ಗುಗ್ಗರಹಟ್ಟಿಯ ಕಾರ್ಪೆಂಟರ್ ಭಾಷಾ ಕೊಲೆ ಆರೋಪಿಗಳ ಬಂಧನ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.20: ದುಷ್ಕರ್ಮಿಗಳಿಂದ ನಿನ್ನೆ ರಾತ್ರಿ ನಗರದ ಗುಗ್ಗರಹಟ್ಟಿಯ ಕಾರ್ಪೆಂಟರ್ ಮೆಹಬೂಬ್ ಭಾಷಾ(37) ನನ್ನು ಬರ್ಭರವಾಗಿ ಹತ್ಯೆಮಾಡಿದ್ದಾರೆ.
ಮಗನ‌ಜನ್ಮ ದಿನ ಇದ್ದುದರಿಂದ ಕೇಕ್ ತಂದು ಇನ್ನೇನು ಸಂಭ್ರಮದಿಂದ ಆಚರಿಸಬೇಕು ಎನ್ನುವಷ್ಟರಲ್ಲಿ ದುಷ್ಕರ್ಮಿಗಳು ಪೋನ್ ಮಾಡಿ, ಹೊರಗೆ ಕರೆದು ಮಚ್ಚಿನಿಂದ ಹೊಡೆದು ಹಲ್ಲೆ ಮಾಡಿದ್ದರು.
ಗಾಯಾಗೊಂಡಿದ್ದ ಆತನನ್ನು  ವಿಮ್ಸ್  ಆಸ್ಪತ್ರೆ ಗೆ ಸೇರಿಸಿದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ‌
ಹತ್ಯೆಗೆ ನಿಖರ ಕಾರಣ ತಿಳಿದು
ಬಳ್ಳಾರಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆಯಿಂದ ಕೊಲೆಗೆ ಕಾರಣ ತಿಳಿದು ಬರಬೇಕಿದೆ.
ಈತ ಕಳೆದ ಚುನಾವಣೆಯಲ್ಲಿ ಕೆಆರ್ಪಿ ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡಿದ್ದನಂತೆ.  ಪಕ್ಷದ ಮುಖಂಡರು ಈ ಹತ್ಯೆಯನ್ನು ಖಂಡಿಸಿದ್ದಾರೆ. ಕೊಲೆ ಆರೋಪಿಗಳಾದ  ನಗರದ ಕೋಳಿ ಅನ್ವರ್,  ಕಾಂಗ್ರೆಸ್ ಮುಖಂಡ
ಅಲ್ತಾಪ್, ಸಿರಾಜ್ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರಂತೆ. ರಿಯಲ್ ಎಸ್ಟೇಟ್ ಹಣಕಾಸು ವ್ಯವಹಾರಕ್ಕೆ ಹತ್ಯೆ ಆಗಿದೆ ಎನ್ನಲಾಗುತ್ತಿದೆ

One attachment • Scanned by Gmail