ಗುಜರಾತನಲ್ಲಿ ನಡೆವ ರಾಷ್ಟ್ರೀಯ ವಿಜ್ಞಾನ ಸಮಾವೇಶಕ್ಕೆ ಯಾದಗಿರಿ ಜಿಲ್ಲೆಯ ವಿದ್ಯಾರ್ಥಿ ಆಯ್ಕೆ

ಯಾದಗಿರಿ; ಜ.20:ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ವತಿಯಿಂದ ಕರ್ನಾಟಕ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಕಲಬುರಗಿಯಲ್ಲಿ ನಡೆದ 30 ನೇ ರಾಜ್ಯಮಟ್ಟದ ರಾಷ್ಟೀಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ,ಯಾದಗಿರಿ ಜಿಲ್ಲೆಯಿಂದ ವಡಿಗೇರಾ ತಾಲೂಕಿನ ಬಿಳ್ಹಾರ ಸರಕಾರಿ ಪ್ರೌಢಶಾಲೆಯ 8 ನೇ ತರಗತಿ ವಿದ್ಯಾರ್ಥಿಯಾದ ರಾಜಶೇಖರ್ ತಂದೆ ಕೋರಿ ಸಿದ್ದೇಶ ಸ್ಪರ್ಧಿಸಿ “ಭತ್ತದ ಹೊಲದಲ್ಲಿನ ಪಕ್ಷಿಗಳು” ಎನ್ನುವ ಪ್ರಬಂಧ ಮಂಡಿಸಿ, ಇದೇ ತಿಂಗಳು 27 ರಿಂದ 31 ರವರೆಗೆ ಗುಜರಾತ್ನ ಅಹಮದಬಾದ್ ನಲ್ಲಿ ನಡೆಯುವ ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾನೆ.

ಪ್ರಶಸ್ತಿ ಪ್ರಧಾನ ಸಮಾರಂಭ : ಶ್ರೀ ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ ನಮೋಶಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಅಧ್ಯಕ್ಷರಾದ ಗಿರೀಶ್ ಕಡ್ಲೇವಾಡ , ಕಲಬುರಗಿ ಶ್ರೀಗುರು ವಿದ್ಯಾಪೀಠದ ಬಸವರಾಜ್ ದಿಗ್ಗಾವಿ, ಕಲಬುರಗಿ ಡಿಡಿಪಿಐ ಸಕ್ರಪ್ಪ ಗೌಡ ಇನ್ನಿತರು ಉಪಸ್ಥಿತರಿದ್ದು ಪ್ರಶಸ್ತಿ ನೀಡಿ ವಿದ್ಯಾರ್ಥಿಗೆ ಅಭಿನಂದಿಸಿದ್ದಾರೆ.

ಈ ಪ್ರಬಂಧಕ್ಕೆ ವಿಜ್ಞಾನ ಶಿಕ್ಷಕರಾದ ಕೊಟ್ರಬಸಪ್ಪ ಕಡ್ಲಿ .ಅವರು ಮಾರ್ಗದರ್ಶನ ನೀಡಿದ್ದು, ವಿದ್ಯಾರ್ಥಿಯ ಈ ಸಾಧನೆಗೆ ಡಿಡಿಪಿಐ ಶಾಂತಗೌಡ ಪಾಟೀಲ್, ಡಯಟ್ ಪ್ರಾಂಶುಪಾಲರಾದ ಶ್ರೀಶೈಲ ಬಿರಾದರ್, ಶಹಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಶಿಬಾ ಜಲಿಯನ್, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ನ ರಾಜ್ಯ ಕಾರ್ಯಕಾರಣಿ ಸದಸ್ಯ ಬಸವಲಿಂಗಪ್ಪ ಮಲ್ಹಾರ,

ಕ.ರಾ.ವಿ.ಪ. ಜಿಲ್ಲಾಧ್ಯಕ್ಷರಾದ ಭೀಮನಗೌಡ ತಳೆವಾಡ, ಜಿಲ್ಲಾ ಸಂಯೋಜಕರಾದ ಹನುಮಯ್ಯ ಕಲಾಲ್ , ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಬಿ ರಾಜಶೇಖರ ಗೌಡ, ಹಾಗೂ ಜಿಲ್ಲಾ ಶೈಕ್ಷಣಿಕ ಸಂಯೋಜಿಕರಾದ ರಾಚಯ್ಯ ಸ್ವಾಮಿ ಹಿರೇಮಠ, ಮುಖ್ಯ ಗುರುಗಳಾದ ಗಿರಿಯಪ್ಪಗೌಡ ಮೇ.ಟಿ, ಎಸ್.ಡಿ.ಎಮ್.ಸಿ ಅಧ್ಯಕ್ಷ ಶರಣಪ್ಪ ಹಾಗೂ ಸದಸ್ಯರು, ಸಿಬ್ಬಂದಿ ವರ್ಗದವರು ಊರಿನ ನಾಗರಿಕರು ವಿದ್ಯಾರ್ಥಿಗೆ ಸನ್ಮಾನಿಸಿ ಅಭಿನಂದಿಸಿದ್ದಾರೆ.