ಗುಡಿಸಲು ಬೆಂಕಿಗಾಹುತಿ

ಯಾದಗಿರಿ:ಫೆ.26: ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಹೊರಭಾಗದ ಸಾಯಿನಗರದಲ್ಲಿ ಸಿಲಿಂಡರ್? ಸ್ಫೋಟಗೊಂಡು ಆಂಧ್ರ ಮೂಲದ ಟಿ.ಮಧು ಅವರಿಗೆ ಸೇರಿದ್ದ ಗುಡಿಸಲು ಬೆಂಕಿಗಾಹುತಿಯಾಗಿದೆ.
ಸ್ನಾನ ಮಾಡಲು ನೀರು ಕಾಯಿಸಲು ಇಟ್ಟಾಗ ಸಿಲಿಂಡರ್ ಬ್ಲಾಸ್ಟ್ ಆಗಿದೆ. ನೀರು ಕಾಯಿಸಲು ಸಿಲಿಂಡರ್? ಇಟ್ಟು ಮಧು ಹೊರಗಡೆ ಬಂದಿದ್ದ. ಹೀಗಾಗಿ ಪ್ರಾಣಾಪಯದಿಂದ ಪಾರಾಗಿದ್ದಾರೆ. ಗುಡಿಸಲು ಪಕ್ಕದಲ್ಲಿರುವ ಓರ್ವ ವ್ಯಕ್ತಿಗೆ ಗಾಯವಾಗಿದೆ.
2 ಲಕ್ಷ ನಗದು ಭಸ್ಮ:
ಲಕ್ಷಾಂತರ ಬೆಲೆ ಬಾಳುವ ವಸ್ತುಗಳು ಬೆಂಕಿಗಾಹುತಿಯಾಗಿ ಎರಡು ಲಕ್ಷ ರೂ. ನಗದು ಸುಟ್ಟು ಭಸ್ಮವಾಗಿದೆ. ಮಗಳ ಆಪರೇಷನ್ ಮಾಡಿಸಲು ಮಧು ಹಣ ತಂದಿಟ್ಟಿದ್ದ.ಇಂದು ಬೆಳಗ್ಗೆ ಮಗಳ ಆಪರೇಷನ್ ಮಾಡಿಸಲು ಕೊಪ್ಪಳದ ಗಂಗಾವತಿಗೆ ತೆರಳಬೇಕಿತ್ತು. ಆದರೆ ಸಿಲಿಂಡರ್ ಸ್ಫೋಟದಿಂದ ಗುಡಿಸಲು ಬೆಂಕಿಗಾಹುತಿಯಾಗಿ ಅಪಾರ ಹಾನಿಯಾಗಿದೆ.
ಘಟನಾ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಕೆಂಭಾವಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.