ಗುಜರಾತ್‌ನಲ್ಲಿ ಎಕ್ಸ್‌ಬಿಬಿಐಎಸ್ ಮೊದಲ ಪ್ರಕರಣ ಪತ್ತೆ

ಪುಣೆ, ಡಿ.೩೧- ಗುಜರಾತ್‌ನಲ್ಲಿ ತಿಂಗಳ ಆರಂಭದಲ್ಲಿ ಒತ್ತೆಯಾದ ಕೊರೊನಾ ಸೋಂಕಿನ ಉಪ ತಳಿ ಓಮಿಕ್ರಾನ್‌ನ ಎಕ್ಸ್‌ಬಿಬಿಐಎಸ್ ಮೊದಲ ಪ್ರಕರಣ ದೃಢಪಟ್ಟಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಎಕ್ಸ್‌ಬಿಬಿಐಎಸ್ ಒಮಿಕ್ರಾನ್ ರೂಪಾಂತರ ತಳಿಯ ಮೊದಲ ಸೋಂಕು ಪ್ರಕರಣ ಇದಾಗಿದೆ ಎಂದು ಮಾಹಾರಾಷ್ಟ್ರದ ಆರೋಗ್ಯ ಇಲಾಖೆಯ ವಿಚಕ್ಷಣ ದಳದ ಅಧಿಕಾರಿ ಡಾ. ಪ್ರದೀಪ್ ಅವಾಟೆ ಹೇಳಿದ್ದಾರೆ.
ಎಕ್ಸ್ ಬಿಬಿಐಎಸ್.೧೫ ಉಪತಳಿ ಅಮೇರಿಕಾದ ನ್ಯೂಯಾರ್ಕ್‌ನಲ್ಲಿ ಪತ್ತೆಯಾಗಿತ್ತು.ಇದೀಗ ಗುಜರಾತ್ ನಲ್ಲಿ ಪತ್ತೆಯಾಗಿದೆ ಎಂದು ತನ್ನ ಅಧಿಕೃತ ಮಾಹಿತಿಯಲ್ಲಿ ಈ ವಿಷಯ ತಿಳಿಸಿದ್ದಾರೆ.
ಕೋವಿಡ್ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಿದೇಶದಿಂದ ಆಗಮಿಸುವ ಜನರ ಮೇಲೆ ಹದ್ದಿನ ಕಣ್ಣು ಇಡಲಾಗಿದೆ. ಒಮಿಕ್ರಾನ್ ರೂಪಾಂತರ ತಳಿಯ ಎಕ್ಸ್ ಬಿಬಿ, ಮತ್ತು ಬಿಎ-೨ ರೂಪಾಂತರವಾದ ಎಕ್ಸ್ ಬಿಬಿ.೧೫ ಸೋಂಕು ಅನೇಕ ರೋಗ ಲಕ್ಷಣಕ್ಕೆ ಕಾರಣವಾಗುತ್ತಿದೆ ಎನ್ನುವುದನ್ನು ಅಮೇರಿಕಾ ವಿಜ್ಞಾನಿಗಳು ತಿಳಿಸಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಕಟ್ಟೆಚ್ಚರ:
ನೆರೆಯ ಗುಜರಾತ್ ರಾಜ್ಯದಲ್ಲಿ ಕೊರೊನಾ ಸೋಂಕಿನ ಉಪ ತಳಿಗಳಲ್ಲಿ ಒಂದಾದ ಎಕ್ಸ್ ಬಿಬಿ.೧೫ ಪತ್ತೆ ಯಾದ ಹಿನ್ನೆಲೆಯಲ್ಲಿ ರಾಜ್ಯದಲ್ಲಿಯೂ ಕಟ್ಟೆಚ್ಚರ ವಹಿಸುವಂತೆ
ರಾಜ್ಯದ ಸಾರ್ವಜನಿಕ ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದಿದ್ದಾರೆ.
ಜೊತೆಗೆ ಮಹಾರಾಷ್ಟ್ರ ಗುಜರಾತ್‌ಗೆ ಸಮೀಪದಲ್ಲಿರುವ ಕಾರಣ ಒಮಿಕ್ರಾನ್ ರೂಪಾಂತರ ಸೋಂಕು ಬೇಗ ಹರಡಬಹುದು ಎನ್ನುವ ಕಾರಣಕ್ಕೆ ಗಡಿ ಭಾಗದಲ್ಲಿ,ರೈಲು ನಿಲ್ದಾಣ,ವಿಮಾನ ನಿಲ್ದಾಣದಲ್ಲಿ ಬಾರಿ ಕಟ್ಟರಚ್ಚರ ವಹಿಸಲಾಗಿದೆ ಎಂದು ಹೇಳಿದ್ದಾರೆ.
ಮಹಾರಾಷ್ಟ್ರದ ವಿವಿಧ ಭಾಗದಲ್ಲಿಯೂ ಹೆಚ್ಚಿನ ಕಣ್ಗಾವಲು ಇಟ್ಟಿದ್ದೇವೆ. ಯಾವುದೇ ಪರಿಸ್ಥಿತಿ ಎದುರಿಸಲು ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಈ ಸೋಂಕು ಆನುವಂಶಿಕ ಹೆಜ್ಜೆಗುರುತುಗಳನ್ನು ವೀಕ್ಷಿಸಿ ಮುಂದಿನ ಕ್ರಮ ಜರುಗಿಸ ಲಾಗುವುದು ಎಂದು ಅವರು ಹೇಳಿದ್ದಾರೆ.