ಗುಡದಿನ್ನಿ ಕನಕದಾಸ ಜಯಂತಿ ಆದರ್ಶಗಳನ್ನು ಅಳವಡಿಸಿಕೊಳಬೇಕು- ಶರಣಯ್ಯನಾಯಕ

ಸಿರವಾರ.ನ.೧೩- ದಾಸ ಶ್ರೇಷ್ಠ ಕನಕದಾಸರ ಸಾಹಿತ್ಯ, ತತ್ವ ಮತ್ತು ಆದರ್ಶಗಳು ಇಂದಿನ ಯುವ ಪೀಳಿಗೆಯ ಜನರಿಗೆ ಮಾದರಿಯಾಗಿವೆ. ಯುವ ಜನರು ಅವರ ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಕಾಂಗ್ರೆಸ್ ಯುವ ಮುಖಂಡ ಶರಣಯ್ಯನಾಯಕ ಕೆ ಗುಡದಿನ್ನಿ ಹೇಳಿದರು. ತಾಲೂಕಿನ ಕೆ.ಗುಡದಿನ್ನಿ ಗ್ರಾಮದಲ್ಲಿ ಕನಕದಾಸ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು ದಾಸರಲ್ಲಿ ಅತ್ಯಂತ ಶ್ರೇಷ್ಠ ದಾಸರು ಕನಕದಾಸರು. ನಮ್ಮ ನಾಡು ಕಂಡ ದಾಸ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ ತತ್ವಜ್ಞಾನಿ ಹಾಗೂ ಸಮಾಜ ಸುಧಾರಕರು.
ಜಾತಿ ತಾರತಮ್ಯ ಹೋಗಲಾಡಿಸಿ ವಿಶ್ವ ಮಾನವ ಕಲ್ಪನೆ ಹೊಂದಿದ್ದ ಮಾನವೀಯ ಗುಣಗಳನ್ನು ಪ್ರತಿಪಾದಿಸಿ, ಸಮಾನತೆಯನ್ನು ಸಾರಿದ ಮಹಾನ್ ಚೇತನ, ಕನಕದಾಸರು ಪರಿವರ್ತನೆಯ ಹರಿಕಾರರು, ತಮ್ಮ ರಾಜಸತ್ವವನ್ನು ಬಿಟ್ಟು, ಅವರು ದಾಸಶ್ರೇಷ್ಠರಾಗಿದ್ದಾರೆ ಎಂದರು. ಗ್ರಾಮದ ಮುಖಂಡರಾದ ಬಜ್ಜಣ್ಣ, ರಮೇಶ್ ನಾಯಕ, ಬೂದೆಪ್ಪ ನಾಯಕ, ವೀರಯ್ಯಸ್ವಾಮಿ, ನಾಗಪ್ಪ ಯಾದವ್, ಬಸವರಾಜ ನಾಯಕ ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷರು.ಸದಸ್ಯರು ಭಾಗವಹಿಸಿದ್ದರು.