ಗುಂಡ್ಲುಪೇಟೆ ದರೋಡೆ ಪ್ರಕರಣ: 10 ಮಂದಿ ದರೋಡೆಕೋರರ ಬಂಧನ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಅ.15:- ಊಟಿ ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಗುಂಡ್ಲುಪೇಟೆ ತಾಲೂಕಿನ ಬೆಂಡಗಳ್ಳಿ ಗೇಟ್ ಬಳಿ ಮಧ್ಯರಾತ್ರಿ ನಡೆದಿದ್ದ ದರೋಡೆ ಪ್ರಕರಣವನ್ನು ಬೇಧಿಸಿದ್ದು 10 ಮಂದಿ ಬಂಧಿಸಿರುವುದಾಗಿ ಪೆÇಲೀಸ್ ವರಿμÁ್ಠಧಿಕಾರಿ ಪದ್ಮನಿ ಸಾಹು ತಿಳಿಸಿದ್ದಾರೆ.
ಚಾಮರಾಜನಗರದಲ್ಲಿ ಈ ಸಂಬಂಧ ಪತ್ರಿಕಾ ಪ್ರಕಟಣೆ ಮೂಲಕ ಎಸ್ಪಿ ಮಾಹಿತಿ ನೀಡಿದ್ದು, ಈಚರ್ ವಾಹನ, ಕಾರುಗಳನ್ನು ಬಳಸಿಕೊಂಡು ಕೇರಳದ ಉದ್ಯಮಿರಹೀಂರವರಕಾರುಅಡ್ಡಗಟ್ಟಿ 40 ಲಕ್ಷ ನಗದು, ಮೊಬೈಲ್ ಹಾಗೂ ಆಪಲ್ ವಾಚ್‍ನ್ನುದರೋಡೆ ಮಾಡಿದ್ದ ಪ್ರಕರಣ ಸಂಬಂಧಗುಂಡ್ಲುಪೇಟೆ ವೃತ್ತ ನಿರೀಕ್ಷಕರನೇತೃತ್ವದಲ್ಲಿಚಾಮರಾಜನಗರ ಪೂರ್ವಠಾಣೆಇನ್ಸ್‍ಪೆಕ್ಟರ್, ಬೇಗೂರು ಹಾಗೂ ತೆರಕಣಾಂಬಿ ಠಾಣೆಯಸಬ್‍ಇನ್ಸ್‍ಪೆಕ್ಟರ್ ಅವರನ್ನೊಳಗೊಂಡ ತಂಡ ಪ್ರಕರಣ ಬೇಧಿಸಿ 10 ಮಂದಿಯನ್ನು ಬಂಧಿಸಲಾಗಿದೆಎಂದು ತಿಳಿಸಿದ್ದಾರೆ.
ಬಂಧಿತ ಆರೋಪಿಗಳಿಂದ ದರೋಡೆ ಮಾಡಿದ್ದ ಹಣದಲ್ಲಿ 20.91 ಲಕ್ಷ ನಗದು, 1 ಕಾರು, ಆಪಲ್ ವಾಚ್, ಕೃತ್ಯಕ್ಕೆ ಬಳಸಿದ್ದ 3 ಕಾರು ವಶಪಡಿಸಿಕೊಳ್ಳಲಾಗಿದೆ, ಪ್ರಮುಖ ಆರೋಪಿಗಳು ಪತ್ತೆಯಾಗಬೇಕಿದೆಎಂದು ಮಾಹಿತಿ ನೀಡಿದ್ದಾರೆ.
ಕಳೆದ 29 ರರಾತ್ರಿಗುಂಡ್ಲುಪೇಟೆತಾಲೂಕಿನ ಬೆಂಡಗಳ್ಳಿ ಗೇಟ್ ಬಳಿ ಕೇರಳ ಮೂಲದಉದ್ಯಮಿರಹೀಂ ಎಂಬವರು 40 ಲಕ್ಷ ಹಣವನ್ನುತೆಗೆದುಕೊಂಡು ಹೋಗುತ್ತಿದ್ದಾಗ 10 ಕ್ಕೂ ಹೆಚ್ಚು ಜನರ ಗುಂಪು ದರೋಡೆ ಮಾಡಿದ್ದರು. ಈ ಸಂಬಂಧ ಬೇಗೂರು ಪೆÇಲೀಸ್‍ಠಾಣೆಯಲ್ಲಿ ಪ್ರಕರಣಕೂಡದಾಖಲಾಗಿದೆ.