ಗುಗ್ಗರಹಟ್ಟಿ ಶಿವದೀಕ್ಷಾ ಮಂದಿರದಲ್ಲಿ ನಾಳೆ ಸಂಜೆ
ಹರಗಿನದೋಣಿ ಶ್ರೀಗಳಿಂದ ಶಿವಾನುಭವ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜು.12: ನಗರದ ಗುಗ್ಗರಹಟ್ಟಿಯಲ್ಲಿರುವ ಶ್ರೀಶೈಲ ಭ್ರಮರಾಂಭ ಮಲ್ಲಿಕಾರ್ಜುನ ಸ್ವಾಮಿ ಶಿವದೀಕ್ಷಾ ಮಂದಿರದಲ್ಲಿ ಗುರು ಪೂರ್ಣಿಮೆ ಅಂಗವಾಗಿ ಸಂಜೆ 6.30 ರಿಂದ ಹರಗಿನದೋಣಿಯ ಮಠದ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳ ತುಲಾಭಾರ, ನಂತರ ಅವರಿಂದ ಶಿವಾನುಭವ ನಡೆಯಲಿದೆ.
ಅಲ್ಲದೆ ಭಜನಾ ಕಾರ್ಯಕ್ರಮ, ಪ್ರಸಾದ ವ್ಯವಸ್ಥೆಯೂ ಇರಲಿದೆ ಎಂದು ಶಿವದೀಕ್ಷ ಮಂದಿರದ ರಾಜಶೇಖರಗೌಡ ತಿಳಿಸಿದ್ದಾರೆ.

Attachments area