ಗುಂಡುಮುಣುಗು : ರೈತನ ಮೇಲೆ ಕರಡಿಗಳ ದಾಳಿ


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಆ 24 :- ಬೆಳ್ಳಂಬೆಳಿಗ್ಗೆ ಬಹಿರ್ದೆಸೆಗೆ ಹೋಗಿ ಬರುತ್ತಿದ್ದ ರೈತನೋರ್ವನ ಮೇಲೆ ತಾಯಿ – ಮರಿ ಕರಡಿಗಳು ಸೇರಿ ದಾಳಿ ನಡೆಸಿ ಹಿಗ್ಗಾ ಮುಗ್ಗಾ ತಲೆ ಮುಖ ಹಾಗೂ ಕೈಗಳಿಗೆ ಪರಚಿ, ಕಚ್ಚಿ ತೀವ್ರಸ್ವರೂಪದ ಗಾಯಗೊಳಿಸಿರುವ ಘಟನೆ ಇಂದು ನಸುಕಿನ ಜಾವ 5-15ಗಂಟೆ ತಾಲೂಕಿನ ಗುಂಡುಮುಣುಗು ಗ್ರಾಮದ ಕೂಗಳತೆ ದೂರದ  ಸಿದ್ದಾಪುರ ರಸ್ತೆಯಲ್ಲಿ ಜರುಗಿದ್ದು ಗಾಯಳು ಬಳ್ಳಾರಿ ವಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗುಂಡುಮುಣುಗು ಗ್ರಾಮದ ರೈತ ಹಾಗೂ ಹಿಟ್ಟಿನ ಗಿರಣಿ ಮಾಲೀಕ ಬಿ.ಎಂ. ಶರಣಯ್ಯ (65)  ಕರಡಿಗಳ ದಾಳಿಯಿಂದ ತೀವ್ರಗಾಯಗೊಂಡವನಾಗಿದ್ದು ಚಿಕ್ಕಜೋಗಿಹಳ್ಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿ ವಿಮ್ಸ್ ಗೆ ಕಳುಹಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ವಿವರ :
ಇಂದು ನಸುಕಿನ ಜಾವ ಗುಂಡುಮುಣುಗು ಗ್ರಾಮದ ಕೂಗಳತೆ ದೂರದಲ್ಲಿರುವ ಸಿದ್ದಾಪುರ ರಸ್ತೆಯಲ್ಲಿ ಗ್ರಾಮದ ಶರಣಯ್ಯ ಎಂಬಾತನು ಬಹಿರ್ದೆಸೆಗೆಂದು ಹೋಗಿಬರುವಾಗ ಸಿದ್ದಾಪುರ ಕಡೆಯಿಂದ ಬರುತ್ತಿದ್ದ ತಾಯಿ – ಮರಿ ಕರಡಿಗಳು ಮರಿ ಕರಡಿ ರಕ್ಷಣೆ ಮಾಡಿಕೊಳ್ಳುವ ಉದ್ದೇಶದಿಂದ ತಾಯಿ ಕರಡಿ ಶರಣಯ್ಯನ ಮೇಲೆ ಏಕಾಏಕಿ ದಾಳಿ ಮಾಡಿ ನಡೆಸಿದೆ ನಂತರ ಮರಿ ಕರಡಿ ಸಹ ದಾಳಿ ನಡೆಸಿ ಶರಣಯ್ಯ ತಲೆ ಮುಖ ಹಾಗೂ ಕೈ ಗಳನ್ನು ಹಿಗ್ಗಾಮುಗ್ಗ ಪರಚಿ ಕಚ್ಚಿ ಗಾಯಗೊಳಿಸಿವೆ ಅಲ್ಲಿಯೇ ಅಂಬೇಡ್ಕರ್ ಕಾಲೋನಿಯಲ್ಲಿನ ನಾಯಿಗಳು ಜೋರಾಗಿ ಬೊಗಳುತ್ತಿದ್ದದ್ದನ್ನು ಗಮನಿಸಿದ ಕಾಲೋನಿಯ ಜನತೆ ತಕ್ಷಣ ಹೋಗಿದ್ದರಿಂದ ಕರಡಿಗಳು ಅಲ್ಲಿಂದ  ಓಡಿಹೋಗಿವೆ ತಕ್ಷಣ ಗಾಯಳು ಶರಣಯ್ಯರನ್ನು ವಾಹನದಲ್ಲಿ ಚಿಕ್ಕಜೋಗಿಹಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್ ಗೆ ಕಳುಹಿಸಲಾಗಿದೆ ಹಾಗೂ ಈ ಘಟನೆ ಕುರಿತಾಗಿ ಗುಡೇಕೋಟೆ ಅರಣ್ಯ ಇಲಾಖೆಗೂ ಮಾಹಿತಿ ತಿಳಿಸಲಾಗಿದೆ ಎಂದು ಗುಂಡುಮುಣುಗು ತಿಪ್ಪೇಸ್ವಾಮಿ ಪತ್ರಿಕೆಗೆ ತಿಳಿಸಿದ್ದಾರೆ.
