ಗುಡಿಸಲಿಗೆ ಬೆಂಕಿ-ಮಾನಪ್ಪ ನಾಯಕ ಭೇಟಿ

ಸಿರವಾರ.ಜ.೧೪-ಆಕಸ್ಮಿಕವಾಗಿ ಗುಡಿಸಲಿಗೆ ಬೆಂಕಿ ತಗುಲಿ ಗುಡಿಸಲು ಭಸ್ಮವಾದ ಘಟನೆ ತಾಲೂಕಿನ ಹೀರಾ ಗ್ರಾ.ಪಂ ವ್ಯಾಪ್ತಿಯ ಹುಡಾ ಗ್ರಾಮದಲ್ಲಿ ಜರುಗಿದೆ. ಹುಡಾ ಗ್ರಾಮದ ಪದ್ಮಾವತಿ ಎನ್ನುವವರ ಗುಡಿಸಲು ಬೆಂಕಿಯಿಂದ ಸುಟ್ಟಿದೆ. ಅಪಾರ ಪ್ರಮಾಣದ ದವಸ ಧಾನ್ಯ, ಬಟ್ಟೆ, ಕೊಳಿ, ಹಣ ಒಡವೆಗಳು ಬೆಂಕಿಯಲಿ ಸುಟ್ಟು ಹೊಗಿವೆ. ಸುದ್ದಿ ತಿಳಿದು ಬಿಜೆಪಿ ಮುಖಂಡ ಮಾನಪ್ಪ ನಾಯಕ ಅವರು ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿ ಸಹಾಯ ಮಾಡಿದ್ದರು.