ಗುಡಿಸಲು ಮುಕ್ತ ಗ್ರಾಮವನ್ನಾಗಿ ಮಾಡುವೆ

ಚಾಮರಾಜನಗರ, ಮೇ.01- ನನ್ನನ್ನು ಗೆಲ್ಲಿಸಿದರೆ ನಿಮ್ಮ ಗ್ರಾಮವನ್ನು ಗುಡಿಸಲು ಮುಕ್ತ ಗ್ರಾಮವನ್ನಾಗಿ ಮಾಡುತ್ತೇನೆ ಎಂದು ವಸತಿ ಸಚಿವ ಹಾಗೂ ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಮನವಿ ಮಾಡಿದರು.
ಅವರು ಕ್ಷೇತ್ರದ ಚುನಾವಣಾ ಪ್ರಚಾರದಲ್ಲಿರುವ ಅಭ್ಯರ್ಥಿ ವಿ. ಸೋಮಣ್ಣ ಭಾನುವಾರ ಮತಕ್ಷೇತ್ರದ ವ್ಯಾಪ್ತಿಗೆ ಬರುವ ತಾವರಕಟ್ಟೆ ಮೋಳೆಗೆ ಬರುತ್ತಿದ್ದಂತೆ ಗ್ರಾಮಸ್ಥರು ಭಾರಿ ಗಾತ್ರದ ಸೇಬಿನ ಹಾರ ಹಾಕಿ, ಪುಷ್ಪವೃಷ್ಟಿ ಸುರಿಸಿ ಸ್ವಾಗತ ಕೋರಿದರು.
ಗ್ರಾಮದಲ್ಲಿ ಉಪ್ಪಾರ ಸಮುದಾಯವೇ ಹೆಚ್ಚಿರುವ ಹರದನಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಗೆ ಬರುವ ತಾವರಕಟ್ಟೆ ಮೋಳೆ ಗ್ರಾಮದ ಮುಖ್ಯದ್ವಾರಕ್ಕೆ ಪ್ರಚಾರ ವಾಹನ ಬರುತ್ತಿದ್ದಂತೆ ಕ್ರೇನ್ ಮೂಲಕ ಸೇಬಿನ ಹಾರವನ್ನು ಹಾಕುವ ಜೊತೆಗೆ ಬಿಜೆಪಿ ಮುಖಂಡರ ಮೇಲೆ ಹೂವಿನ ಸುರಿಮಳೆಗೈದರು. ಅಲ್ಲಿಂದ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ, ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ, ನಿಮ್ಮಲ್ಲರ ಪ್ರೀತಿ ವಿಶ್ವಾಸಕ್ಕೆ ನಾನು ಬದ್ದನಾಗಿದ್ದು, ನಿಮ್ಮ ಒಂದು ಮತ ಕ್ಷೇತ್ರವನ್ನು ಬದಲಾಯಿಸುವ ಶಕ್ತಿಯನ್ನು ಹೊಂದಿದೆ. 15 ವರ್ಷದಿಂದ ಒಬ್ಬರನ್ನು ಶಾಸರಕನ್ನಾಗಿ ನೋಡಿದ್ದೀರಿ. ಒಂದು ಬಾರಿ ಸೋಮಣ್ಣನಿಗೆ ಅಧಿಕಾರ ಕೊಟ್ಟು ನೀಡಿ. ನಿಮ್ಮ ಗ್ರಾಮಕ್ಕೆ ಸೂಕ್ತ ಮೂಲಭೂತ ಸೌಲಭ್ಯವಿಲ್ಲದೇ ಜನರು ಪರಿತಪ್ಪಿಸುತ್ತಿದೆ. ಚರಂಡಿ, ರಸ್ತೆಗಳು ಸರಿಯಿಲ್ಲ. ನಿಮ್ಮ ಗ್ರಾಮದ ಮುಖಂಡ ಮಹೇಶ್ ಚಿಕ್ಕವನಿದ್ದರು. ಬಹಳ ಛಲಗಾರ. ಹೆಚ್ಚಿನ ಬಹುಮತವನ್ನು ನೀಡಬೇಕು. ಸ್ವಾಗತಕ್ಕಿಂತ ಬೂತ್‍ನಲ್ಲಿ ಕಮಲದ ಬಟನ್ ಒತ್ತುವ ಮೂಲಕ ಪ್ರತಿ ಮತವು ಸಹ ನಿಮ್ಮ ಗ್ರಾಮದತ್ತ ರಾಜ್ಯವೇ ನೋಡುವಂತೆ ಮಾಡುತ್ತೇನೆ. ಗುಡಿಸಲು ಮುಕ್ತ ಹಾಗೂ ಉದ್ಯೋಗವನ್ನು ಸೃಷ್ಟಿ ಮಾಡುವ ಗುರಿ ನಮ್ಮದಾಗಿದೆ. ಹೀಗಾಗಿ ಬಿಜೆಪಿಗೆ ಮತ ನೀಡಿ ಎಂದು ಸೋಮಣ್ಣ ಮನವಿ ಮಾಡಿದರು.
ಗ್ರಾ.ಪಂ.ಸದಸ್ಯ, ಎಪಿಎಂಸಿ ನಿರ್ದೇಶÀಕ ಹಾಗೂ ಬಿಜೆಪಿ ಹಿಂದುಳಿದ ಮೋರ್ಚಾ ಮಂಡಲದ ಅಧ್ಯಕ್ಷ ತಾವರಕಟ್ಟೆ ಮೋಳೆ ಮಹೇಶ್ ಮಾತನಾಡಿ ಕಳೆದ ಚುನಾವಣೆಯಲ್ಲಿ ಬಿಜೆಪಿಗೆ ನಮ್ಮ ಗ್ರಾಮದಲ್ಲಿ ಹೆಚ್ಚಿನ ಬಹುಮತ ಕೊಟ್ಟಿದ್ದೇವೆ.
ಈ ಸಾರಿ ಸೋಮಣ್ಣ ಅವರು ನಮ್ಮ ಕ್ಷೇತ್ರಕ್ಕೆ ಬಂದಿರುವುದು ಪುಣ್ಯ ಹೀಗಾಗಿ ಗ್ರಾಮದಲ್ಲಿ ಹೆಚ್ಚಿನ ಮತ ಕೊಟ್ಟು ಸೋಮಣ್ಣ ಅವರು ಚಾ.ನಗರ ಹಾಗು ವರುಣಾ ಎರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಎಂ. ರಾಮಚಂದ್ರ, ಪ್ರೊ. ಕೆ.ಆರ್. ಮಲ್ಲಿಕಾರ್ಜುನಪ್ಪ, ಕೂಡ್ಲುರು ಹನುಮಂತಶೆಟ್ಟಿ, ಮಂಗಲ ಶಿವಕುಮಾರ್, ಚಾಮುಲ್ ನಿರ್ದೇಶಕ ಎಚ್.ಎಸ್. ಬಸವರಾಜು, ಕಿಲಗೆರೆ ಶಶಿಕುಮಾರ್, ಉಡಿಗಾಲ ಕುಮಾರಸ್ವಾಮಿ, ಮಂಡಲದ ಅಧ್ಯಕ್ಷ ಬಸವಣ್ಣ, ಕೆ. ವೀರಭದ್ರಸ್ವಾಮಿ, ಮೊದಲಾಧವರು ಇದ್ದರು.