಪ್ಪ ದೊಡ್ಡ ಬಸವರಾಜ ತಾಲೂಕಾ ವಕೀಲರ ಸಂಘದ ಅಧ್ಯಕ್ಷರಾದ ಭೀಮನಗೌಡ ವಕೀಲರಾದ ಖಾಜಿಮಲ್ಲಿಕ ಮಹ್ಮದ ವೀರಭದ್ರಪ್ಪ ಸಾಲಗುಂದ ನಿರುಪಾದಪ್ಪ ಗುಡಿಹಾಳ ಶೇಖರಪ್ಪ ದುಮತಿ ದಾವಲಸಾಬ ದೊಡ್ಡ ಮನಿ ಸೇರಿದಂತೆ ಇತರರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.