ಗುಜರಾತ್ ನಲ್ಲಿ ಅವಳಿ ನವಜಾತ ಶಿಶುಗಳಿಗೆ ಕೊರೊನಾ

ವಡೋದರ,ಏ.೨- ಗುಜರಾತ್ ನ ವಡೋದರಾ ನಗರದಲ್ಲಿ ನವಜಾತ ಅವಳಿ ಮಕ್ಕಳಿಗೆ ಕೊರೊನಾ ಸೋಂಕು ತಗುಲಿದ್ದು ಮಕ್ಕಳ ಆರೋಗ್ಯ ಉತ್ತಮವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿದೆ.

ತೀವ್ರವಾದ ಅತಿಸಾರ ಮತ್ತು ಡಿಹೈಡ್ರೇಶನ್ ನಿಂದ ಬಳಲುತ್ತಿದ್ದ ಅವಳಿ ಮಕ್ಕಳನ್ನು ಜನಿಸಿದ ೧೫ ದಿನಗಳ ಬಳಿಕ ಆಸ್ಪತ್ರೆಗೆ ಕರೆತರಲಾಗಿತ್ತು.ಈ ವೇಳೆ ಎರಡು ಮಕ್ಕಳಿಗೆ ಪರೀಕ್ಷೆ ನಡೆಸಿದಾಗ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು.

ನವಜಾತ ಶಿಶುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಸದ್ಯ ಮಕ್ಕಳ ಆರೋಗ್ಯ ಸ್ಥಿತಿ ಉತ್ತಮವಾಗಿದೆ. ಆದರೂ ಆಸ್ಪತ್ರೆಯಿಂದ ಇನ್ನೂ ಮಕ್ಕಳನ್ನು ಬಿಡುಗಡೆ ಮಾಡಲಾಗಿಲ್ಲ ಎಂದು ಆಸ್ಪತ್ರೆಯ ಮಕ್ಕಳ ವಿಭಾಗದ ಮುಖ್ಯಸ್ಥ ಡಾ. ಐಯ್ಯರ್ ತಿಳಿಸಿದ್ದಾರೆ.

ಗುಜರಾತ್ ನಲ್ಲಿ ಇದುವರೆಗೂ ಮೂರು ೩೦೭೩೯೮ ಜನರಿಗೆ ಕೊರೋನಾ ಸೋಂಕು ತಗಲಿದ್ದು ಅದರಲ್ಲಿ ಸದ್ಯ ೧೨೬೧೦ ಸಕ್ರಿಯ ಪ್ರಕರಣಗಳಿವೆ.

ಈವರೆಗೂ ೨,೯೦,೫೬೯ ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು ೪೫೧೯ ಮಂದಿ ಸಾವೀಗೀಡಾಗಿದ್ದಾರೆ ಎಂದು ಗುಜರಾತ್ ನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