
ಶಹಾಬಾದ:ಎ.3:ಮುಂದಿನ ಚುನಾವಣೆಯಲ್ಲಿ ಗುಂಡು, ತುಂಡು, ದುಡ್ಡಿನ ಅಮಿಷಕ್ಕೆ ಒಳಗಾಗದೆ. ಯಾರು ಸಮಾಜ ಮುಖಿ ಕೆಲಸಮಾಡುತ್ತಾರೆ ಅಂತಹವರಿಗೆ ಆಯ್ಕೆ ಮಾಡಿ ಎಂದು ಬೆಂಗಳೂರಿನ ಶ್ರೀ ಸಂಪೂರ್ಣ ವರಮಹಾಲಕ್ಷ್ಮೀ ಮಹಾ ಸಂಸ್ಥಾನದ ವ್ಯವಸ್ಥಾಪಕ ನಿರ್ಧೇಶಕ ಬ್ರಹಾಂಡ ಗೂರೂಜಿ ನರೇಂದ್ರ ಬಾಬು ಶರ್ಮಾ ಸಲಹೆ ನೀಡಿದರು.
ಅವರು ಶುಕ್ರವಾರ ಸಂಜೆ ಶಹಾಬಾದ್ ತಾಲೂಕಿನ ತೊನಸನಳ್ಳಿ (ಎಸ್) ಗ್ರಾಮದಲ್ಲಿ ನಡೆದ ಶ್ರೀ ಅಲ್ಲಮಪ್ರಭು, ಸುಲ್ತಾನ ಅಹ್ಮದ ಶಾಹವಲಿ ಜಾತ್ರಾ ಮಹೋತ್ಸವ, ರಥಙÉೂೀತ್ಸವ ಹಾಗೂ ಲಕ್ಷ ದೀಪೋತ್ಸವ ಕಾರ್ಯಕ್ರಮದ ನಿಮಿತ್ತ ನಡೆದ ಧರ್ಮ ಸಭೆಯ ಸಾನಿಧ್ಯ ವಹಿಸಿ ಮಾತನಾಡುತ್ತ, ದೇವರು ಗರ್ಭಗುಡಿಯಿಂದ ರಥೋತ್ಸವ ಮೂಲಕ ಭಕ್ತರನ್ನು ಕಾಣಲು ಬರುತ್ತಾನೆ, ಅಂತಹ ಸಂದರ್ಭದಲ್ಲಿ ಭಕ್ತರು ಎಲ್ಲವನ್ನು ದೇವರಿಗೆ ಅರ್ಪಣೆ ಮಾಡಿದಾಗ ಮಾತ್ರ ದೇವರು ಒಲಿಯುತ್ತಾನೆ, ಯಾವುದೇ ದೈವಿ ಕ್ಷೇತ್ರಕ್ಕೆ ಹೋದಾಗ ಅಹಂಕಾರ ಪಡಬೇಡಿ, ಗುರುವಿನ ದರ್ಶನದಿಂದ ಪುಣ್ಯಪ್ರಾಪ್ತಿ, ಸಾಧುವಿನ ದರ್ಶನದಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ಹೇಳಿ, ಭಾರತ ಮುಂದಿನ 30 ವರ್ಷದಲ್ಲಿ ಉತ್ತರ, ದಕ್ಷಿಣ ಎಂದು ಎರಡು ಭಾಗವಾಗಿ ಒಡೆದು ಹೋಗುತ್ತದೆ, ಕರ್ನಾಟಕ ರಾಜ್ಯ ಮೂರು ಹೋಳಾಗುತ್ತದೆ, ಇದು ಶತಸಿದ್ದ, ಇದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದು ಭವಿಷ್ಯ ನುಡಿದರು.
ಪ್ರವಚನ ಭಾಸ್ಕರ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸೂಗೂರ (ಕೆ)ನ ಗುರು ರುದ್ರಮುನೇಶ್ವರ ಹಿರೇಮಠದ ಡಾ.ಚನ್ನರುದ್ರಮುನಿ ಶಿವಾಚಾರ್ಯರು ಆಶೀರ್ವಚನ ನೀಡುತ್ತ ಗುರುವಿನ ಬಳಿ ಬಂದಾಗ ನಮ್ಮ ಚಿಂತೆಗಳನ್ನು ಬಿಟ್ಟು, ಚಿಂತನ ಮಾಡಬೇಕೆಂದು ಹೇಳಿ, ಕಾಯಾ, ವಾಚಾ, ಮನಾ ಲಕ್ಷವಿಟ್ಟು ದೀಪಬೆಳಗಿಸುವದೇ ಲಕ್ಷ ದೀಪೋತ್ಸವವಾಗಿದೆ.