@12bc = ಜನತೆಗೊಂದು ಸಂದೇಶ :
ತಾಲೂಕಿನಲ್ಲಿ ಹೆಚ್ಚಾಗಿ ಕರಡಿಗಳು ಇರುವ ವ್ಯಾಪ್ತಿಯಲ್ಲಿ ಜನರು ಒಬ್ಬೊರಾಗಿ ಓಡಾಡದೆ ಗುಂಪುಗುಂಪಾಗಿ ಮತ್ತು ಕತ್ತಲವಾತಾವರಣದಲ್ಲಿ ಬಹಿರ್ದೆಸೆಗೆ ಗ್ರಾಮದ ಹೊರಗಡೆ ಬಯಲು ಪ್ರದೇಶಕ್ಕೆ ಹೋಗದೆ ಮನೆಯ ಮುಂದಿನ ಶೌಚಾಲಯ ಬಳಸಿಕೊಳ್ಳುವ ಮೂಲಕ ಕರಡಿದಾಳಿಯಿಂದ ಮುಕ್ತರಾಗಿ ಎಂದು ಗುಡೇಕೋಟೆ  ವಲಯ ಅರಣ್ಯಾಧಿಕಾರಿ ರೇಣುಕಾ ಪತ್ರಿಕೆ ಮೂಲಕ ಜನತೆಗೆ ಕಿವಿ ಮಾತಿನ ಸಂದೇಶ ತಿಳಿಸಿದ್ದಾರೆ.
ತಾಯಿ -ಮರಿ ಕರಡಿಗಳು ಇಂದು ನಸುಕಿನ ಜಾವ ಬಹಿರ್ದೆಸೆಗೆ ಹೋಗಿ ಬರುತ್ತಿದ್ದ ಗುಂಡುಮುಣುಗು ರೈತ ಶರಣಯ್ಯ ಎಂಬುವವರ  ಮೇಲೆ ಮರಿ ಕರಡಿ ಇರುವುದರಿಂದ ಅದರ ರಕ್ಷಣೆಗಾಗಿ  ತಾಯಿ ಕರಡಿ ದಾಳಿ ಮಾಡಿ ತೀವ್ರಗಾಯಾಗೊಳಿಸಿರುವುದು ತಿಳಿದುಬಂದಿದೆ ಅಲ್ಲದೆ ಅವರನ್ನು ಬಳ್ಳಾರಿ ವಿಮ್ಸ್ ಗೆ ದಾಖಲು ಮಾಡಲಾಗಿದ್ದು ವೈದ್ಯರ ನೀಡುವ ಗಾಯಳು ವರದಿಯಂತೆ ತಕ್ಷಣ ಅವರಿಗೆ 60ಸಾವಿರ ಪರಿಹಾರದ ಚೆಕ್ ನೀಡಲಾಗುತ್ತಿದ್ದು ನಂತರ ಅವರ ಚಿಕಿತ್ಸೆಯ ಬಿಲ್ ಗಳ ಆಧಾರೀತವಾಗಿ ಗಾಯಳುವಿನ ಸಂಪೂರ್ಣ ಚಿಕಿತ್ಸಾ ವೆಚ್ಚದ ಪರಿಹಾರ ನೀಡಲಾಗುವುದು, ಇದೇ ಮೊದಲ ಬಾರಿಗೆ ಗುಂಡುಮುಣುಗು ಗ್ರಾಮದಲ್ಲಿ ಈ ಘಟನೆ ಸಂಭವಿಸಿದ್ದು ನಂತರ ಬಳ್ಳಾರಿ ವಿಮ್ಸ್ ಗೆ ಹೋಗಿ ಗಾಯಳುವನ್ನು ಭೇಟಿ ಮಾಡಿ ಚಿಕಿತ್ಸೆ ಕುರಿತಾದ ವೈದ್ಯರ ಮಾಹಿತಿ ಪಡೆಯುವುದಾಗಿ  ತಾಲೂಕಿನ ಗುಡೇಕೋಟೆ ಕರಡಿಧಾಮದ ಅರಣ್ಯಾಧಿಕಾರಿ ರೇಣುಕಾ ತಿಳಿಸಿದರು.