ಗುಜರಾತ್ ಕದನಕ್ಕೆ ಮುಹೂರ್ತ ಫಿಕ್ಸ್

ಡಿ. ೮ ಫಲಿತಾಂಶ
ನವದೆಹಲಿ,ನ.೩-ದೇಶದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಗುಜರಾತ್ ವಿಧಾನಸಭೆ ಚುನಾವಣೆ ಮುಹೂರ್ತ ನಿಗದಿಪಡಿಸಿದೆ. ಡಿಸೆಂಬರ್ ೧ ಮತ್ತು ೫ ರಂದು ಎರಡು ಹಂತದಲ್ಲಿ ಮತದಾನ ನಡೆಯಲಿದ್ದು ಡಿಸೆಂಬರ್ ೮ ರಂದು ಮತ ಎಣಿಕೆ ನಡೆಯಲಿದೆ . ಮೊದಲ ಹಂತದ ಮತದಾನಕ್ಕೆ ನವಂಬರ್ ೫ ರಂದು ಹಾಗೂ ಎರಡನೇ ಹಂತದ ಮತದಾನಕ್ಕೆ ನವಂಬರ್ ೧೦ ರಂದು ಅಧಿಸೂಚನೆ ಪ್ರಕಟಿಸಲಾಗುವುದು ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ತಿಳಿಸಿದ್ದಾರೆ.ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಇಂದು ಚುನಾವಣಾ ಪ್ರಕ್ರಿಯೆ ಕುರಿತು ಮಾಹಿತಿ ನೀಡಿದ ಅವರು ಹಾಲಿ ವಿಧಾನಸಭೆಯ ಅವಧಿ ಮುಂದಿನ ವರ್ಷ ಫೆಬ್ರವರಿ ೧೮ ಕ್ಕೆ ಪೂರ್ಣವಾಗಲಿದೆ. ಅಷ್ಟರೊಳಗೆ ಹೊಸ ಶಾಸನಸಭೆ ರಚನೆಯಾಗಲಿದೆ. ಇಂದಿನಿಂದಲೇ ರಾಜ್ಯಲ್ಲಿ ಮಾದರಿ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರಲಿದೆ ಎಂದು ಅವರು ಹೇಳಿದರು.ಗುಜರಾತ್ ನ ೧೮೨ ವಿಧಾನಭೆ ಸದಸ್ಯ ಬಲದ ವಿಧಾನಭೆಯಲ್ಲಿ ೧೪೨ ಸಾಮಾನ್ಯ ಕ್ಷೇತ್ರಗಳು, ೧೭ ಪರಿಶಿಷ್ಠ ಜಾತಿ ಮತ್ತು ೨೩ ಪರಿಶಿಷ್ಠ ಪಂಗಡದ ವಿಧಾನಸಭಾ ಕ್ಷೇತ್ರಗಳಿವೆ ಎಂದು ಹೇಳಿದ್ದಾರೆ.ಗುಜರಾತ್‌ನಲ್ಲಿ ೪.೯ ಕೋಟಿ ಮತದಾರರಿದ್ದಾರೆ. ೫೧ ಸಾವಿರ ಮತಗಟ್ಟೆ ತೆರೆಯಲಾ ಗಿದ್ದು ಅದರಲ್ಲಿ ೧೨೭೪ ಮತಗಟ್ಟೆಗಳನ್ನು ಸಂಪೂರ್ಣವಾಗಿ ಮಹಿಳೆಯರೇ ನಿರ್ವಹಿಸುತ್ತಾರೆ ಎಂದು ಹೇಳಿದರು.
ಒಟ್ಟು ೪.೯ ಕೋಟಿ ಮತದಾರರ ಪೈಕಿ ೪.೬೧ಲಕ್ಷ ಮತದಾರರು ಮೊದಲ ಬಾರಿಗೆ ಮತ ಚಲಾಯಿಸಲು ಅರ್ಹತೆ ಪಡೆದಿದ್ದಾರೆ. ೮೦ ವರ್ಷ ದಾಟಿದ ೯..೮ ಲಕ್ಷ ಮತದಾರು ಇದ್ದಾರೆ ಎಂದು ಅವರು ಹೇಳಿದ್ದಾರೆ.
ದುರ್ಗಮ ಪ್ರದೇಶದಲ್ಲಿಯೂ ಮತಗಟ್ಟೆ:
ಚುನಾವಣಾ ಆಯೋಗದ ತಂಡ ಅಂತರ್ಗತ ಮತ್ತು ಭಾಗವಹಿಸುವ ಚುನಾವಣೆಗಳನ್ನು ಖಚಿತಪಡಿಸಿಕೊಳ್ಳಲು ಮತ್ತು ಕಟ್ಟ ಕಡೆಯ ವ್ಯಕ್ತಿಯೂ ಮತ ಚಲಾವಣೆಗೆ ಅವಕಾಶ ಮಾಡಿಕೊಡಲಾಗಿದೆ. ತಂಡಗಳು ಕಷ್ಟಕರವಾದ ಭೂಪ್ರದೇಶಗಳು ಮತ್ತು ಅರಣ್ಯಗಳನ್ನು ಚಾರಣ ಮಾಡುತ್ತವೆ ಮತ್ತು ದೋಣಿ ಮೂಲಕ ಪ್ರಯಾಣಿಸುತ್ತವೆ, ಯಾವುದೇ ಮತದಾರರು ಹಿಂದುಳಿದಿಲ್ಲ ಎಂದು ಖಚಿತಪಡಿಸಿಕೊಳ್ಳಲು ದೂರದ ಪ್ರದೇಶಗಳಲ್ಲಿ ಸ್ಥಾಪಿಸಲಾದ ಮತದಾನ ಕೇಂದ್ರಗಳನ್ನು ತೆರೆಯಲಾಗುವುದು ಎಂದಿದ್ದಾರೆ
ಬಿಗಿಭದ್ರತೆ:
ವಿಧಾನಸಭೆ ಚುನಾವಣೆಯನ್ನು ಮುಕ್ತ ಮತ್ತು ನ್ಯಾಯ ಸಮ್ಮತವಾಗಿ ನಡೆಸಲು ಚುನಾವಣಾ ಆಯೋಗ ಎಲ್ಲಾ ಕ್ರಮಕೈಗೊಂಡಿದೆ. ಭದ್ರತೆಗಾಗಿ ೧೬೦ ಕಂಪನಿಗಳನ್ನು ನಿಯೋಜಿಸಲಾಗಿದೆ. ಜೊತೆಗೆ ರಾಜ್ಯ ಪೋಲೀಸರು ಮತ್ತು ಸಿಆರ್‌ಪಿಎಫ್ ಪಡೆಯ ಪೊಲೀಸರು ಭದ್ರತೆ ಒದಗಿಸಲಾಗಿದ್ದು ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತಗಟ್ಟೆಗಳಲ್ಲಿ ಬಿಗಿಭದ್ರತೆ ಒದಗಿಸಲಾಗಿದೆ ಎಂದರು.
ಸಂತಾಪ:
ಗುಜರಾತ್‌ನ ಮೊರ್ಬಿಯಲ್ಲಿ ಸೇತುವೆ ದುರಂತದಲ್ಲಿ ಸಾವನ್ನಪ್ಪಿದ ಮಂದಿಗೆ ಸಂತಾಪ ಸೂಚಿಸಿದರು. ಗಾಯಾಳುಗಳು ಶೀಘ್ರ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.