ಕಲಬುರಗಿ ಗ್ರಾಮೀಣ ಮತಕ್ಷೇತ್ರ ಶಾಸಕ ಬಸವರಾಜ ಮತ್ತಿಮಡು ಉದ್ಘಾಟಿಸಿದರು, ಚಿತ್ತಾಪುರದ ಕಂಬಳೇಶ್ವರ ಸಂಸ್ಥಾನ ಮಠದ ಸೋಮಶೇಖರ ಶಿವಾಚಾರ್ಯರು, ಮಳಖೇಡದ ಸೈಯದ್ ಶಾಹಾ ಮುಸ್ತಫಾ ಖಾದ್ರಿ ಸಜ್ಜಾದ ನಶೀನ್ ಅಶೀರ್ವಚನ ನೀಡಿದರು. ಮಾಲಗತ್ತಿಯ ಚನ್ನಬಸವ ಶರಣರು, ಡಾ.ಸೌರಭ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ವಿಧಾನ ಪರಿಷತ್ ಮಾಜಿ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಬೋಳಿ, ಕೋಲಿ ಸಮಾಜದ ಎಸ್‍ಟಿ ಹೋರಾಟ ಸಮಿತಿ ರಾಜ್ಯ ಅಧ್ಯಕ್ಷ ಲಚ್ಚಪ್ಪ ಜಮಾದಾರ, ರಾಷ್ಟ್ರೀಯ ಕೋಲಿ ಸಮಾಜದ ಬಳ್ಳಾರಿ ಜಿಲ್ಲಾ ಅಧ್ಯಕ್ಷ ದತ್ತಾತ್ರೇಯರೆಡ್ಡಿ ಮುದಿರಾಜ, ಕಿರುತೆರೆ ನಟಿ ಪ್ರಿಯಾಂಕ್ ಮಾತನಾಡಿದರು. ವೇದಿಕೆ ಮೇಲೆ ಚಿತ್ತಾಪುರ ಬಿಸಿಸಿ ಅಧ್ಯಕ್ಷ ಭೀಮಣ್ಣ ಸಾಲಿ, ಬಿಜೆಪಿ ಮುಖಂಡ ಶರಣಪ್ಪ ತಳವಾರ, ಅಣವೀರ ಇಂಗಿನಶೆಟ್ಟಿ, ರಾಜಶೇಖರ ಸೇರಿ, ನಿಂಗಣ್ಣ ಹುಳಗೋಳ, ಮಹಾದೇವ ಬಂದಳ್ಳಿ, ಮಲ್ಲಿಕಾರ್ಜುನ ಗುಡುಬಾ, ಜಯಶ್ರೀ ಕಟ್ಟಮನಿ, ದೇವೆಂದ್ರ ತಳವಾರ, ಮಲ್ಲಪ್ಪ ಮುದ್ದಾ, ಗ್ರಾಪಂ. ಅಧ್ಯಕ್ಷೆ ಮಲ್ಕಪ್ಪ ಮುದ್ದಾ, ಮಾಜಿ ಅಧ್ಯಕ್ಷ ಸುಷ್ಮಾ ಮರಲಿಂಗ, ಸುಭಾಶ್ಚಂದ್ರ ವೇದಿಕೆ ಮೇಲೆ ಇದ್ದರು.
ಇದೇ ಸಂದರ್ಭದಲ್ಲಿ ನರೇಂದ್ರ ಬಾಬು ಶರ್ಮಾ (ಗುರುಸ್ವಾರ್ವಭೌಮ), ಡಾ.ಚನ್ನರುದ್ರಮುನಿ ಶಿವಾಚಾರ್ಯರು (ಪ್ರವಚನ ಭಾಸ್ಕರ), ಚನ್ನಬಸವ ಶರಣರಿಗೆ (ಕಾಯಕಯೋಗಿ), ಸೈ.ಮುಸ್ತಫಾ ಖಾದ್ರಿ (ಭಾವೈಕ್ಯತೆ ರತ್ನ), ಸೋಮಶೇಖರ ಶಿವಾಚಾರ್ಯರು (ದಾಸೋಹ ರತ್ನ) ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಪ್ರಿಯದರ್ಶಿನಿ, ಪ್ರತಿಕಾ ಅವರಿಂದ ಭರತ ನಾಟ್ಯ ಪ್ರದರ್ಶನ, ಮೆಲೋಡಿಸ್ ಆರ್ಕೇಸ್ಟ್ರಾ ವತಿಯಿಂ ಸಂಗೀತ, ಜುಗುಬಂದಿ ಕಾರ್ಯಕ್ರಮ ನಡೆಯಿತು.
ಸಂಜೆ ಭಕ್ತರ ಜಯಘೋಷದೊಂದಿಗೆ ಭವ್ಯ ರಥೋತ್ಸವ, ನಂತರ ಲಕ್ಷ ದೀಪೋತ್ಸವ ನಡೆಯಿತು.
ಭಗವಂತ ಬೆಣ್ಣೂರ ಸ್ವಾಗತಿಸಿದರು. ಎಸ್.ಎಂ. ಭಕ್ತಕುಂಬಾರ ನಿರೂಪಿಸಿದರು. ಬಸವರಾಜ ಹೆರೂರ ವಂದಿಸಿದರು. ಸಮಾಜದ ಮುಖಂಡರಾದ ಮಲ್ಲಿಕಾರ್ಜುನ ಇಟಗಿ, ಪರಮಾನಂದ ಯಲಗೊಡಕರ್, ಕಾಶಣ್ಣ ಚನ್ನೂರ, ದೇವೆಂದ್ರ ಯಲಗೂಡ, ಬಿಜೆಪಿ ಕಾರ್ಯದರ್ಶಿ ಸದಾನಂದ ಕುಂಬಾರ ಸೇರಿದಂತೆ ಸಾವಿರಾರು ಜನ ಪಾಲ್ಗೊಂಡಿದ್ದರು.