ಗುಂಡೇಟಿಗೆ ದರೋಡೆಕೋರ ಬಲಿ

ಶ್ರೀನಗರ,ಏ.೩- ಜಮ್ಮು ಮತ್ತು ಕಾಶ್ಮೀರದ ಕಥುವಾದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ದರೋಡೆಕೋರನೊಬ್ಬ ಗುಂಡೇಟಿಗೆ ಬಲಿಯಾಗಿದ್ದು, ಓರ್ವ ಪೊಲೀಸ್ ಅಧಿಕಾರಿ ಗಾಯಗೊಂಡು ಸಾವನ್ನಪ್ಪಿದ್ದಾರೆ
ವೈದ್ಯಕೀಯ ಕಾಲೇಜು ಆವರಣದಲ್ಲಿ ದರೋಡೆಕೋರರೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಸಬ್ ಇನ್ಸ್‌ಪೆಕ್ಟರ್ ದೀಪಕ್ ಶರ್ಮಾ ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಯಿತಾದರೂ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಎನ್‌ಕೌಂಟರ್‌ನಲ್ಲಿ ವಿಶೇಷ ಪೊಲೀಸ್ ಅಧಿಕಾರಿಯೂ ಗಾಯಗೊಂಡಿದ್ದಾರೆ. ವಾಸುದೇವ್ ನೇತೃತ್ವದ ಶುನೂ ಗ್ರೂಪ್ ಎಂದು ಕರೆಯಲ್ಪಡುವ ಗ್ಯಾಂಗ್‌ನ ಸದಸ್ಯರನ್ನು ಪೊಲೀಸ್ ತಂಡ ಬೆನ್ನಟ್ಟಿದೆ. ದರೋಡೆಕೋರರು ತಮ್ಮ ಕಾರನ್ನು ವೈದ್ಯಕೀಯ ಕಾಲೇಜು ಕ್ಯಾಂಪಸ್ ಒಳಗೆ ನುಗ್ಗಿಸಿದರು ಅಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಈ ಘಟನೆ ನಡೆದಿದೆ
ಎನ್‌ಕೌಂಟರ್‌ನಲ್ಲಿ ಒರ್ವ ದರೋಡೆಕೋರನನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಈ ವೇಲೆ ತಲೆಗೆ ಗುಂಡು ತಗುಲಿ ಸಬ್ ಇನ್ಸ್ ಪೆಕ್ಟರ್ ದೀಪಕ್ ಶರ್ಮಾ ತೀವ್ರವಾಗಿ ಗಾಯಗೊಂಡಿದ್ದರು. ಕಥುವಾದಲ್ಲಿ ಪ್ರಾಥಮಿಕ ಆರೈಕೆಯ ನಂತರ, ಗಾಯಗೊಂಡ ಅಧಿಕಾರಿಯನ್ನು ಪಂಜಾಬ್‌ನ ಪಠಾಣ್‌ಕೋಟ್‌ಗೆ ಸ್ಥಳಾಂತರಿಸಲಾಯಿತು. ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ:

ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಅಧಿಕಾರಿಗೆ ಗೌರವ ಸಲ್ಲಿಸಿದ್ದಾರೆ. “ಕಥುವಾದಲ್ಲಿ ಮೋಸ್ಟ್ ವಾಂಟೆಡ್ ದರೋಡೆಕೋರನನ್ನು ವೀರಾವೇಶದಿಂದ ಹೋರಾಡಿ ತಟಸ್ಥಗೊಳಿಸುವಾಗ ಸರ್ವೋಚ್ಚ ತ್ಯಾಗ ಮಾಡಿದ ಪಿಎಸ್‌ಐ ದೀಪಕ್ ಶರ್ಮಾ ಅವರ ಶೌರ್ಯ ಮತ್ತು ಅದಮ್ಯ ಧೈರ್ಯ ಸ್ಮರಿಸುತ್ತೇನೆ ಎಂದಿದ್ಧಾರೆ

ಅಧಿಕಾರಿಯ ಪ್ರತಿ ರಕ್ತದ ಹನಿಗೂ ಪ್ರತೀಕಾರ ತೀರಿಸಿಕೊಳ್ಳಲಾಗುವುದು. “ರಾಷ್ಟ್ರ ಹುತಾತ್ಮರ ಕುಟುಂಬ ಮತ್ತು ಜೊತೆ ಒಗ್ಗಟ್ಟಿನಿಂದ ನಿಂತಿದೆ, ಅವರ ಸಮರ್ಪಣೆ, ಸ್ಥೈರ್ಯ ಮತ್ತು ವಿವಿಧ ಸವಾಲುಗಳು ಮತ್ತು ಎದುರಾಳಿಗಳ ವಿರುದ್ಧ ಹೋರಾಡುವ ಧೈರ್ಯ ಸ್ಫೂರ್ತಿ ನೀಡುತ್ತಲೇ .ಹುತಾತ್ಮರ ಪ್ರತಿ ಹನಿ ರಕ್ತಕ್ಕೆ ಪ್ರತೀಕಾರ ತೀರಿಸಿಕೊಳ್ಳುತ್ತೇವೆ ಎಂದು ಗುಡುಗಿದ್ದಾರೆ