ಗುಡಾನ್ನ ಮಾಡುವ ವಿಧಾನ

ಬೇಕಾಗುವ ಸಾಮಗ್ರಿ
ಅಕ್ಕಿ-1 ಕಪ್‌ ಬೆಲ್ಲ-3 ಕಪ್‌
ಬಾಳೆಹಣ್ಣು-2, ತುಪ್ಪ-ಕಾಲು ಕಪ್‌
ಗೋಡಂಬಿ, ದ್ರಾಕ್ಷಿ, ಏಲಕ್ಕಿ ಪುಡಿ-ಅರ್ಧ ಚಮಚ.
ಬಾದಾಮಿ, ಖರ್ಜೂರದ ತುಂಡುಗಳು-ತಲಾ 25 ಗ್ರಾಂ,
ವಿಧಾನ: ಅಕ್ಕಿಯಿಂದ ಅನ್ನ ಮಾಡಿ ಇಡಿ. ಬಾಣಲೆಗೆ ನೀರು ಹಾಕಿ ಬಿಸಿ ಮಾಡಿ. ಇದರಲ್ಲಿ ಬೆಲ್ಲವನ್ನು ಕರಗಿಸಿ ಎಳೆ ಪಾಕ ಮಾಡಿ. ಇದಕ್ಕೆ ಬಾಳೆಹಣ್ಣಿನ ಚೂರುಗಳು, ಅನ್ನ ಮತ್ತು ತುಪ್ಪ ಹಾಕಿ ತಿರುವಿ. ಎರಡ್ಮೂರು ನಿಮಿಷದ ನಂತರ ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿ, ಖರ್ಜೂರದ ತುಂಡು ಮತ್ತು ಏಲಕ್ಕಿ ಪುಡಿ ಹಾಕಿ ತಿರುವಿ ಕೆಳಗಿಳಿಸಿ.