ಗುಂಡಿ ಮುಚ್ಚಿ ಅಪಾಯ ತಡೆದ ಗ್ರಾಪಂ

ಸೇಡಂ,ನ,06: ತಾಲೂಕಿನ ಮಳಖೇಡ ಗ್ರಾಮದ ಅಮೋಘವರ್ಷ ನೃಪತುಂಗ ಕೋಟೆಗೆ ತೆರಳುವ ರಸ್ತೆಯಲ್ಲಿ ಸುಮಾರು ವರ್ಷಗಳಿಂದ ಚಿಕ್ಕ ತೆಗ್ಗು ಗುಂಡಿಯಿಂದ ಜಮೀನಿಗೆ ತೆರಳುವ ರೈತರಿಗೆ, ದ್ವಿಚಕ್ರ, ತ್ರಿಚಕ್ರ, ಇನ್ನಿತರ ವಾಹನ ಸವಾರರಿಗೆ ತೊಂದರೆಯಾಗುತ್ತಿದ್ದು “ಗುಂಡಿ ಮುಚ್ಚದೇ ಗ್ರಾಮ ಪಂಚಾಯತ ನಿರ್ಲಕ್ಷಿಸುತ್ತಿದೆ” ಎಂದು ಸಂಜೆವಾಣಿ ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾದ ನಂತರ ಎಚ್ಚೆತ್ತುಕೊಂಡ ಗ್ರಾಮ ಪಂಚಾಯತಿಯು ಕಬ್ಬಿಣದ ರಾಡುಗಳಿಂದ ಗುಂಡಿ ಮುಚ್ಚುವಂತಹ ವ್ಯವಸ್ಥೆ ಮಾಡಿದು ಅಪಾಯ ತಡೆಯುವಂತಹ ಪ್ರಯತ್ನ ಗ್ರಾಮ ಪಂಚಾಯತಿ ಮಾಡಿದ್ದ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.