ಗುಂಪು ಗುಂಪಾಗಿ ಸೇರದೆ ಅಂತರವನ್ನು ಕಾಪಾಡಿಕೊಳ್ಳಲು ಕರೆ

ಹರಿಹರ.ಏ.26;  ತರಕಾರಿ, ಹಣ್ಣು, ಹೂವು ಇತರೆ ವ್ಯಾಪಾರಸ್ಥರು ಗುಂಪುಗುಂಪಾಗಿ ಸೇರಿಸಿಕೊಳ್ಳದೆ  ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ವ್ಯಾಪಾರ ವಹಿವಾಟು ನಡೆಸಬೇಕು ಎಂದು ನಗರಸಭೆ ಪೌರಾಯುಕ್ತೆ ಎಸ್ ಲಕ್ಷ್ಮಿ ಹೇಳಿದರು ನಗರದ ಮಹಾತ್ಮಗಾಂಧಿ ಕ್ರೀಡಾಂಗಣ ಮೈದಾನ ಮತ್ತು ಹಳೆ ಕೋರ್ಟ್ ಮತ್ತು ಇತರೆ ಪ್ರದೇಶಗಳಿಗೆ ತೆರಳಿ ಸ್ಥಳ ಪರಿಶೀಲಿಸಿ ಮಾತನಾಡಿದ ಅವರು ದೊಡ್ಡಿಬೀದಿ ಮಾರುಕಟ್ಟೆಯಲ್ಲಿ ಪ್ರತಿದಿನವೂ ಸಾರ್ವಜನಿಕರು ಗುಂಪು ಗುಂಪಾಗಿ ಬಂದು ವ್ಯಾಪಾರ ವಹಿವಾಟು  ಮಾಡುತ್ತಿದ್ದಾರೆ   ಇದರಿಂದ ಮಹಾಮಾರಿ ವೈರಸ್ಸನ್ನು ನಿಯಂತ್ರಣಗೊಳಿಸುವುದಕ್ಕೆ ಸಾಧ್ಯವಾಗುವುದಿಲ್ಲ ಆದ್ದರಿಂದ ದೊಡ್ಡಿ ಬೀದಿಯಲ್ಲಿ ತರಕಾರಿ ಮಾರುಕಟ್ಟೆ ವ್ಯಾಪಾರ ವಹಿವಾಟವನ್ನು ಸ್ಥಗಿತಗೊಳಿಸಿ ಮಹಾತ್ಮಗಾಂಧಿ ಕ್ರೀಡಾಂಗಣ ಮೈದಾನದಲ್ಲಿ ಹೋಲ್ ಸೇಲ್ ವ್ಯಾಪಾರ ಪ್ರತ್ಯೇಕ ಜಾಗ ಮತ್ತು ದಿನನಿತ್ಯ ತರಕಾರಿ ಮಾರಾಟ ಮಾಡುವವರಿಗೆ ಪ್ರತ್ಯೇಕ ಜಾಗ ಮಾಡಿ ಅಂತರವನ್ನು ಕಾಯ್ದುಕೊಂಡು ತಮ್ಮಗಳ ವ್ಯಾಪಾರ ವಹಿವಾಟುಗಳನ್ನು ನಡಸಬೇಕು ವ್ಯಾಪಾರ ಮಾಡುವಂಥವರು ಪ್ರತಿಯೊಬ್ಬರೂ ಮಾಸ್ಕ್ ಧರಿಸಿ ತಮ್ಮಲ್ಲೇ ಬರುವಂಥ ಗ್ರಾಹಕರಿಗೂ ಮಾಸ್ಕ್ ನ್ನು ಹಾಕಿಕೊಂಡು  ಬಂದವರಿಗೆ ಮಾತ್ರ ತರಕಾರಿ ದಿನಸಿ ದಿನನಿತ್ಯ ಗೃಹಬಳಕೆ ವಸ್ತುಗಳನ್ನು ನೀಡಲಾಗುತ್ತದೆ ಎಂದು ವ್ಯಾಪಾರಸ್ಥರು ತಾಕೀತು ಮಾಡಬೇಕು ಮತ್ತು ಅವರಿಗೆ ಜಾಗೃತಿಯನ್ನು ಮೂಡಿಸಬೇಕು ಎಂದರು 
