ಗುಜರಾತ್: ಕಾಂಗ್ರೆಸ್ ಗೆ ಐದಕ್ಕೂ ಕಡಿಮೆ ಸ್ಥಾನ: ಅರವಿಂದ ಕ್ರೇಜಿವಾಲ್ ಭವಿಷ್ಯ

ಅಹಮದಾಬಾದ್,ನ 5- ಗುಜರಾತ್ ವಿಧಾನಸಭೆಯಲ್ಲಿ ‘ಕಾಂಗ್ರೆಸ್ ಐದಕ್ಕಿಂತ ಕಡಿಮೆ ಸ್ಥಾನ ಗೆಲ್ಲಲಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಭವಿಷ್ಯ ನುಡಿದ್ದಾರೆ.

ಮತದಾನ ಪೂರ್ವ ಸಮೀಕ್ಷೆಯಲ್ಲಿ ಬಿಜೆಪಿ ಮರಳಿ ಅಧಿಕಾರ ಹಿಡಿಯಲಿದ್ದು ಕಾಂಗ್ರೆಸ್ ಎರಡನೇ ಸ್ಥಾನ ಹಾಗು ಎಎಪಿ ಮೂರು ಸ್ಥಾನ ಪಡೆಯಲಿದೆ ಎಂದು ಸಮೀಕ್ಷೆ ಹೇಳಿದೆ.

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ‌ ಮಾತನಾಡಿದ ಅರವಿಂದ ಕೇಜ್ರಿವಾಲ್, ಗುಜರಾತ್ ನಲ್ಲಿ ಡಿಸೆಂಬರ್ 1 ಮತ್ತು 5 ರಂದು ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಹಿಮಾಚಲ ಪ್ರದೇಶದ ಫಲಿತಾಂಶಗಳೊಂದಿಗೆ ಡಿಸೆಂಬರ್ 8 ರಂದು ಫಲಿತಾಂಶ ಪ್ರಕಟವಾಗಲಿದೆ.

“ಗುಜರಾತ್ ಜನತೆಗೆ ಬದಲಾವಣೆ ಬೇಕು. ಜನರು ಬದಲಾವಣೆ ಬಯಸದಿದ್ದರೆ ನಮಗೆ ಜಾಗ ಸಿಗುತ್ತಿರಲಿಲ್ಲ. ಶೇ. 30ರಷ್ಟು ಮತಗಳನ್ನು ಪಡೆಯುತ್ತಿದ್ದೇವೆ. ಪಂಜಾಬ್‌ನಲ್ಲಿ ಸರ್ಕಾರ ರಚಿಸಿದ್ದೇವೆ. ಗುಜರಾತ್‌ನಲ್ಲೂ ಸರ್ಕಾರ ರಚಿಸುತ್ತೇವೆ ಎಂದಿದ್ದಾರೆ .

“ಗುಜರಾತ್‌ನಲ್ಲಿ ಕಾಂಗ್ರೆಸ್ 5 ಸೀಟುಗಳಿಗಿಂತ ಕಡಿಮೆ ಗೆಲ್ಲುತ್ತದೆ. ಬಿಜೆಪಿಯ ಲೆಕ್ಕಾಚಾರ ಈ ಬಾರಿ ನಡೆಯುವುದಿಲ್ಲ ಎಂದು ಹೇಳಿದ್ದಾರೆ.

ಮುಂಜಾನೆ ಎಬಿಪಿ ನ್ಯೂಸ್-ಸಿ ವೋಟರ್ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿಗೆ ಮತ್ತೊಂದು ಗೆಲುವು ನೀಡಿದೆ.ಸುಮಾರು 23,000 ಪ್ರತಿಕ್ರಿಯಿಸಿದ ಅರ್ಧದಷ್ಟು ಜನರು ಬಿಜೆಪಿಗೆ ಮತ ಹಾಕಲು ಯೋಜಿಸಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಕಿತ್ತಾಟ ಎಎಪಿ ಅನುಕೂಲವಾಗಲಿದೆ ಎಂದೂ ಹೇಳಿದೆ.

ಪಂಜಾಬ್‌ನಲ್ಲಿ ಚುನಾವಣೆಗೆ ಮುನ್ನ ಭಗವಂತ್ ಮಾನ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದಿ ಘೋಷಿಸಿರುವ ರೀತಇ ಮಾಜಿ ಟಿವಿ ಸುದ್ದಿ ನಿರೂಪಕ ಮತ್ತು ಸಾಮಾಜಿಕ ಕಾರ್ಯಕರ್ತ ಇಸುದನ್ ಗಧ್ವಿಯನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದೆ.

ಗುಜರಾತ್‌ನಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ – ಡಿಸೆಂಬರ್ 1 ಮತ್ತು ಡಿಸೆಂಬರ್ 5 ರಂದು. ಫಲಿತಾಂಶಗಳು ಡಿಸೆಂಬರ್ 8 ರಂದು ಫಲಿತಾಂಶ ಪ್ರಕಟವಾಗಲಿದೆ.