ಗುಜರಾತ್ ವಿಧಾನಸಭೆ ಚುನಾವಣಾ ದಿನಾಂಕ ಪ್ರಕಟ

ಡಿಸೆಂಬರ್ ೧ ಮತ್ತು ೫ ರಂದು ಎರಡು ಹಂತದಲ್ಲಿ ಮತದಾನ

ಮೊದಲ ಹಂತಕ್ಕೆ ನವಂಬರ್ ೫ ಮತ್ತು ಎರಡನೇ ಹಂತಕ್ಕೆ ೧೦ ರಂದು ಅಧಿಸೂಚನೆ ಪ್ರಕಟ

ಡಿಸೆಂಬರ್ ೮ ರಂದು ಮತದಾನ, ಅಂದೇ ಹಿಮಾಚಲ ಪ್ರದೇಶದ ಫಲಿತಾಂಶ ಪ್ರಕಟ

೧೮೨ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ೪.೯ ಕೋಟಿ ಅರ್ಹ ಮತದಾರರು

೫೧ ಸಾವಿರಕ್ಕೂ ಅಧಿಕ ಮತಗಟ್ಟೆ ಸ್ಥಾಪನೆ

೧೨೭೪ ಮತಗಟ್ಟೆ ಸಂಪೂರ್ಣ ಮಹಿಳೆಯರೇ ನಿರ್ವಹಣೆ

ನಾಮಪತ್ರ ಹಾಗು ಪ್ರಮಾಣ ಪತ್ರ ಸಲ್ಲಿಸಲು ರಾಜಕೀಯ ಪಕ್ಷಗಳಿಗೆ ಈ ಸುವಿದಾ ಪೋರ್ಟಲ್‌ನಲ್ಲಿ ಅವಕಾಶ

ಒಬ್ಬರು ಮತದಾರರಿದ್ದರೂ ಮತಗಟ್ಡೆ
ಗಿರ್ ಸೋಮನಾಥ ಜಿಲ್ಲೆಯ ಮಧುಪುರ್ ಜಂಬೂರಿನಲ್ಲಿ ಒಂದು ಮತದಾರಿದ್ದರೂ ಮತಗಟ್ಟೆ ಸ್ಥಾಪಿಸಲಾಗುವುದು ಅಲ್ಲದೆ ಸಿದ್ದಿಗಳಿಗಾಗಿ ಚುನಾವಣಾ ಆಯೋಗ ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಮುಖ್ಯಚುನಾವಣಾ ಆಯುಕ್ತ ರಾಜೀವ್ ಕುಮಾರ್ ತಿಳಿಸಿದ್ದಾರೆ.
“ಸಿದ್ದಿಗಳು ೧೪ ಮತ್ತು ೧೭ ನೇ ಶತಮಾನದಲ್ಲಿ ಭಾರತಕ್ಕೆ ಬಂದ ಪೂರ್ವ ಆಫ್ರಿಕಾದ ಜನರ ವಂಶಸ್ಥರು ಮತ್ತು ಈಗ ಇಲ್ಲಿ ವಾಸಿಸುತ್ತಿದ್ದಾರೆ. ಅವರು ನಮ್ಮ ಹೆಮ್ಮೆಯ ಮತದಾರರು” ಎಂದು ಹೇಳಿದ್ದಾರೆ.