ಗುಂತಕಲ್ ಚಿಕ್ಕಜಾಜೂರು ರೈಲಿಗೆ ಸ್ವಾಗತ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.25: ಕೋವಿಡ್ ಕಾರಣದಿಂದ ಸ್ಥಗಿತಗೊಂಡಿದ್ದ ಗುಂತಕಲ್ -ಚಿಕ್ಕಜಾಜೂರು ಎಕ್ಸ್ ಪ್ರೆಸ್ ರೈಲು ಮತ್ತೆ ಇಂದಿನಿಂದ ತನ್ನ ಪಯಣ ಆರಂಭಿಸಿದೆ.
ಇಂದು ಬೆಳಿಗ್ಗೆ  9ಗಂಟೆಗೆ ಬಳ್ಳಾರಿಗೆ ಆಗಮಿಸಿದ ರೈಲನ್ನು  ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿಯ  ಅಧ್ಯಕ್ಷ ಕೆ. ಎಂ. ಮಹೇಶ್ವರ ಸ್ವಾಮಿಯ ನೇತೃತ್ವದಲ್ಲಿ ರೈಲಿಗೆ ಪೂಜೆ ಸಲ್ಲಿಸುವುದರ ಮೂಲಕ  ಸ್ವಾಗತಿಸಲಾಯಿತು.
ಈ ಹಿಂದೆ ಪ್ಯಾಸೆಂಜರ್ ರೈಲು ಆಗಿ ಸಂಚರಿಸುತ್ತಿದ್ದ ಈ ರೈಲು ಈಗ ಎಕ್ಸ್ಪ್ರೆಸ್ ರೈಲ್ ಆಗಿದೆ.
ಈ ಸಂದರ್ಭದಲ್ಲಿ ರೈಲು ನಿಲ್ದಾಣದ ಅಧೀಕ್ಷ ಶೇಷಾದ್ರಿ, ತುಂಗಭದ್ರ ರೈತಸಂಘದ ಅಧ್ಯಕ್ಷ ದರೂರು ಪುರುಷೋತ್ತಮ ಗೌಡ,   ಜಿಲ್ಲಾ ಕಸಾಪ ಅಧ್ಯಕ್ಷ ನಿಷ್ಠಿರುದ್ರಪ್ಪ, ಜನಕಲ್ಯಾಣ ರಕ್ಷಣಾ ವೇದಿಕೆ ಅಧ್ಯಕ್ಷ ಬಸವರಾಜಸ್ವಾಮಿ, ವಕೀಲರ ಸಂಘದ ಅಧ್ಯಕ್ಷ ಕೆ. ಯರಿಗೌಡ ಸಮಿತಿಯ ಪದಾಧಿಕಾರಿಗಳು ಎಚ್. ಕೆ. ಗೌರಿಶಂಕರಸ್ವಾಮಿ, ಕೆ.ಎಂ. ಕೊಟ್ರೇಶ, ಗಂಗಾವತಿ ವೀರೇಶ್, ಸೂರ್ಯಪ್ರಕಾಶ್,  ಜಾಲಿಹಾಳ್ ಶ್ರೀಧರ್ ಗೌಡ, ಕೇದಾರ ಸ್ವಾಮಿ ಮತ್ತಿತರರು ಭಾಗವಹಿಸಿದ್ದರು.

Attachments area