ಗುಜರಾತ್ ಕೋಮು ಗಲಭೆ ಆರೋಪಿಗಳ ಖುಲಾಸೆ

ಅಹಮದಾಬಾದ್,ಏ.೨:ದೇಶಾದ್ಯಂತ ಭಾರಿ ಕೋಲಾಹಲ ಸೃಷ್ಟಿಸಿದ್ದ ೨೦೦೨ರ ಗುಜರಾತ್ ಕೋಮು ಗಲಭೆಯ ವೇಳೆ ನಡೆದಿದ್ದ ಅಲ್ಪಸಂಖ್ಯಾತರ ಮೇಲಿನ ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ.
ಈ ಭೀಕರ ಪ್ರಕರಣದಲ್ಲಿ ಸಾಕ್ಷಿಗಳ ಕೊರತೆಯಿಂದಾಗಿ ೨೬ ಮಂದಿಯನ್ನು ಗುಜರಾತ್‌ನ ನ್ಯಾಯಾಲಯ ಖುಲಾಸೆಗೊಳಿಸಿದೆ.
ಪಂಚಮಹಲ್ ಜಿಲ್ಲೆಯ ಕಲೋಲ್‌ನಲ್ಲಿರುವ ಹೆಚ್ಚುವರಿ ಸೆಷೆನ್ಸ್ ನ್ಯಾಯಮೂರ್ತಿಗಳಾದ ಲೀಲಾಭಾಯಿ ಚುಡಾಸಮ ಆರೋಪಿಗಳನ್ನು ಬಂಧಮುಕ್ತಗೊಳಿಸಿ ತೀರ್ಪು ನೀಡಿದ್ದಾರೆ.ಒಟ್ಟು ೩೯ ಆರೋಪಿಗಳ ಪೈಕಿ ೧೩ ಮಂದಿ ವಿಚಾರಣೆ ಸಂದರ್ಭದಲ್ಲಿ ಮೃತಪಟ್ಟಿದ್ದರು. ಹೀಗಾಗಿ ಅವರ ವಿರುದ್ಧದ ವಿಚಾರಣೆಯನ್ನು ಈ ಹಿಂದೆ ರದ್ದುಪಡಿಸಲಾಗಿದೆ. ಸಾಕ್ಷಿಗಳ ಕೊರತೆಯಿಂದಾಗಿ ಉಳಿದ ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ,
೨೦೦೨ರ ಫೆ. ೨೭ ರಂದು ಗೋಧ್ರಾದಲ್ಲಿ ಸಬರ್‌ಮತಿ ರೈಲನ್ನೂ ಉದ್ರಿಕ್ತ ಗುಂಪು ಸುಟ್ಟು ಹಾಕಿತ್ತು. ಈ ಘಟನೆಯ ನಂತರ ಹಿಂಸಾಚಾರ ಭುಗಿಲೆದ್ದಿತ್ತು. ಈಗ ಖುಲಾಸೆಗೊಂಡಿರುವ ಎಲ್ಲ ೨೬ ಆರೋಪಿಗಳಾಗಿದ್ದರು. ಇವರೆಲ್ಲರ ವಿರುದ್ಧ ಎಫ್‌ಐಆರ್ ಕೂಡ ದಾಖಲಾಗಿತ್ತು.
ವಿಚಾರಣೆ ಸಂದರ್ಭದಲ್ಲಿ ೧೯೦ ಸಾಕ್ಷಿಗಳು ಮತ್ತು ೩೩೪ ಸಾಕ್ಷ್ಯಗಳನ್ನು ಪರಿಶೀಲಿಸಿತ್ತು. ಈ ಸಂದರ್ಭದಲ್ಲಿ ಲಭ್ಯವಿರುವ ಸಾಕ್ಷಿಗಳಲ್ಲಿ ವಿರೋಧಾಭಾಸಗಳಿವೆ ಎಂದು ಅಭಿಪ್ರಾಯ ಪಟ್ಟ ನ್ಯಾಯಾಲಯ, ಪ್ರಾಸಿಕ್ಯೂಷನ್ ವಾದವನ್ನು ನ್ಯಾಯಾಲಯ ತಳ್ಳಿ ಹಾಕಿದೆ.
ಗಾಂಧಿನಗರ ಜಿಲ್ಲೆಯ ಕಲೋಲ್ ನಗರದಲ್ಲಿ ಸಂಭವಿಸಿದ ಕೋಮುಗಲಭೆಯಲ್ಲಿ ೨ ಸಾವಿರಕ್ಕೂ ಹೆಚ್ಚು ಮಂದಿ ಮಾರಕಾಸ್ತ್ರಗಳಿಂದ ಪರಸ್ಪರ ಘರ್ಷಣೆಯಲ್ಲಿ ತೊಡಗಿದ್ದರು. ಈ ಹಿಂಸಾಚಾರದಲ್ಲಿ ಅಂಗಡಿಗಳನ್ನು ಧ್ವಂಸಗೊಳಿಸಿ ಅಪಾರ ಹಾನಿ ಸಂಭವಿಸಿತ್ತು. ಈ ಸಂದರ್ಭದಲ್ಲಿ ಪಾರಾಗಲು ಯತ್ನಿಸಿದ ಮಹಿಳೆಯೊಬ್ಬರ ಮೇಲೆ ಉದ್ರಿಕ್ತ ಗುಂಪೊಂದು ಸಾಮೂಹಿಕ ಅತ್ಯಾಚಾರವೆಸಗಿ ಕೊಲೆ ಮಾಡಿತ್ತು.