ಗುಜರಾತ್ ಪ್ರವಾಹ ಪ್ರಾಣಿ ಪಕ್ಷಿಗಳ ರಕ್ಷಣೆ

ಗಾಂಧಿನಗರ, ಜು. ೧೬- ಗುಜರಾತ್ ವಿವಿಧ ಭಾಗಗಳಲ್ಲಿ ಬಾರಿ ಮಳೆಯಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು ನವಸಾರಿ ಜಿಲ್ಲೆಯಲ್ಲಿ ಸಾವಿರಾರು ಪ್ರಾಣಿಗಳು, ಪಕ್ಷಿಗಳನ್ನು ಸಂಕಷ್ಟದಿಂದ ಪಾರು ಮಾಡಲಾಗಿದೆ.
ಪ್ರವಾಹ ಪೀಡಿತ ಪ್ರಾಣಿಗಳಿಗೆ ರಕ್ಷಣಾ ತಂಡಗಳು ಆಹಾರ ಒದಗಿಸಿದ್ದು ನವಸಾರಿ ಜಿಲ್ಲೆಯಲ್ಲಿ ಒಂದೇ ದಿನದಲ್ಲಿ ಕನಿಷ್ಠ ೮೧೧ ಜನರನ್ನು ರಕ್ಷಿಸಲಾಗಿದೆ ಎಂದು ಪರಿಹಾರ ಆಯುಕ್ತ ಪಿ. ಸ್ವರೂಪ್ ಮಾಹಿತಿ ನೀಡಿದ್ದಾರೆ.
ಧಾರಾಕಾರ ಮಳೆಯಿಂದ ಪೂರ್ಣಾ ನದಿಯಲ್ಲಿ ಹೆಚ್ಚುತ್ತಿರುವ ನೀರಿನ ಮಟ್ಟದಿಂದಾಗಿ ನವಸಾರಿ ತೀವ್ರವಾಗಿ ಹಾನಿಗೊಳಗಾಗಿದೆ. ಮಹಾರಾಷ್ಟ್ರದಲ್ಲಿ ಅಣೆಕಟ್ಟುಗಳು ತುಂಬಿ ಹರಿಯುತ್ತಿರುವುದರಿಂದ ಪೂರ್ಣಾ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ.
ಜಿಲ್ಲಾಡಳಿತ ತಂಡ ಹಿಂದಿನ ರಾತ್ರಿಯಿಂದ ಬೆಳಗಿನ ಜಾವ ೫:೩೦ರವರೆಗೆ ಕೆಲಸ ಮಾಡಿದ್ದು ರಕ್ಷಣಾ ಕಾರ್ಯದಲ್ಲಿ ತೊಡಗಿವೆ ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ.
ಮುಖ್ಯಮಂತ್ರಿ ಭೂಪೇಂದರ್ ಪಟೇಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾಧಿಕಾರಿಗಳೊಂದಿಗಿನ ವಿಡಿಯೊ ಸಂವಾದಲ್ಲಿ ನವಸಾರಿಯಲ್ಲಿ ಒಂದೇ ದಿನದಲ್ಲಿ ಒಟ್ಟು ೮೧೧ ಜನರನ್ನು ರಕ್ಷಿಸಲಾಗಿದೆ ಎಂದು ತಿಳಿಸಲಾಗಿದೆ.
ಪ್ರವಾಹದ ನೀರು ಗಣನೀಯವಾಗಿ ಕಡಿಮೆಯಾಗಿದೆ ಮತ್ತು ರಾಜ್ಯದಲ್ಲಿನ ನೈಸರ್ಗಿಕ ವಿಕೋಪದಿಂದ ಉಂಟಾದ ಹಾನಿ ಸಮೀಕ್ಷೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚಿಸಿದ್ದಾರೆ.
ಸಾಂಕ್ರಾಮಿಕ ಭೀತಿ:
ಪ್ರವಾಹದ ನೀರು ಕಡಿಮೆ ಆಗಿರುವುದರಿಂದ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಯುವ ಕೆಲಸ ಪರಿಣಾಮಕಾರಿಯಾಗಿ ನಡೆಯಬೇಕು ಮತ್ತು ರಾಜ್ಯದಾದ್ಯಂತ ಹಾಳಾದ ರಸ್ತೆಗಳನ್ನು ಸರಿಪಡಿಸಿ ನಾಗರಿಕರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಭೂಪೆಂದ್ರ ಪಟೇಲ್ ಹೇಳಿದ್ದಾರೆ.
ಡ್ಯಾಂಗ್ ಮತ್ತು ವಲ್ಸಾದ್ ಎರಡು ಜಿಲ್ಲೆಗಳಲ್ಲಿ ಹವಾಮಾನ ಇಲಾಖೆಯು ರೆಡ್ ಅಲರ್ಟ್ ಘೋಷಿಸಿದೆ. ಸದ್ಯ ರಾಜ್ಯದ ಪರಿಸ್ಥಿತಿ ಸುಧಾರಿಸುತ್ತಿದೆ ಎಂದು ವಿಪತ್ತು ನಿರ್ವಹಣಾ ಸಚಿವ ರಾಜೇಂದ್ರ ತ್ರಿವೇದಿ ಅವರು ಎಂಟು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಕುರಿತು ಮಾಹಿತಿ ನೀಡಿದ್ದರು.
“ಸೂರತ್, ಜುನಾಗಢ್, ಗಿರ್, ಭಾವನಗರ, ತಾಪಿ, ದಂಗ್, ವಲ್ಸಾದ್ ಮತ್ತು ನವಸಾರಿ ಸೇರಿದಂತೆ ಎಂಟು ಜಿಲ್ಲೆಗಳಲ್ಲಿ ಭಾರೀ ಮಳೆಗೆ ರೆಡ್ ಅಲರ್ಟ್ ಘೋಷಿಸಲಾಗಿದೆ” ಎಂದು ಗುರುವಾರ ತ್ರಿವೇದಿ ಹೇಳಿದ್ದರು. ಆದರೆ ಪೂರ್ಣಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚುತ್ತಿದೆ. ಮಹಾರಾಷ್ಟ್ರದ ತುಂಬಿ ಹರಿಯುತ್ತಿರುವ ಅಣೆಕಟ್ಟುಗಳು ತುಂಬಿ ಹರಿಯುತ್ತಿದ್ದು ಸಂಕಷ್ಟ ಎದುರಿಸುವಂತಾಗಿದೆ.