ಗುಟಕಾ ಘಟಕದ ಮೇಲೆ ದಾಳಿ20 ಲಕ್ಷ ಮೌಲ್ಯದ ನಕಲಿ ಗುಟುಕಾ ಜಪ್ತಿ, 20 ಜನರ ಬಂಧನ

ಕಲಬುರಗಿ,ಜು.2-ನಗರ ಹೊರವಲಯದ ಬೇಲೂರು ವಸಾಹತು ಪ್ರದೇಶದಲ್ಲಿರುವ ಹಳೆಯ ಕಟ್ಟಡ ಒಂದರಲ್ಲಿ ನಕಲಿ ಗುಟುಕಾ ತಯಾರಿಸುತ್ತಿದ್ದ ಘಟಕದ ಮೇಲೆ ಸಬ್ ಅರ್ಬನ್ ಪೊಲೀಸರು ದಾಳಿ ನಡೆಸಿದ್ದಾರೆ.
ನಕಲಿ ಗುಟುಕಾ ತಯಾರಿಸುತ್ತಿದ್ದ ಘಟಕದ ಮಾಲೀಕ ಉಮರ್ ಗುಲಾಮ್ ಮತ್ತು ಉತ್ತರ ಪ್ರದೇಶ ಹಾಗೂ ಬೀಹಾರ ಮೂಲದ 19 ಜನ ಕಾರ್ಮಿಕರನ್ನು ಬಂಧಿಸಿ 20 ಲಕ್ಷ ರೂಪಾಯಿ ಮೌಲ್ಯದ ನಕಲಿ ಗುಟುಕಾ, ಒಂದು ಗುಟುಕಾ ತಯಾರಿಸುತ್ತಿದ್ದ ಮಶೀನ್ ಜಪ್ತಿ ಮಾಡಿದ್ದಾರೆ
ಈ ಸಂಬಂಧ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.