ಹೋಲ್ ಸೇಲ್ ಮತ್ತು ಚಿಲ್ಲರೆ ವ್ಯಾಪಾರ ಮಾಡುವಂಥವರು ಸಮಾನ ಮನಸ್ಕರಾಗಿ  ವ್ಯಾಪಾರ ವಹಿವಾಟುಗಳನ್ನು ಮಾಡುವುದಕ್ಕೆ ದೃಢ ನಿರ್ಧಾರಗಳನ್ನು ಮಾಡಿಕೊಳ್ಳಬೇಕು ತಮ್ಮಲ್ಲೇ ವೈಮನಸ್ಯಗಳನ್ನು ಬಿಟ್ಟು ಆಕೆ ಜಗತ್ತನ್ನೇ ಕಾಡುತ್ತಿರುವ ಮಹಾಮಾರಿ ವೈರಸ್ ನಿಂದ ಸಾಕಷ್ಟು  ಸಾವು ನೋವಿನ ಸಂಖ್ಯೆ ದಿನದಿನಕ್ಕೆ ಜಾಸ್ತಿ ಜಾಸ್ತಿ ಆಗುತ್ತಿವೆ ಇದಕ್ಕೆಲ್ಲಾ ಕಾರಣ ನಮ್ಮ ನಿರ್ಲಕ್ಷ್ಯತನ ಸರ್ಕಾರ ಕಟ್ಟುನಿಟ್ಟಾಗಿ ಈ ಆದೇಶವನ್ನು ಜಾರಿ ಮಾಡಿದರೂ ಅದನ್ನು ಪರಿಪಾಲನೆ ಮಾಡುವುದರಲ್ಲಿ ಹಿಂದೇಟು ಹಾಕುತ್ತಿದ್ದೇವೆ ಇದರ ಪರಿಣಾಮ ಮುಂದೆ ನಾವು ನೀವು ಎದುರಿಸಬೇಕಾಗುತ್ತದೆ. ನಗರಸಭೆ, ಕಂದಾಯ ಇಲಾಖೆ ಪೊಲೀಸ್ ಆರೋಗ್ಯ ತಾಲ್ಲೂಕು ಪಂಚಾಯಿತಿ ವೈದ್ಯರುಗಳು ಸಿಬ್ಬಂದಿ ವರ್ಗದವರು ದಿನದ 24ತಾಸುಗಳು ಸಾರ್ವಜನಿಕರ ಆರೋಗ್ಯ ಹಿತ ಕಾಪಾಡುವುದಕ್ಕೆ ಅಧಿಕಾರಿಗಳು ಆರೋಗ್ಯವನ್ನು ಲೆಕ್ಕಿಸದೆ ಹಗಲಿರುಳು ಕರ್ತವ್ಯದಲ್ಲಿ ತಲ್ಲೀನರಾಗಿದ್ದಾರೆ ವ್ಯಾಪಾರ ವಹಿವಾಟು ಮಾಡುವಂಥವರು ಅಧಿಕಾರಿಗಳು ನಿಗದಿತ ಸ್ಥಳಗಳನ್ನು ತೋರಿಸುವ ಜಾಗದಲ್ಲೇ ತಮ್ಮ ವ್ಯಾಪಾರ ವಹಿವಾಟುಗಳನ್ನು ಮಾಡಿ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಮಹಾಮಾರಿ ವೈರಸ್ ನಿಯಂತ್ರಣ ತರುವುದಕ್ಕಾಗಿ ಇಲಾಖೆಗಳೊಂದಿಗೆ ಸಹಕರಿಸಬೇಕೆಂದರು ಇಂದು ಮತ್ತು ನಾಳೆ ವೀಕೆಂಡ್ ಕರ್ಫ್ಯೂ ಇರುವುದರಿಂದ ಬೆಳಿಗ್ಗೆ 6ರಿಂದ ಹತ್ತು ಗಂಟೆಯವರೆಗೂ ಮಾತ್ರ ವ್ಯಾಪಾರ ವಹಿವಾಟುಗಳನ್ನು ಮಾಡತಕ್ಕದ್ದು ನಂತರ ಯಾವುದೇ ವ್ಯಾಪಾರ ವಹಿವಾಟುಗಳನ್ನು ಮಾಡಿದರೆ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸಿ ಕೇಸನ್ನು ದಾಖಲು ಮಾಡಲಾಗುತ್ತದೆ ಎಂದು ಹೇಳಿದರು ಈ ಸಂದರ್ಭದಲ್ಲಿ ಪರಿಸರ ಅಭಿಯಂತರಾದ ತಿಮ್ಮಣ್ಣ .ಆರ್ ಐ ವಸಂತ್ .ಬೆಣ್ಣಿ ಅಣ್ಣಪ್ಪ. ಎಚ್ ಪರಸಪ್ಪ ,ಅಂಬಣ್ಣ, ಜಿಗಳಿ ಮಂಜುನಾಥ್ ,ನಾಗರಾಜ್ ,ಆರೋಗ್ಯ ನಿರೀಕ್ಷಕ ರವಿ ಪ್ರಕಾಶ್ .ಫುಟ್ ಪಾತ್ ವ್ಯಾಪರಸ್ಥರ ಸಂಘದ ನಾಮ ನಿರ್ದೇಶನ ಸದಸ್ಯರ ಗಳು ಪೋಲಿಸ್ ಇಲಾಖೆಯ ಅಧಿಕಾರಿ ಸಿಬ್ಬಂದಿ ವರ್ಗದವರು ಇದ್ದರು