
ಬೆಂಗಳೂರು,ಮೇ.೧೫- ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಗುಜರಾತ್ ಮಾದರಿ ಅನುಸರಿಸಿದ್ದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪ್ರಯತ್ನ ರಾಜ್ಯದಲ್ಲಿ ನೆಲ ಕಚ್ಚಿದೆ.
ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಹೊಸಬರಿಗೆ ಹೆಚ್ಚಿನ ಅವಕಾಶ ನೀಡಿದ ಮಾದರಿಯನ್ನು ಹಿಮಾಚಲ ಪ್ರದೇಶದಲ್ಲೂ ನೀಡಿದ್ದರೂ ಅಲ್ಲಿ ಬಿಜೆಪಿ ಸೋಲು ಕಂಡು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿತ್ತು.
ಹೀಗಿದ್ದರೂ ತನ್ನ ತಪ್ಪು, ಸರಿಪಡಿಸಿಕೊಳ್ಳದೆ ಮತ್ತೆ ಕರ್ನಾಟಕದಲ್ಲಿ ಗುಜರಾತ್ ಮಾದರಿಯನ್ನು ಅಳವಡಿಸಲು ೭೦ಕ್ಕೂ ಹೆಚ್ಚು ಹೊಸ ಮುಖಗಳಿಗೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಅವಕಾಶ ಮಾಡಿಕೊಟ್ಟಿದ್ದೆ ಬಿಜೆಪಿ ರಾಜ್ಯದಲ್ಲಿ ಹೀನಾಯವಾಗಿ ಸೋಲು ಕಾಣಲು ಕಾರಣಗಳನ್ನು ಒಂದಾಗಿದೆ.
ಅದರಲ್ಲೂ ರಾಜ್ಯದಲ್ಲಿ ಪ್ರಬಲ ಲಿಂಗಾಯಿತ ಸಮುದಾಯವನ್ನು ಬಿಜೆಪಿ ಕೇಂದ್ರ ನಾಯಕರು ಕಡೆಗಣಿಸಿದ್ದು ಕೂಡ ರಾಜ್ಯದಲ್ಲಿ ಬಿಜೆಪಿ ಹೀನಾಯ ಸೋಲಿಗೆ ಕಾರಣಗಳಲ್ಲಿ ಒಂದಾಗಿದೆ ಎಂದು ವಿಶ್ಲೇಷಣೆ ಮಾಡಲಾಗಿದೆ.
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವಾದಿ ಸೇರಿದಂತೆ ಅನೇಕ ಲಿಂಗಾಯತರ ನಾಯಕರನ್ನು ಮೂಲೆಗುಂಪು ಮಾಡಿದ್ದು ಅಲ್ಲದೆ ವಯಸ್ಸಿನ ಕಾರಣ ಮುಂದಿಟ್ಟುಕೊಂಡು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ದೂರವಿಟ್ಟಿದ್ದು ಕೂಡ ಕಾರಣ ಎಂದು ವಿಶ್ಲೇಷಣೆ ಮಾಡಲಾಗಿದೆ
ಆಡಳಿತ-ವಿರೋಧಿ ಅಲೆ ಇದ್ದರೂ ಪ್ರತಿಪಕ್ಷಗಳ ಮಾಡುತ್ತಿದ್ದ ಆರೋಪಗಳಿಗೆ ಸೂಕ್ತ ಉತ್ತರ ನೀಡಲು ವಿಫಲವಾಗಿದ್ದು ಬಿಜೆಪಿ ಸೋಲಿಗೆ ಕಾರಣಗಳಲ್ಲಿ ಒಂದಾಗಿದೆ ಎನ್ನಲಾಗಿದೆ.
ಚುನಾವಣೆಯ ಮೊದಲು ರಾಜ್ಯದಲ್ಲಿ ಬಿಜೆಪಿ ಹಿಡಿತ ಹೊಂದಿರುವ ಪ್ರಬಲ ಲಿಂಗಾಯತ ರಾಜಕೀಯ ನಾಯಕರ ಅವಲಂಬನೆಯಿಂದ ದೂರವಿರವಿಟ್ಟಿದ್ದು ಎರಡನೆಯದಾಗಿ, ಜನಪ್ರಿಯವಲ್ಲದ ಸಂಗತಿಗಳಿಗೆ ಉಮೇದುವಾರಿಕೆ ನಿರಾಕರಿಸುವುದು ಕೂಡ ಬಿಜೆಪಿ ಸೋಲಿಗೆ ಪ್ರಮುಖ ಕಾರಣವಾಗಿದೆ ಎಂದು ಮೂಲಗಳಿ ತಿಳಿಸಿವೆ
ಗುಜರಾತ್ ಮತ್ತು ಮಧ್ಯಪ್ರದೇಶದಿಂದ ಆಡಳಿತ ವಿರೋಧಿ ಆಡಳಿತವನ್ನು ಎದುರಿಸಲು ಅಳವಡಿಸಿಕೊಂಡ ನಾಟಕ ಪುಸ್ತಕವಾಗಿತ್ತು, ಅಲ್ಲಿ ’ಹಿಂದುತ್ವ ಜಾತಿ ಲೆಕ್ಕಾಚಾರಗಳನ್ನು ಮತ್ತು ಶಾಸಕರ ವೈಯಕ್ತಿಕ ಪ್ರಭಾವವನ್ನು ಹೆಚ್ಚಾಗಿ ತಳ್ಳಿಹಾಕುತ್ತದೆ. ರಾಜ್ಯದಲ್ಲೂ ಹಿಂದುತ್ವ ಅಜೆಂಡ ಏರಲು ಹೋಗಿ ಬಿಜೆಪಿ ಕೈಸುಟ್ಟುಕೊಂಡಿದೆ.