ದಾವಣಗೆರೆ.ಏ.೩೦: ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾಗರಾಜ್ ಲೋಕಿಕೆರೆ 30 ಮತ್ತು 42ನೇ ವಾರ್ಡಿನಲ್ಲಿ ಬಿರುಸಿನ ಪ್ರಚಾರ ನಡೆಸುವರು. 30ನೇ ವಾರ್ಡಿನ ಆವರೆಗೆರೆಯಲ್ಲಿನ ಶ್ರೀ ಆಂಜನೇಯ ದೇವಸ್ಥಾನದಿಂದ ಮತ ಪ್ರಚಾರ ಆರಂಭಿಸಿ ಅಲ್ಲಿನ ಪ್ರತಿ ಓಣಿ, ಕೇರಿಗಳಲ್ಲಿ ಸಂಚಾರ ನಡೆಸಿ, ಮತಯಾಚಿಸಿದರು. ಗುಡಿಸಲು ವಾಸಿಗಳ ಅಹವಾಲು ಆಲಿಸಿದ ನಾಗರಾಜ್ ಲೋಕಿಕೆರೆ ಅವರು ತಮ್ಮನ್ನು ಈ ಬಾರಿಯ ಚುನಾವಣೆಯಲ್ಲಿ ಬೆಂಬಲಿಸಿ ಆಶೀರ್ವಾದ ನೀಡಿದರೆ ನಮ್ಮ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಸೂರು ಕಲ್ಪಿಸುವ ಜೊತೆಗೆ ಜೀವನಕ್ಕೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು.ಸಂಜೆ 42ನೇ ವಾರ್ಡಿನ ಸಿದ್ದವೀರಪ್ಪ ಬಡಾವಣೆ ಬಾಪೂಜಿ ಶಾಲೆ ಬಳಿ ಇರುವ ಶ್ರೀ ಗಣಪತಿ ದೇವಸ್ಥಾನದಿಂದ ಮತಯಾಚಿಸಿದರು.ವಾರ್ಡ್ ನಂ 30ರ ಅಧ್ಯಕ್ಷ ಮಂಜಣ್ಣ, ಬೂತ್ ಅಧ್ಯಕ್ಷರಾದ ಮುರುಗೇಶ್, ಪ್ರಕಾಶ್, ನಗರ ಪಾಲಿಕೆ ಮಾಜಿ ಸದಸ್ಯ ಸುರೇಶ, ಮಹಾದೇವಣ್ಣ, ಚಂದ್ರಣ್ಣ, ಪಿ. ಕೇಶವನ್, ಗೋಶಾಲೆ ಸುರೇಶ, ಅಜ್ಜನ್ ಗೌಡ ಸೇರಿದಂತೆ ಬಿಜೆಪಿ ಮುಖಂಡರು, ಕಾರ್ಯಕರ್ತರು, ಬೆಂಬಲಿಗರು ನಾಗರಾಜ್ ಲೋಕಿಕೆರೆ ಪರ ಮತಯಾಚಿಸಿದರು.