ಗುಡಿಗುಂಟಿ ಮರಿಸ್ವಾಮಿ ಜಾತ್ರಾ ಮಹೋತ್ಸವ

ಸತ್ಸಂಗ ಜೀವನ ದರ್ಶನದ ಪ್ರವಚನ
ರಾಯಚೂರು, ಮಾ.೨೮- ಗುಡಿಗುಂಟಿ ಮರಿಸ್ವಾಮಿ ತಾತನವರ ಜಾತ್ರೆ ಮಹೋತ್ಸವವು ಮಾ.೨೯ ರಿಂದ ೩೦ ವರೆಗೆ ನಡಯಲಿದ್ದು ಜಾತ್ರೆ ಮಹೋತ್ಸವ ಅಂಗವಾಗಿ ಸತ್ಸಂಗ ಜೀವನ ದರ್ಶನದ ಪ್ರವಚನ ಆಯೋಜಿಸಲಾಗಿದೆ ಎಂದು ಸದಾನಂದ ಶಿವಾಚಾರ್ಯ ಸ್ವಾಮಿ ಅವರು ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಯಚೂರು ನಗರದ ಆಫೀಸರ್ ಕಾಲೋನಿಯಲ್ಲಿ ಬರುವ ಗುಡಿಗುಂಟಿ ಮರಿಸ್ವಾಮಿ ತಾತನವರ ಮಠ
೧೦೦ ವರ್ಷ ಇತಿಹಾಸ ಹೊಂದಿದೆ. ಆದರೆ ದೇವಸ್ಥಾನದ ಪಾರಂಪರಿಕ ಸ್ಥಗಿತಗೊಂಡಿತ್ತು ಕಳೆದ ೨೫ ವರ್ಷಗಳಿಂದ ಜಾತ್ರಾ ಮಹೋತ್ಸವ ಮುಂದುವರಿಸುತ್ತ ಬಂದಿದ್ದೇವೆ ಎಂದರು.
ಪ್ರತಿ ವರ್ಷದಂತೆ ಈ ವರ್ಷವೂ ಕೂಡ ವಿಜೃಂಭಣೆಯಿಂದ ಜಾತ್ರೆ ಮಹೋತ್ಸವ ನೆರೆವೇರಿಸಲಾಗುವುದು. ಎರಡು ದಿನಗಳ ಕಾಲ ನಡೆಯುವ ಈ ಜಾತ್ರಾ ಮಹೋತ್ಸವದಲ್ಲಿ ರುದ್ರಾಭಿಷೇಕ, ಪ್ರತ್ಯಂಗರ ಹೋಮ,ದೀಪೋತ್ಸವ, ಹಲವಾರು ಧಾರ್ಮಿಕ ಕಾರ್ಯಕ್ರಮ ಸೇರಿದಂತೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು. ಹರಗುರು ಚರಮೂರ್ತಿಗಳ ದಿವ್ಯಾ ಸನ್ನಿದಿಯಲ್ಲಿ ರಥೋತ್ಸವ
ನೆರೆವೇರಿಸಲಾಗುವುದು ಎಂದರು.
ಜಾತ್ರಾ ಮಹೋತ್ಸವ ಹೆಚ್ಚಿನ ಸಂಖ್ಯೆಯಲ್ಲಿ ಸುತ್ತ ಮುತ್ತಲಿನ ಭಕ್ತಾದಿಗಳು ಆಗಮಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರರು.
ಈ ಸಂದರ್ಭದಲ್ಲಿ ವಾಯುದೇವ ಶಿವಾಚಾರ್ಯ, ಮಲ್ಲಿಕಾರ್ಜುನ ಇದ್ದರು.