ಗುಜರಾತ್ ನಲ್ಲಿ ಒಬ್ಬರಿಗೆ ಒಮಿಕ್ರಾನ್ ಸೋ‌ಂಕು ದೃಢ

ನವದೆಹಲಿ, ಡಿ.4- ಕರ್ನಾಟಕದಲ್ಲಿ ಕೊರೋನಾ ಸೋಂಕಿನ ಹೊಸ ರೂಪಾಂತರಿ ಒಮಿಕ್ರಾನ್ ಎರಡು ಪ್ರಕರಣ ಪತ್ತೆಯಾದ ನಡುವೆಯೇ ಗುಜರಾತ್ ನಲ್ಲಿ ಒಂದು ಪ್ರಕರಣ ದೃಢಪಟ್ಟಿದೆ.

ದೇಶದಲ್ಲೇ ಇದರೊಂದಿಗೆ ಅಧಿಕೃತವಾಗಿ 3 ಸೋಂಕು,ದೃಢಪಟ್ಟಿದ್ದು ದೆಹಲಿ ತಮಿಳುನಾಡು ಕೇರಳದಲ್ಲಿ ಶಂಕಿತರನ್ನು ಜಿನೋಮ್ ಪರಿಕ್ಷೆಗೆ ಕಹುಳಿಸಲಾಗಿದೆ. ಅಲ್ಲಿಂದ ವರದಿ ಬಂದ ನಂತರ ಸೋ‌ಂಕುಇದೆಯೇ ಇಲ್ಲವೇ ಎನ್ನುವುದು ಖಚಿತವಾಗಿದೆ.

ಜಿಂಬಾಂಬೆ ನಿಂದ ಗುಜರಾತ್ ಜಾಮ್ ನಗರಕ್ಕೆ ಆಗಮಿಸಿದ್ದ 77 ವರ್ಷದ ವ್ಯಕ್ತಿಯಲ್ಲಿ ಒಮಿಕ್ರಾನ್ ಪತ್ತೆಯಾಗಿದೆ ಎಂದು ಗುಜರಾತ್ ನ ಆರೋಗ್ಯ ಇಲಾಖೆ ತಿಳಿಸಿದೆ.

ವ್ಯಕ್ತಿಯಲ್ಲಿ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಹೆಚ್ಚಿನ ಮಾಹಿತಿಗೆ ಜಿನೋಮ್ ಪರೀಕ್ಷೆಗೆ ಕಳುಹಿಸಲಾಗಿದ್ದು ಅಲ್ಲಿಂದ ವರದಿ ದೃಢಪಟ್ಟಿದೆ. ಹೀಗಾಗಿ ದೇಶದಲ್ಲಿ ಕರ್ನಾಟಕ ಬಿಟ್ಟರೆ ಅಧಿಕೃತವಾಗಿ ಗುಜರಾತಿನಲ್ಲಿ ಒಮಿಕ್ರಾನ್ ಸೋಂಕು ಕಾಣಿಸಿಕೊಂಡಿದೆ.

ಈ ಕುರಿತು ಮಾಹಿತಿ ನೀಡಿರುವ ಗುಜರಾತ್ ರಾಜ್ಯ ಆರೋಗ್ಯ ಇಲಾಖೆ ಆಯುಕ್ತ ಜೈ ಪ್ರಕಾಶ್ ಶಿವಾರೆ ಅವರು, ಗುಜರಾತ್ ನಲ್ಲಿ 77 ವರ್ಷದ ವ್ಯಕ್ತಿಗೆ ಒಮ್ರಿಕಾನ್ ಪತ್ತೆಯಾಗಿದೆ ಎಂದು ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬಂದಿರುವ ಪ್ರಥಮ ದ್ವಿತೀಯ ಸಂಪರ್ಕಿತ ರನ್ನು ಪತ್ತೆ ಹಚ್ಚುವ ಕೆಲಸದಲ್ಲಿ ಇಲಾಖೆಯ ಅಧಿಕಾರಿಗಳು ನಿರತರಾಗಿದ್ದಾರೆ ಎಂದು ಅವರು ಹೇಳಿದ್ದಾರೆ