ಗುಜರಾತ್ ವಿಧಾನಸಭೆ ಚುನಾವಣೆ: 1621 ಅಭ್ಯರ್ಥಿಗಳು ಕಣದಲ್ಲಿ

ಗಾಂಧಿನಗರ, ನ.25- ಗುಜರಾತ್ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿವೆ
ಡಿಸೆಂಬರ್ 1 ಮತ್ತು 5 ರಂದು ನಡೆಯಲಿರುವ ಚುನಾವಣೆಯಲ್ಲಿ 182 ಸ್ಥಾನಗಳಿಗೆ 1,621 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಮೊದಲ ಹಂತದ ಮತದಾನದಲ್ಲಿ 89 ಕ್ಷೇತ್ರಗಳಿಗೆ ಒಟ್ಟು 788 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದು ಇವರಲ್ಲಿ 70 ಮಹಿಳೆಯರು 339 ಸ್ವತಂತ್ರ ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಎರಡನೇ ಹಂತದ ಮತದಾನದಲ್ಲಿ 93 ಸ್ಥಾನಗಳಿಗೆ 69 ಮಹಿಳೆಯರು ಮತ್ತು 285 ಸ್ವತಂತ್ರರು ಸೇರಿದಂತೆ ಒಟ್ಟು 833 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಗುಜರಾತ್ ವಿಧಾನಸಭಾ ಚುನಾವಣೆಯ ಮತಗಳ ಎಣಿಕೆ ಮತ್ತು ಫಲಿತಾಂಶಗಳ ಘೋಷಣೆ ಡಿಸೆಂಬರ್ 8 ರಂದು ನಡೆಯಲಿದೆ ಎಂದು ಭಾರತೀಯ ಚುನಾವಣಾ ಆಯೋಗ ತಿಳಿಸಿದೆ.

ಮತ್ತೊಮ್ಮೆ ಗೆಲುವಿನ ಗುರಿ:

ಎರಡು ದಶಕಗಳಿಗೂ ಹೆಚ್ಚು ಕಾಲ ಅಧಿಕಾರದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ತವರು ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಮತ್ತೊಮ್ಮೆ ಗೆಲುವಿನ ಗುರಿ ಮುಟ್ಟುವ ತವಕದಲ್ಲಿದೆ.

ಈ ಮಧ್ಯೆ ಕಾಂಗ್ರೆಸ್ ಪಕ್ಷ ಈ ಬಾರಿ ಅಧಿಕಾರ ತನ್ನದಾಗಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಸಿದೆ. ಆಮ್ ಆದ್ಮಿ ಪಕ್ಷ ಕೂಡ ಅಧಿಕಾರು ಹಿಡಿಯುವ ಉತ್ಸಾಹದಲ್ಲಿದೆ.

ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮತ್ತು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಮೂರು ಪಕ್ಷಗಳ ಸ್ಟಾರ್ ಪ್ರಚಾರಕರು ಗುಜರಾತ್‍ನ ವಿವಿಧ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿದ್ದಾರೆ

75 ಲಕ್ಷ ನಗದು ವಶ

ಗುಜರಾತ್‍ನ ಸೂರತ್ ಬಳಿ ಮಹಾರಾಷ್ಟ್ರ ನೋಂದಣಿ ಕಾರಿನಲ್ಲಿ 75 ಲಕ್ಷ ನಗದನ್ನು ಭಾರತೀಯ ಚುನಾವಣಾ ಆಯೋಗದ ಕಣ್ಗಾವಲು ತಂಡ ವಶಪಡಿಸಿಕೊಂಡಿದೆ ಎಂದು ಪೆÇಲೀಸರು ತಿಳಿಸಿದ್ದಾರೆ.