ಗುಜರಾತ್- ಮಧ್ಯಪ್ರದೇಶ ರಾಜ್ಯ ಪಠ್ಯಕ್ರಮಗಳ 12ನೇ ತರಗತಿ ಪರೀಕ್ಷೆ ರದ್ದು

ನವದೆಹಲಿ, ಜೂ.2- ಮಧ್ಯಪ್ರದೇಶ ಮತ್ತು ಗುಜರಾತ್ ರಾಜ್ಯಗಳ ಪಠ್ಯ ಕ್ರಮಗಳ 12 ನೇ ತರಗತಿಗಳ ಪರೀಕ್ಷೆಯನ್ನು ರದ್ದುಪಡಿಸುವ ತೀರ್ಮಾನ ಕೈಗೊಂಡಿದೆ.
ನಿನ್ನೆಯಷ್ಟೇ 12ನೇ ತರಗತಿ ಸಿಬಿಎಸ್ ಇ ಪರೀಕ್ಷೆಯನ್ನು ಕೇಂದ್ರ ಸರ್ಕಾರ ರದ್ದುಪಡಿಸಿತ್ತು. ಈಗ ಗುಜರಾತ್ ಹಾಗೂ ಮಧ್ಯಪ್ರದೇಶ ರಾಜ್ಯಗಳು ಪರೀಕ್ಷೆ ರದ್ದುಪಡಿಸಲು ನಿರ್ಧರಿಸಿವೆ.
ಮಧ್ಯಪ್ರದೇಶದ 12 ತರಗತಿಗಳ ಪರೀಕ್ಷೆಯನ್ನು ರದ್ದುಪಡಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮ್ಲಧ್ರಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ತಿಳಿಸಿದ್ದಾರೆ.
12ನೇ ತರಗತಿಯ ಪರೀಕ್ಷೆಯನ್ನು ರದ್ದುಪಡಿಸಲು ಗುಜರಾತ್ ಶಿಕ್ಷಣ ಮಂಡಳಿ ರದ್ದುಪಡಿಸಿದೆ ಎಂದು ಶಿಕ್ಷಣ ಸಚಿವ ಭೂಪೇಂದ್ರ ಸಿನ್ಹಾ ಚೂಡಸಾಮ ಹೇಳಿದ್ದಾರೆ.
ಜುಲೈ ಒಂದರಿಂಸ 12ನೇ ತರಗತಿಗಳ ಪರೀಕ್ಷೆ ನಡೆಸಲು ಗುಹರಾತ್ ಸರ್ಕಾರ ತೀರ್ಮಾನ ಕೈಗೊಂಡಿತ್ತು. ಕಳೆದ ವರ್ಷ ಮಾ.5ರಿಂದ 17ರವೆರಗೂ ಪರೀಕ್ಷೆಗಳನ್ನು ನಡೆಸಲಾಗಿತ್ರು.
ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಆರೋಗ್ಯ ಮತ್ತು ಸುರಕ್ಷತೆಯ ದೃಷ್ಟಿಯಿಂದ ಪರೀಕ್ಷೆ ‌ನಡೆಸದಿರುವ ನಿರ್ಧಾರಕ್ಕೆ ಬಂದಿದೆ.

ಒತ್ತಡದಿಂದ ಕೂಡಿದ ಈಗಿನ ಸನ್ನಿವೇಶದಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವಂತೆ ಬಲವಂತ ಮಾಡುವುದು ಸರಿಯಲ್ಲ’ ಎಂದು ಮಂಗಳವಾರ ನಡೆದ ಸಭೆಯಲ್ಲಿ ಪ‍್ರಧಾನಿ ಹೇಳಿದ್ದರು.

ಕಳೆದ ವರ್ಷ ಕೋವಿಡ್‌ ಹರಡುವಿಕೆ ತಡೆಗೆ ದೇಶದಾದ್ಯಂತ ಲಾಕ್‌ಡೌನ್ ಘೋಷಣೆ ಆದಾಗ ಸಿಬಿಎಸ್‌ಇ 12ನೇ ತರಗತಿಯ ಹಲವು ಪರೀಕ್ಷೆಗಳು ನಡೆದಿದ್ಸವು. ಉಳಿದ ಪರೀಕ್ಷೆಗಳನ್ನು ರದ್ದು ಮಾಡಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.